ಮೊಹರೆ ಹಣಮಂತರಾಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Fixing double redirect to ಮೊಹರೆ ಹನುಮಂತರಾವ್ಅಂದಗೊಳಿಸುವ ಬದಲಾವಣೆಗಳು
ಟ್ಯಾಗ್: Redirect target changed
 
೧ ನೇ ಸಾಲು:
#redirectREDIRECT [[ಮೊಹರೆ ಹನುಮಂತರಾಯರುಹನುಮಂತರಾವ್]]
 
ಜನನ - ೧೨ ನವಂಬರ-೧೮೯೨
ದೇವರ ಹಿಪ್ಪರಗಿ ವಿಜಾಪುರ ಜಿಲ್ಲೆ
ತಂದೆ - ರಾಘಣ್ಣ ನಾಯಕ
ತಾಯಿ - ಲಕ್ಷ್ಮೀಬಾಯಿ
೧೭ ನೇ ಸಾಲು:
೧೯೧೪-೧೯೧೮ ಪ್ರಥಮ ಮಹಾಯುಧ್ಧದ ಕಾಲ,ದೇಶ ಸೇವೆಗೆ ತಮ್ಮ ಸೇವೆ ಮುಡುಪಾಗಿಡಲು ರಾಷ್ಟ್ರೀಯ ನಾಯಕರು ಪುಣೆ ನಗರದಲ್ಲಿ ತಮ್ಮ ಕ್ರಾಂತಿಕಾರಿ ಭಾಷಣಗಳನ್ನು ನೀಡಿ ಯುವಕರನ್ನು ಬಡಿದೆಬ್ಬಿಸುವ ಪ್ರಮುಖರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ ,ಮದನ ಮೊಹನ ಮಾಲವೀಯ , ಗೋಪಾಲಕೃಷ್ಣ ಗೋಖಲೆ ,ಬಿಪಿನ ಚಂದ್ರ ಪಾಲ , ಮತ್ತಿತರರು.ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಒಪ್ಪಿಗೆ ಪತ್ರ ಪಡೆದು ಭಾಷಣಗಳಲ್ಲಿ ಭಾಗವಹಿಸುತ್ತಿರುವದು ಸಹಜವಾಗಿತ್ತು.ಭಾಷಣಗಳು ,ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನ ಗಳಿಗೆ ಮಾರು ಹೋಗುವದು ಸರ್ವೆ ಸಾಮಾನ್ಯವಾದ ಕಾಲವದು. ಮೊಹರೆ ಹಣಮಂತರಾಯರು ಇದಕ್ಕೆ ಹೊರತಾಗಿರಲಿಲ್ಲ ವೆಂದರೆ ಅತಿಶಯ ಯೋಕ್ತಿಯಾಗಲಾರದು.ಮೊಹರೆ ಹಣಮಂತರಾಯರು ೧೯೧೮ ರಲ್ಲಿ ಗಣೀತ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ಆರ್ಟ್ಸನಲ್ಲಿ ತೇರ್ಗಡೆಯಾದನಂತರ ಮುಂಬೈ ಎಲ್ಫಿನಸ್ಟನ ಕಾಲೇಜು ಸೇರಿ ಜ್ಯುನೀಯರ ಮತ್ತು ಸೀನಿಯರ ಬಿ ಎ ಕ್ಲಾಸುಗಳನ್ನು ಮುಗಿಸಿದರು.೧೯೨೧ರಲ್ಲಿ ಬಿ ಎ ಪರೀಕ್ಷೆಗೆ ಆವೇದನ ಪತ್ರವನ್ನು ಸಲ್ಲಿಸಿದರು.
೧೯೨೦ರಲ್ಲಿ ಬಾಲಗಂಗಾಧರ ತಿಲಕರ ನಿಧನಾನಂತರ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೆ ಬದಲಿಸಿತು ಎನ್ನುವದು ಗಮನಾರ್ಹ ಅಂಶ.ಸ್ವಾತಂತ್ರ್ಯ ಹೋರಾಟದ ಮುಂದಾಳತ್ವವನ್ನು ಮಹಾತ್ಮಾ ಗಾಂಧೀಜಿಯವರು ವಹಿಸಿಕೊಂಡರು.೧೯೧೮ ರಲ್ಲಿ ಪಂಜಾಬದಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಭಂದಿಸಿದಂತೆ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಆಂದೋಲನಕ್ಕೆ ಕರೆ ಕೊಟ್ಟರು.ವಿದ್ಯಾರ್ಥಿಗಳು ಶಾಲೆ ಕಾಲೇಜು ಬಿಟ್ಟು ಹೊರಬರಬೇಕೆಂದು ಮಹಾತ್ಮಾ ಗಾಂಧೀಜಿಯವರು ಕರೆ ಇತ್ತರು. ಸ್ವಾರ್ಥ ತ್ಯಾಗ ದೇಶಪ್ರೇಮ ಮೊಹರೆಯವರನ್ನು ಬಡಿದೆಬ್ಬಿಸಿತು. ಆ ಕರೆಗೆ ಓಗೊಟ್ಟು ಮೊಹರೆ ಹಣಮಂತರಾಯರು ಬಿ ಎ ಪರೀಕ್ಷೆಯನ್ನು ತಗೆದುಕೊಳ್ಳದೆ ಅಸಹಕಾರ ಚಳುವಳಿಗೆ ಧುಮುಕಿದರು.೧೯೨೧ ರಲ್ಲಿ ಬಿ ಎ ಪರೀಕ್ಷೆ ಯನ್ನು ಬರೆಯದೆ ಮುಂಬೈ ಯಿಂದ ಹಣಮಂತರಾಯರು ವಿಜಾಪುರಕ್ಕೆ ಮರಳಿ ಬಂದರು. ಹಣಮಂತರಾಯರು ವಕೀಲರಾಗಬೇಕೆಂಬ ಹಂಬಲ ರಾಘಣ್ಣ ನಾಯಕರಿಗಿತ್ತು.ಖಾದಿ ಬಟ್ಟೆ ತೊಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಹಣಮಂತರಾಯರು ಧೀರೋದಾತ್ತ ಜೀವಿಗಳು. ಪತ್ರಿಕೆಗಳ ಮಹತ್ವವನ್ನು ಅರಿತ ಹಣಮಂತರಾಯರು
ಭಾರತೀಯ ಕಾಂಗ್ರೆಸ ಬೆಳವಣಿಗೆ ಹಾಗು ಸ್ವಾತಂತ್ರ್ಯ ಚಳುವಳಿಗೆ ಪ್ರೇರಕವಾದ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದರು.
ವಿಜಾಪುರದಲ್ಲಿ ಕೌಜಲಗಿ ಶ್ರೀನಿವಾಸರಾವ,ಜಯರಾವ ದೇಶಪಾಂಡೆ, ಕೌಜಲಗಿ ಹಣಮಂತರಾವ, ತಿಳಗೂಳ ರಂಗರಾವ, ಮತ್ತಿತರರು ಮಹಾತ್ಮಾ ಗಾಂಧೀಜಿಯವರ ಅಸಹಕಾರ ಆಂದೋಳನ ಕರೆಗೆ ಓಗೊಟ್ಟು ವಕೀಲಿ ವೃತ್ತಿಗೆ ತಿಲಾಂಜಲಿಯನ್ನಿತ್ತು ದೇಶಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಡ ಮಹನೀಯರ ಜೆತೆ ಒಡಗೂಡಿದರು ಮೊಹರೆ ಹಣಮಂತರಾಯರು.ಸುಮಾರು ಒಂದೂವರೆ ವರ್ಷಕಾಲ ವಿಜಾಪುರದ ರಾಷ್ಟ್ರೀಯ ಶಾಲೆಯೊಂದರಲ್ಲಿ ಇತಿಹಾಸವನ್ನು ಭೋಧಿಸುತ್ತಿದ್ದರು.ಇದರ ಜತೆಗೆ ಕರ್ನಾಟಕ ಕಾಂಗ್ರೆಸ ಸಮೀತಿಯ ಸದಸ್ಯರಾಗಿ ಕಾಂಗ್ರೆಸ ಬೆಳವಣಿಗೆಗೆ ಪ್ರೇರಣೆಯಾದರು.
