ಮಿಲ್ಖಾ ಸಿಂಗ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭ ನೇ ಸಾಲು:
*ಆಗ ಅವರು ತಮ್ಮ ವೇಗವನ್ನು ತಪ್ಪಾಗಿ ಲೆಕ್ಕಿಸಿ, ಓಡುವ ಗತಿಯನ್ನು ತುಸು ನಿಧಾನಿಸುವುದರ ಮೂಲಕ ತಮ್ಮ ಜೀವಾವಧಿಯ ಹಾಗೂ ಭಾರತದ ಅಥ್ಲೆಟಿಕ್ಸ್‌ ಇತಿಹಾಸದ ದೃಷ್ಟಿಯಿಂದ, ಅಪಾರ ತಪ್ಪೆಸಗಿದರು. ಉಳಿದ ದೂರವನ್ನು ಕ್ರಮಿಸಲು ತಮ್ಮ ಜೀವಾವಧಿಯಲ್ಲೇ ಶತಪ್ರಯತ್ನ ಮಾಡಿದರೂ, ಇತರೆ ಪ್ರತಿಸ್ಪರ್ಧಿಗಳು ಮಿಲ್ಖಾ ಸಿಂಗ್‌ರನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿದ್ದರು.
*ಈ ಸ್ಪರ್ಧೆಯು ಅದೆಷ್ಟು ಜಟಿಲವಾಗಿತ್ತೆಂದರೆ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ಅಂತಿಮ ಸುತ್ತಿನ ಆರಂಭ ಹಂತದಲ್ಲಿ ಎಲ್ಲರಿಗಿಂತಲೂ ಮುಂದಿದ್ದ ಮಿಲ್ಖಾ ಸಿಂಗ್‌, ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ವ್ಯತ್ಯಾಸವು ನಗಣ್ಯ ಎನ್ನುವಷ್ಟು ಕಡಿಮೆಯಿತ್ತು.
*ಮೊದಲ ಮೂರು ಸ್ಥಾನ ಪ್ರಕಟಿಸುವುದನ್ನು ವಿಳಂಬಿತಗೊಳಿಸಲಾಯಿತು. ಈ ಓಟವನ್ನು ಬಹಳಷ್ಟು ಬಾರಿ ವೀಡಿಯೊ ಚಿತ್ರಣವನ್ನು ಗಮನಿಸಿ ನಿರ್ಣಯಿಸಲಾಯಿತು. ಇದರಿಂದಾಗಿ, ಸ್ವರ್ಣಪದಕ ಗೆಲ್ಲಬಹುದೆಂಬ ನಿರೀಕ್ಷೆ ಹೊತ್ತಿದ್ದ ಮಿಲ್ಖಾ ಸಿಂಗ್‌ಗೆ ಕಂಚಿನ ಪದಕವು ಸೂಜಿನ ಮೊನಚಿನ ಷ್ಟು ಅಂತರದಲ್ಲಿ ಕೈತಪ್ಪಿತು.
*ಇದುವರೆಗೂ, ಭಾರತೀಯ ಒಲಿಂಪಿಕ್ಸ್‌ ಇತಿಹಾಸದಲ್ಲಿ ಅಥ್ಲೀಟ್‌ ಒಬ್ಬ ಪದಕವೊಂದರ ಅತಿಸನಿಹ ಬಂದಿದ್ದು ಮಿಲ್ಖಾ ಸಿಂಗ್‌. 1984ರಲ್ಲಿ ಲಾಸ್‌ ಏಂಜೆಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪಿ. ಟಿ. ಉಷಾ ಮಿಲ್ಖಾ ಸಿಂಗ್‌ರಿಗಿಂತಲೂ ಉತ್ತಮ ಸಾಧನೆ ಮಾಡಿದರು. 400 ಮೀಟರ್‌ ಹರ್ಡ್‌ಲ್ಸ್‌ ಸ್ಪರ್ಧೆಯ ಕಂಚಿನ ಪದಕ ಕೇವಲ ಸೆಕೆಂಡಿಗೆ 1/100ರ ಅಂತರದಲ್ಲಿ ಉಷಾ ಕೈತಪ್ಪಿತು.
 
==ನಿವೃತ್ತಿಯ ನಂತರದ ಜೀವನ==
"https://kn.wikipedia.org/wiki/ಮಿಲ್ಖಾ_ಸಿಂಗ್‌" ಇಂದ ಪಡೆಯಲ್ಪಟ್ಟಿದೆ