ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
ಭೂಮಿಯ ವಾತಾವರಣ ಅಥವಾ ವಾಯುಮಂಡಲವು, ಭೂಮಿಯು ತನ್ನ ಸುತ್ತಲೂ [[ಗುರುತ್ವಾಕರ್ಷಣೆ]]ಯಿಂದ ಸೆಳೆದಿಟ್ಟಿರುವ [[ಅನಿಲ]]ಗಳ ವಿಶಾಲ ಆವರಣ.ಭೂಮಿಯ ವಾತಾವರಣವು [[ಸೂರ್ಯ]]ನ [[ಅತಿನೇರಳೆ ಕಿರಣ]]ಗಳನ್ನು ಹೀರಿಕೊಳ್ಳುವದರಿಂದಲೂ,[[ಸೂರ್ಯ]]ನಿಂದ ಬರುವ [[ಉಷ್ಣತೆ]]ಯನ್ನು ಉಳಿಸಿಕೊಂಡು([[ಹಸಿರುಮನೆ ವಿದ್ಯಮಾನ]] ಅಥವಾ ಗ್ರೀನ್ ಹೌಸ್ ಎಫೆಕ್ಟ್)ಭೂಮಿಯ ಮೇಲ್ಮೈಯನ್ನು ಬೆಚ್ಚಗಿಡುವದಿಂದಲೂ ಮತ್ತು [[ಹಗಲು]], [[ರಾತ್ರಿ]]ಗಳಲ್ಲಿ [[ತಾಪಮಾನ]]ವು ತೀರಾ ಏರಿಳಿಕೆಯಾಗದಂತೆ ನಿಯಂತ್ರಿಸುವುದರಿಂದಲೂ [[ಭೂಮಿಯ ಜೀವರಾಶಿ]]ಗಳನ್ನು ರಕ್ಷಿಸುತ್ತದೆ.
ಭೂಮಿಯ ವಾತಾವರಣದ [[ತೂಕ]]ವು ಸುಮಾರು ಐದು ಕ್ವಾಡ್ರಿಲಿಯನ್ (೫೦೦೦೦೦೦೦೦೦೦೦೦೦೦)ಟನ್ ಗಳಷ್ಟು. ಈ ತೂಕದ ಮುಕ್ಕಾಲು ಭಾಗದಷ್ಟು ಭಾರವು ಭೂಮಿಯ ಮೇಲ್ಮೈಯಿಂದ ೧೧ ಕಿ.ಮೀ ವರೆಗಿನ ವಾಯುವಿನಿಂದಾಗುತ್ತದೆ.ಮೇಲ್ಮೈಯಿಂದ ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದ ಸಾಂದ್ರತೆಯು ಕ್ಷೀಣಿಸುತ್ತಾ, ವಾತಾವರಣವು ತೆಳ್ಳಗಾಗುತ್ತಾ, ಇನ್ನೂ ಮೇಲಕ್ಕೆ ಹೋದಂತೆ ನಿಧಾನವಾಗಿ [[ಅಂತರಿಕ್ಷ]]ವಾಗಿ ಮಾರ್ಪಡುತ್ತದೆ.
ವಾತಾವರಣಕ್ಕೂ, ಅಂತರಿಕ್ಷಕ್ಕೂ ಯಾವುದೇ ನಿಶ್ಚಿತ ಗಡಿಯಿಲ್ಲ.[[
==ಸಂಯೋಜನೆ==
[[Image:Atmosphere gas proportions.svg|thumb|right|ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.]]
|