ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
 
ಅನಂತರ ಅವರ ಪದ್ಮಿನಿ ಪಿಕ್ಚರ್ಸ್‌‍ನಲ್ಲಿ [[ಕಿತ್ತೂರು ಚೆನ್ನಮ್ಮ(ಚಲನಚಿತ್ರ)|ಕಿತ್ತೂರು ಚೆನ್ನಮ್ಮ]], [[ಮಕ್ಕಳ ರಾಜ್ಯ]],[[ಗಾಳಿ ಗೋಪುರ]], [[ಚಿನ್ನದ ಗೊಂಬೆ]], [[ಎಮ್ಮೆ ತಮ್ಮಣ್ಣ]], [[ಬೀದಿ ಬಸವಣ್ಣ]], [[ಅಮ್ಮ]], [[ಶ್ರೀ ಕೃಷ್ಣದೇವರಾಯ]], [[ಮಾಲತಿ ಮಾಧವ]], [[ಒಂದು ಹೆಣ್ಣಿನ ಕಥೆ]] ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು.
ಇವುಗಳಲ್ಲಿ [[ಸ್ಕೂಲ್ ಮಾಸ್ಟರ್]] ಮತ್ತು [[ಕಿತ್ತೂರು ಚೆನ್ನಮ್ಮ(ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು."ಶ್ರೀ ಕೃಷ್ಣದೇವರಾಯ" ಚಿತ್ರಕ್ಕೆ '''ಫಿಲಂ ಫೇರ್''' ಪ್ರಶಸ್ತಿ ದೊರಕಿತು.ಇದೇ ಚಿತ್ರದಲ್ಲಿ ಬಿ.ಆರ್.ಪಂತುಲು ಅವರು ನಿರ್ವಹಿಸಿದ '''ತಿಮ್ಮರಸು'''ವಿನ ಪಾತ್ರಕ್ಕೆ ಶ್ರೇಷ್ಥ ನಟ ಪ್ರಶಸ್ತಿ ದೊರೆಯಿತು.ಶ್ರೀ ಕೃಷ್ಣದೇವರಾಯ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸಿದ್ದರು. ಅದು ಆ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್‌ಕುಮಾರ್ ಅವರಿಗೆ ನೀಡಬೇಕಿತ್ತು ಎನ್ನುವುದು ಅವರ ವಾದವಾಗಿತ್ತು.ಬಿ.ಆರ್.ಪಂತುಲು ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ನಾಲ್ಕು ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಚಿತ್ರೋದ್ಯಮಕ್ಕಾಗಿ ತಮ್ಮನ್ನೇ ತಾವು ತೇದುಕೊಂಡ ಮಹಾಪರುಷ. ಇವರು ಉದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಚಿತ್ರರಂಗವಿನ್ನೂ ಕುಂಟುತ್ತಿತ್ತು. ಮದ್ರಾಸಿನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕಬೇಕಾಗಿತ್ತು. ಇದನ್ನ ಮನಗಂಡ ಪಂತುಲು ತಮಿಳರೊಂದಿಗೇ ಕಲೆತು ಮೊಟ್ಟಮೊದಲಿಗೆ `ಮೊದಲ ತೇದಿ' ಚಿತ್ರ ನಿರ್ಮಿಸಿದರು. ಇದು ಸರ್ಕಾರಿ ನೌಕರನ ಬದುಕಿನ ಬವಣೆಯ ಸುತ್ತಲಿನದು. ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಾದ್ದು. ಚಿತ್ರ ಹಿಟ್ ಆಯ್ತು. ಧೈರ್ಯ ಬಂತು. ತಮಿಳಿನ ಒಡನಾಟದಲ್ಲಿದ್ದುಕೊಂಡೇ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು ಇದಿಷ್ಟೇ ಅಲ್ಲದೆ ರಾಜ್ ಕುಮಾರ್, ನರಸಿಂಹರಾಜು, ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲ್ ರಂತಹ ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟವರು. ರಾಜ್ ಕುಮಾರ್ ಗಾಗಿಯೇ ಗಾಳಿಗೋಪುರ, ಸಾಕುಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಚಿತ್ರಗಳನ್ನು ಮಾಡಿದ ಪಂತುಲು, ನರಸಿಂಹರಾಜು ಅವರಿಗಾಗಿಯೇ ಪ್ರತ್ಯೇಕ ಪಾತ್ರ ಸೃಷ್ಟಿಸಿ ಹಾಸ್ಯದ ಹೊಸ ಟ್ರ್ಯಾಕೊಂದನ್ನು ಅನಿವಾರ್ಯವಾಗಿ ಚಿತ್ರದಲ್ಲಿರುವಂತೆ ನೋಡಿಕೊಂಡವರು. ಹಾಗೆಯೇ ಇವರ ಸರಿಸುಮಾರು ಎಲ್ಲಾ ಚಿತ್ರಗಳಿಗೂ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶಕರಾಗಿದ್ದುದು ಒಂದು ವಿಶೇಷವೇ.ನಮನ
 
==ಅಂತ್ಯ==
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