 
'''===ಪತ್ರಿಕೆಗಳ ಹಿನ್ನೆಲೆ ಮತ್ತು ಕರ್ನಾಟಕ ವೈಭವ ==='''
ಪತ್ರಿಕಾ ಪ್ರಪಂಚದ ಹಿನ್ನೆಲೆಯನ್ನು ಹಿಂತಿರುಗಿ ನೋಡಿದಾಗ ಜೇಮ್ಸ ಅಗಸ್ಟ ಸ್ ಹಿಕ್ಕಿ ಪ್ರಕಟಿಸಿದ ಕಲಕತ್ತಾ ಜನರಲ್ ಅಡ್ವರ್ಟೈಸರ್ ಅಥವಾ ಬೆಂಗಾಲ ಗೆಜೆಟ್ ೧೭೮೦ ರಲ್ಲಿ ಪ್ರಾರಂಭವಾದ ಪ್ರಪ್ರಥಮ ಹೆಗ್ಗಳಿಕೆ ಗೆ ಪಾತ್ರವಾದ ಪತ್ರಿಕೆ.೧೮೪೩ ರಲ್ಲಿ "ಮಂಗಳೂರು ಸಮಾಚಾರ "
ಜರ್ಮನಿಯ ಧರ್ಮಪ್ರಚಾರಕ ಹರ್ಮನ್ ಮೊಗ್ಲಿಂಗ ಅವರಿಂದ ಪ್ರಾರಂಭವಾಯಿತು.೧೮೫೬ ರಲ್ಲಿ ಬೆಳಗಾವಿಯ " ಕರ್ನಾಟಕ ಮಿತ್ರ" ಮತ್ತು ಬಳ್ಳಾರಿಯ "ಕನ್ನಡ ವಾರ್ತಿಕ "೧೮೭೩ ರಲ್ಲಿ ಧಾರವಾಡದ "ಧಾರವಾಡ ವೃತ್ತ "೧೮೮೨-೧೮೮೩ ರಲ್ಲಿ ಮೈಸೂರಿನ "ಕರ್ನಾಟಕ ಪ್ರಕಾಶಿಕಾ" ಹಾಗು "ಕನ್ನಡ ಸುವಾರ್ತೆ" ೧೮೮೮ ರಲ್ಲಿ " ಸೂರ್ಯೋದಯ ಪ್ರಕಾಶಿಕ "೧೮೯೨ ರಲ್ಲಿ ಶ್ರೀ ಅಣ್ಣಾಜಿ ಗೋಪಾಳ ಜೋರಾಪುರ ಮತ್ತು ಗುಂಡೆರಾವ ರಾಮಚಂದ್ರರಾವ ಮಣ್ಣೂರಕರ ಇವರ ನೇತ್ರತ್ವದಲ್ಲಿ ವಿಜಾಪುರದ "ಕರ್ನಾಟಕ ವೈಭವ "ವಾರಪತ್ರಿಕೆ ಪ್ರಾರಂಭವಾಯಿತು. ಶ್ರೀ ಗುಂಡೆರಾವ ಅವರ ಸಂಪಾದಕತ್ವ ಹಾಗೂ ಶ್ರ್ರೀ ಅಣ್ಣಾಜಿ ಯವರು ವ್ಯವಸ್ಥಾಪಕರಾಗಿ ಕೆಲಸ್ ನಿರ್ವಹಿಸುತ್ತಿದ್ದರು. ಆಗಿನ ಲೇಖಕರಾದ ಕೆರೂರ ವಾಸುದೇವಾಚಾರ್ಯರು ,ಶ್ರೀ ಆಲೂರ ವೆಂಕಟರಾಯರು ,ನಾ ಶ್ರೀ ರಾಜಪುರೊಹಿತರು, ಶ್ರೀ ಜಿ ಆರ್ ಕುಲಕರ್ಣಿ ಮುಂತಾದವರು ಕರ್ನಾಟಕ ವೈಭವಕ್ಕೆ ಬರೆಯುತ್ತಿದ್ದರು. ಇತಿಹಾಸ ತಜ್ಞ ಮತ್ತು ಪತ್ರಿಕಾಕರ್ತ ಇಗ್ನೆಶಿಯಸ್ ವೆಲಂಟೈನೆ ಚಿರೊಲ ೧೯೦೭ ರಲ್ಲಿ ಸಂಪಾದಿಸಿದ "ಇಂಡಿಯ ಅನ್ ರೆಸ್ಟ " ಎಂಬ ಗ್ರಂಥದಲ್ಲಿ ಕರ್ನಾಟಕದ ಒಂದು ಉಗ್ರ ಕ್ರಾಂತಿಕಾರಿ ಪತ್ರಿಕೆ ಕರ್ನಾಟಕ ವೈಭವ ಎಂದು ಬಣ್ಣಿಸಿದ್ದಾರೆ.
