ಅರುಣನಾರಾಯಣ ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
 
wikifying
೧ ನೇ ಸಾಲು:
'''ಬಿ ಅರುಣನಾರಾಯಣ ಶಾಸ್ತ್ರಿ''' (೧೯೪೮ - ಆಗಸ್ಟ್ ೬, ೨೦೧೧) ಹಿರಿಯ ಪತ್ರಕರ್ತರು. [[ಲೋಕ ಶಿಕ್ಷಣ ಟ್ರಸ್ಟ್]] ಸಂಸ್ಥೆಯ ಕನ್ನಡ ಮಾಸಿಕ [[ಕಸ್ತೂರಿ|'ಕಸ್ತೂರಿ'ಯಲ್ಲಿ]] ಸುಮಾರು ಹತ್ತು ವರ್ಷಗಳ ಕಾಲ ಸಂಪಾದಕರಾಗಿದ್ದರು.
 
==ವೃತ್ತಿ ಜೀವನ==
ಮೂಲತಃ [[ಕಾಸರಗೋಡು|ಕಾಸರಗೋಡಿನ]] ಬೋನಂತ ಕೋಡಿಯವರು. ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿ ಉಡುಪಿಯ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಅಲ್ಪ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. [[ಚೆನ್ನೈ|ಚೆನ್ನೈನಿಂದ]] ಸೋವಿಯತ್ ರಾಯಭಾರಿ ಕಚೇರಿ ಪ್ರಕಟಿಸುತ್ತಿದ್ದ 'ಸೋವಿಯತ್ ಲ್ಯಾಂಡ್' ಪತ್ರಿಕೆಯ ಪ್ರಧಾನ ತರ್ಜುಮೆದಾರರಾಗಿ ಕಾರ್ಯ ನಿರ್ವಹಿಸಿದರು.
'ಪ್ರಜಾಪ್ರಭುತ್ವ', 'ವಿಶಾಲ ಕರ್ನಾಟಕ'ಗಳಲ್ಲಿ ಉಪಸಂಪಾದಕರಾಗಿದ್ದರು. [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದ]] ಕನ್ನಡ ಜ್ಞಾನಕೋಶ 'ಜ್ಞಾನ ಗಂಗೋತ್ರಿ'ಯ ಉಪಸಂಪಾದಕರಾಗಿದ್ದರು.
 
===ಲೋಕ ಶಿಕ್ಷಣ ಟ್ರಸ್ಟ್===
ಅರುಣನಾರಾಯಣ ಶಾಸ್ತ್ರಿಯವರು ೧೯೯೧ರಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಸೇರಿದರು. [[ಸಂಯುಕ್ತ ಕರ್ನಾಟಕ|ಸಂಯುಕ್ತ ಕರ್ನಾಟಕದ]] ಸಾಪ್ತಾಹಿಕ ಸೌರಭದ ಉಪಸಂಪಾದಕರಾಗಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ೨೦೦೧ರಲ್ಲಿ ಇವರು ಕಸ್ತೂರಿ ಮಾಸಿಕದ ಸಂಪಾದಕರಾಗಿ ನಿಯುಕ್ತರಾದರು.
[[ವರ್ಗ: ಪತ್ರಕರ್ತರು]]