ಪ್ರಾರ್ಥನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರಾರ್ಥನೆ
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[ಚಿತ್ರ:Bangladesh_Prayer.jpg|thumb]] super.
 
 
'''ಪ್ರಾರ್ಥನೆ''' ಎಂದರೆ ಮನುಷ್ಯನು ಪರಮಾತ್ಮನಲ್ಲಿ ತನ್ನ ಕಷ್ಟ ಸುಖಗಳನ್ನು ತೋಡಿಕೊಂಡು ಅವನ ಅನುಗ್ರಹವನ್ನು ಬೇಡಿಕೊಳ್ಳುವ ಕ್ರಿಯೆ (ಪ್ರೇಯರ್). ಪ್ರಕೃತಿಯ ಅದ್ಭುತಶಕ್ತಿಗಳಾದ ಗಾಳಿ, ನೀರು, ಸೂರ್ಯ, ಚಂದ್ರ, ಸಿಡಿಲು, ಬೆಂಕಿ ಮೊದಲಾದುವನ್ನು ಆದಿಮಾನವ ಪೂಜಿಸುತ್ತಿದ್ದನಲ್ಲದೆ, ಅವುಗಳಿಂದ ತನಗಾಗುವ ಅಪಾರ ಹಾನಿಯನ್ನು ನಿವಾರಿಸಿಕೊಳ್ಳಲು, ಅವುಗಳ ಅಭಯಹಸ್ತವನ್ನು ಕೋರಲು ಅವನ್ನು ಪ್ರಾರ್ಥಿಸುತ್ತಿದ್ದುದುಂಟು. ಪ್ರಪಂಚದ ಎಲ್ಲ ಧರ್ಮಗಳಲ್ಲೂ ಪ್ರಾರ್ಥನೆಗೆ ಒಂದು ವಿಶಿಷ್ಟ ಸ್ಥಾನವಿದೆ. ಹಿಂದೂ ಪಾರಸಿ ಯಹೊದ್ಯ ಕ್ರೈಸ್ತ ಇಸ್ಲಾಂ ಇಂಥ ಎಲ್ಲ ಧರ್ಮಗಳೂ ಪ್ರಾರ್ಥನೆಗೆ ಕೇಂದ್ರಸ್ಥಾನವೆನ್ನಿತ್ತಿವೆ. ಅತ್ಯಂತ ಪ್ರಾಚೀನ ಗ್ರಂಥವಾದ ವೇದದಲ್ಲಿ ದೇವತೆಗಳನ್ನು ಕುರಿತ ಪ್ರಾರ್ಥನೆಗಳಿಗೇ ಒಂದು ಪ್ರತ್ಯೇಕ ವಿಭಾಗವಿದೆ. ಸಂಕಲನರೂಪವಾದ ಈ ಪ್ರಾರ್ಥನಾ ಅಥವಾ ಮಂತ್ರಭಾಗವನ್ನು ಸಂಹಿತೆ ಎಂದು ಕರೆಯುತ್ತಾರೆ. ಸಂಹಿತೆಯಲ್ಲಿ ಇಂದ್ರ, ವರುಣ ಇತ್ಯಾದಿ ದೇವತೆಗಳನ್ನು ಕುರಿತ ಪ್ರಾರ್ಥನಾ ಮಂತ್ರಗಳಿವೆ. ಅಲ್ಲದೆ ಅದರಲ್ಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿರುವ ಗಾಯತ್ರೀ ಮಂತ್ರವಿದೆ. ಭಕ್ತ ತನ್ನ ಬುದ್ಧಿಯ ಪ್ರಚೋದನೆಗಾಗಿ ಜ್ಯೋತಿರ್ಮಯವಾದ ಪರದೇವತೆಯನ್ನು ಕುರಿತು ಈ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. ವೇದದ ಅಂತಿಮ ಭಾಗವಾದ ಉಪನಿಷತ್ತುಗಳಲ್ಲೂ, ಆ ಕಾಲದಲ್ಲಿ ವೈಚಾರಿಕ ಮನೋಭಾವ ವಿಶೇಷವಾಗಿ ಬೆಳೆದಿದ್ದರೂ ಅಲ್ಲಲ್ಲಿ ಉತ್ಕøಷ್ಟ ಪ್ರಾರ್ಥನೆಗಳು ಕಂಡುಬರುತ್ತವೆ. ಪ್ರಸಿದ್ಧವಾಗಿರುವ ಅಸತ್ಯದಿಂದ ಸತ್ಯದ ಕಡೆಗೆ, ತಮಸ್ಸಿನಿಂದ ಜ್ಯೋತಿಯ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನನ್ನನ್ನು ತಲುಪಿಸು ಎಂಬುದು ಬೃಹದಾರಣ್ಯಕೋಪನಿಷತ್ತಿನಲ್ಲಿ ಬರುವ ಪ್ರಾರ್ಥನೆ. ಅಲ್ಲದೆ ಪ್ರತಿ ಉಪನಿಷತ್ತಿನ ಆದ್ಯಂತಗಳಲ್ಲೂ ಪ್ರಾರ್ಥನಾ ಮಂತ್ರಗಳಿವೆ. ಇಷ್ಟೆ ಅಲ್ಲದೆ ಮುಂದಿನ ವೈದಿಕ ಸಂಪ್ರದಾಯದ ಇತಿಹಾಸ, ಪುರಾಣ, ಆಗಮಗಳಲ್ಲೂ ಪ್ರಾರ್ಥನೆಗಳು ಹೇರಳವಾಗಿವೆ. ಬೌದ್ಧ ಮತ್ತು ಜೈನಧರ್ಮಗಳಲ್ಲೂ ಬುದ್ಧ ಮತ್ತು ತೀರ್ಥಂಕರರನ್ನು ಕುರಿತ ಪ್ರಾರ್ಥನೆಗಳು ವಿಶೇಷ ಸ್ಥಾನ ಪಡೆದಿವೆ. ಬುದ್ದಂ ಶರಣಂ ಗಚ್ಛಾಮಿ ಎಂದು ಹೇಳಿಕೊಂಡು ಬೌದ್ಧ ಬುದ್ಧನಲ್ಲಿ ತನ್ನ ಆತ್ಮಸಮರ್ಪಣೆಯನ್ನು ಮಾಡಿಕೊಳ್ಳುತ್ತಾನೆ. ಕ್ರೈಸ್ತಮತ ಸ್ಥಾಪಕನಾದ ಏಸುಕ್ರಿಸ್ತ ತನ್ನ ಅನುಯಾಯಿಗಳು ಮಾಡಬೇಕಾದ ಪ್ರಾರ್ಥನೆ ಹೇಗಿರಬೇಕೆಂದು ಈ ರೀತಿ ರೂಪಿಸುತ್ತಾನೆ: `ಹೇ ದೇವ, ನಿನ್ನ ನಾಮ ಪವಿತ್ರವಾದುದು. ನಿನ್ನ ರಾಜ್ಯ ನಮ್ಮ ಜೀವನದಲ್ಲಿ ಸ್ಥಾಪಿತವಾಗಲಿ, ನಮ್ಮ ಅಪರಾಧವನ್ನು ಕ್ಷಮಿಸು. ನಮ್ಮನ್ನು ಪ್ರಲೋಭನಗಳಿಂದ ದೂರ ಮಾಡು. ನಿನ್ನ ಸಂಕಲ್ಪ ನಡೆಯಲಿ. ಕುರಾನಿನ ಮೊದಲ ಪದ್ಯವೇ ಉತ್ಕøಷ್ಟ ಪ್ರಾರ್ಥನೆಯಾಗಿದೆ. `ದಯಾಮಯನಾದ ದೇವನೇ ನೀನು ಜಗತ್ತಿನ ಸೃಷಿಕರ್ತ. ನೀನು ಜೀವಿಗಳ ಪುಣ್ಯಪಾಪಗಳನ್ನು ತೀರ್ಮಾನಿಸುವವನು. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸು ಎಂಬುದು ಆ ಪದ್ಯದ ಸಾರಾಂಶ. ಹೀಗೆ ಮಾನವನ ಅಂತಿಮ ಆಶೋತ್ತರಗಳನ್ನು ಅತ್ಯಂತ ಉತ್ಕøಷ್ಟ ರೂಪದಲ್ಲಿ ಭಗವಂತನ ಮುಂದೆ ಇಡುವ ಪ್ರಾರ್ಥನೆಗಳು ಎಲ್ಲ ಧರ್ಮಗಳಲ್ಲೂ ಕಂಡುಬರುತ್ತವೆ.
"https://kn.wikipedia.org/wiki/ಪ್ರಾರ್ಥನೆ" ಇಂದ ಪಡೆಯಲ್ಪಟ್ಟಿದೆ