ಕರ್ನಾಟಕ ವೈಭವದಲ್ಲಿ ಮೊಹರೆ ಹಣಮಂತರಾಯರು ಮತ್ತು ರೊದ್ದ ವ್ಯಾಸರಾಯರು ಬರೆದ ನಾಲ್ಕು ಲೇಖನಗಳಿಗಾಗಿ ನಾಲ್ವತ್ತು ಸಾವಿರ ರೂಪಾಯಿಗಳ ಜಾಮೀನು ಕೊಟ್ಟು ಮುದ್ರಣಾಲಯ ಮತ್ತು ಪತ್ರಿಕೆಯನ್ನು ಮಾರಾಟ ಮಾಡುವ ಪ್ರಸಂಗ ಒದಗಿ ಬಂತು.ದೇಶಪಾಂಡೆ ಜಯರಾಯರು ,ಮುದ್ದೇಬಿಹಾಳದ ದೊಡ್ಡಿಹಾಳ ಭಾವುರಾಯರು ಕೌಜಲಗಿ ತಿರುಮಲರಾಯರು ಮತ್ತು ಮೊಹರೆ ಹಣಮಂತರಾಯರು ಸೇರಿಕೊಂಡು ಕರ್ನಾಟಕ ವೈಭವ ಮುದ್ರಣಾಲಯವನ್ನು ಕೊಂಡುಕೊಂಡರು.ಸಂಪಾದಕ ದೇಶಪಾಂಡೆ ಜಯರಾಯರ ನಿಧನಾನಂತರ ರಂಗರಾವ ತಿಳಗೂಳರು ಸಂಪಾದಕತ್ವವನ್ನು ವಹಿಸಿಕೊಂಡರು.
ಮೊಹರೆ ಹಣಮಂತರಾಯರು ವಿದ್ಯಾರ್ಥಿದೆಸೆಯಲ್ಲಿ ಇರುವಾಗಲೆ ಅಂದರೆ ೧೯೧೫-೧೬ ರಲ್ಲಿ ಕರ್ನಾಟಕ ವೈಭವದಲ್ಲಿ ಇಂಗ್ಲೀಷನಲ್ಲಿ ಲೇಖನಗಳನ್ನು ಬರೆದಿದ್ದರು. ೧೯೨೨ ರಲ್ಲಿ ಧಾರವಾಡದ ಗೋಲಿಬಾರ ಕುರಿತಂತೆ "ಧಾರಾತೀರ್ಥವಾದ ಧಾರವಾಡ "ಎಂಬ ಲೇಖನವನ್ನು ಶ್ರೀ ಮುದವೀಡು ಕೃಷ್ಣರಾಯರು ಕರ್ನಾಟಕ ವೈಭವದಲ್ಲಿ ಬರೆದಿದ್ದರು.ಅದನ್ನು ಉಪಯೋಗಿಸಿಕೊಂಡು ಮೊಹರೆ ಹಣಮಂತರಾಯರು ಕರ್ನಾಟಕ ವೈಭವದಲ್ಲಿ ಅಗ್ರ ಲೇಖನವನ್ನು ಬರೆದರು.ಅದಕ್ಕೆ ಸಂಪಾದಕ ತಿಳಗೂಳ ರಂಗರಾಯರನ್ನು ಬಂಧಿಸಿ ಶಿಕ್ಷೆ ವಿಧಿಸಲಾಯ್ತು.ತದ ನಂತರ ಮೊಹರೆ ಹಣಮಂತರಾಯರು ಕರ್ನಾಟಕ ವೈಭ ಸಂಪಾದಕತ್ವವನ್ನು ವಹಿಸಿಕೊಂಡರು.
