ವಿಭೀಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''''ವಿಭೀಷಣ''''' ಪೌರಾಣಿಕ ಮಹಾಕಾವ್ಯ ರಾಮಾಯಣದಲ್ಲಿ ಲಂಕೆಯ ರಾಜನಾಗಿದ್ದನು....
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
'''''ವಿಭೀಷಣ''''' ಪೌರಾಣಿಕ ಮಹಾಕಾವ್ಯ [[ರಾಮಾಯಣ]]ದಲ್ಲಿ [[ಲಂಕೆ]]ಯ ರಾಜನಾಗಿದ್ದನು. ಅವನು ಲಂಕೆಯ [[ರಾಕ್ಷಸ]] ರಾಜ [[ರಾವಣ]]ನ ಕಿರಿಯ ಸಹೋದರ. ರಾಕ್ಷಸನಾದರೂ, ವಿಭೀಷಣನು ಉದಾತ್ತ ಗುಣದವನಾಗಿದ್ದನು ಮತ್ತು [[ಸೀತೆ]]ಯನ್ನು ಅಪಹರಿಸಿದ್ದ ರಾವಣನಿಗೆ ಅವಳನ್ನು ಅವಳ ಗಂಡಪತಿ [[ರಾಮ]]ನಿಗೆ ಕ್ರಮಬದ್ಧ ರೀತಿಯಲ್ಲಿ ಮತ್ತು ಕೂಡಲೇ ಹಿಂತಿರುಗಿಸುವಂತೆ ಸಲಹೆ ನೀಡಿದನು. ಅವನ ಸಹೋದರ ಅವನ ಸಲಹೆಯನ್ನು ಕೇಳದಿದ್ದಾಗ, ವಿಭೀಷಣನು ರಾಮನ ಸೈನ್ಯವನ್ನು ಸೇರಿದನು. ನಂತರ, ರಾಮನು ರಾವಣನನ್ನು ಪರಾಭವಗೊಳಿಸಿದ ಮೇಲೆ, ರಾಮನು ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಮಾಡಿದನು.
 
ವಿಭೀಷಣನು [[ಸಾತ್ವಿಕ]] ಮನಸ್ಸು ಮತ್ತು ಹೃದಯ ಹೊಂದಿದ್ದನು. ಬಾಲ್ಯದಿಂದಲೇ, ಅವನು ತನ್ನ ಎಲ್ಲ ಸಮಯವನ್ನು [[ತಪ್ಪುಕಳೆತ|ದೇವರ ಧ್ಯಾನದಲ್ಲಿ ತೊಡಗಿಸುತ್ತಿದ್ದನು]]. ಅಂತಿಮವಾಗಿ, [[ಬ್ರಹ್ಮ]]ನು ಪ್ರತ್ಯಕ್ಷವಾಗಿ ಅವನಿಗೆ ಬೇಕಾದ ಯಾವುದೇ ವರವನ್ನು ನೀಡಲು ಒಪ್ಪಿದನು. ತನಗೆ ಕೇವಲ ಭಗವಂತನ ಚರಣಕಮಲದಲ್ಲಿ ಮನಸ್ಸು ಸ್ಥಿರವಾಗಬೇಕು ಎಂದು ವಿಭೀಷಣನು ಹೇಳಿದನು. ತನಗೆ ಎಲ್ಲ ಕಾಲದಲ್ಲೂ ಭಗವಂತನ ಚರಣದಲ್ಲಿ ಇರುವಂಥ ಶಕ್ತಿ ನೀಡಬೇಕು ಮತ್ತು [[ವಿಷ್ಣು]]ವಿನ ದರ್ಶನ ಸಿಗಬೇಕು ಎಂದು ಅವನು ಪ್ರಾರ್ಥಿಸಿದನು. ಈ ಪ್ರಾರ್ಥನೆ ನೆರವೇರಿತು ಮತ್ತು ಅವನು ತನ್ನ ಎಲ್ಲ ಸಂಪತ್ತು ಮತ್ತು ಕುಟುಂಬವನ್ನು ತ್ಯಜಿಸಲು ಸಮರ್ಥನಾದನು ಮತ್ತು [[ಅವತಾರ]]ನಾದ ರಾಮನನ್ನು ಸೇರಿದನು.
"https://kn.wikipedia.org/wiki/ವಿಭೀಷಣ" ಇಂದ ಪಡೆಯಲ್ಪಟ್ಟಿದೆ