೩೪ ನೇ ಸಾಲು:
ಈ ಕೈಫಿಯತ್ತು ಮೊಹರೆ ಹಣಮಂತರಾಯರ ರಾಷ್ಟಪ್ರೇಮ ಮತ್ತು ಪತ್ರಿಕಾಧರ್ಮದ ಅವರ ವಿಶಿಷ್ಟ ತೆಯನ್ನು ಎತ್ತಿ ತೋರಿಸುತ್ತದೆ.
 
'''=== ಸ್ವರಾಜ್ಯ ಆಶ್ರಮ ಅಥವಾ ಸೆರೆಮನೆ ==='''
ಭೀಮಕಾಯದ ಮೊಹರೆ ಹಣಮಂತರಾಯರನ್ನು ವಿಚಾರ ಮಾಡಲು ವಿಜಾಪುರ ಡಿಸ್ಟ್ರಿಕ್ಟ ಜೈಲಿನಿಂದ ಕಲೆಕ್ಟರ ಸಾಹೇಬರ ಕಚೇರಿಯವರೆಗೆ ಸುಮಾರು ಎರಡು ಮೈಲು ಉರಿ ಬಿಸಿಲಿನಲ್ಲಿ ಕೈಗೆ ಕೊಳ ತೊಡಿಸಿ ಸೊಂಟಕ್ಕೆ ಹಗ್ಗ ಕಟ್ಟಿ ನಡೆಸುತ್ತ ಮೆರವಣಿಗೆಯಲ್ಲಿ ಪೊಲೀಸರು ಕರೆದುಕೊಂಡು ಬಂದಿದ್ದರು.ನೋಡುಗರ ಹಾಗೂ ಕುಟುಂಬದವರ ಕಣ್ಣಿಗೆ ಕ್ರೂರವಾದ ದೃಶ್ಯವಾಗಿ ಕಾಣುತ್ತಿತ್ತು, ಆದರೆ ಮೊಹರೆಯವರ ಹಣಮಂತರಾಯರ ಮುಖ ಮಾತ್ರ ನಗುಮೊಗವಾಗಿತ್ತು.ಮೊಹರೆಯವರ ವಿಚಾರಣೆ ಮುಗಿದು ಎರಡು ವರ್ಷ ದ ಶಿಕ್ಷೆ ಪ್ರಕಟಿಸಿದ ನಂತರ ಅವರ ಮಿತ್ರರು,ಕಾಂಗ್ರೆಸ ಕಮೀಟಿಯವರು ,ಮತ್ತು ಸಾರ್ವಜನಿಕರು ಸರದಿಯಾಗಿ ನಿಂತು ಮಾಲಾರ್ಪಣೆ ಮಾಡಿದರು.ತದನಂತರ ಪೊಲೀಸರು ಮೊಹರೆ ಹಣಮಾಂತರಾಯರನ್ನು ಟಾಂಗಾದಲ್ಲಿ ಕೂಡಿಸಿಕೊಂಡು ಸ್ವರಾಜ್ಯ ಆಶ್ರಮಕ್ಕೆ ಕರೆದುಕೊಂಡು ಹೋದರು. ಮೊಹರೆ ಹಣಮಂತರಾಯರು ಸೆರೆಮನೆಗೆ "ಸ್ವರಾಜ್ಯ ಆಶ್ರಮ " ಎಂದು ಕರೆಯುತ್ತಿದ್ದರು. ವಿಜಾಪುರದ ಜನತೆ ಮೊಹರೆ ಹಣಮಂತರಾಯರ ದೇಶಪ್ರೇಮ ,ಸ್ವಾರ್ಥತ್ಯಾಗ ,ಆತ್ಮವಿಶ್ವಾಸ ,ಹಸನ್ಮುಖಿ ,ಧೈರ್ಯ, ಕಂಡು ಅವರನ್ನು ಕೊಂಡಾಡಿತು. ಹಣಮಂರಾಯರ ತಂದೆ ರಾಘಣ್ಣ ನಾಯಕರು ಮತ್ತು ಕುಟುಂಬ ವರ್ಗದವರೆಲ್ಲರು ಮಗನ ದೇಶಪ್ರೇಮಕ್ಕೆ ಮನಸೋತು ಅವರ ಹೃದಯ ತುಂಬಿ ಬಂತು ಆದರೂ ಧೃತಿಗೆಡಲಿಲ್ಲ.
ಮೊಹರೆಯವರ "ಕರ್ನಾಟಕ ವೀರರೆ " ಲೇಖನ ಉಡುಪಿಯ ಸಾದ್ವಿ ಮತ್ತು ಸತ್ಯಾಗ್ರಹಿಯಲ್ಲಿ ಮರು ಮುದ್ರಣವಾದ ಕಾರಣ ಆ ಪತ್ರಿಕೆಗಳ ಸಂಪಾದಕರಾದ ಶ್ರೀ ಎಚ್ ನಾರಾಯಣರಾವ ಹಾಗು ಶ್ರೀ ರಾಮರಾವ ಮಲ್ಯ ರವರಿಗೂ ಒಂದು ವರ್ಷ ಶಿಕ್ಷೆಯಾಯಿತು.ಅಂದರೆ "ಕರ್ನಾಟಕ ವೀರರೆ" ಲೇಖನವು ಬ್ರಿಟೀಷರ ನಿದ್ರೆಗೆಡಿಸಿತು ಎಂದರೆ ತಪ್ಪಾಗಲಾರದು.ಮೊಹರೆಯವರ ಅನನ್ಯ ದೇಶಭಕ್ತಿಯನ್ನು ಅಭಿನಂದಿಸಲು ವಿಜಾಪುರದ ಛತ್ರೆ ಚಿತ್ರಮಂದಿರದಲ್ಲಿ (ಈಗಿನ ತ್ರಿಪುರಸುಂದರಿ ) ಕೌಜಲಗಿ ಹಣಮಂತರಾಯರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಪುರೊಹಿತ ತಮ್ಮಣ್ಣಾಚಾರ್ಯರ್ಯರು ಚಳುಅಳಿಯ ಹರಿಕಾರ ಮೊಹರೆ ಹಣಮಂತರಾಯರ ಖಟ್ಲೆಯ ವಿವರಗಳನ್ನು ನೀಡಿದರು, ಶ್ರೀ ಸಾಲಿ ರಾಮಚಂದ್ರರಾಯರು ಗೊತ್ತುವಳಿಯನ್ನು ಮಂಡಿಸಿದರು.
೧೯೨೫ ರಲ್ಲಿ ಸ್ವರಾಜ್ಯ ಆಶ್ರಮದಿಂದ ಹಿಂದಿರುಗಿದ ನಂತರ ಕರ್ನಾಟಕ ವೈಭವದ ಸಂಪಾದಕರಾಗಿ ಮುಂದುವರೆದರು.ಮೊಹರೆ ಹಣಮಂತರಾಯರು ಕರ್ನಾಟಕ ವೈಭವನ್ನು ಜನಪ್ರೀಯಗೊಳಿಸಲು " ಅಪ್ಪಾಭಟ್ಟರ ಹೊತ್ತಿಗೆ " ಅಂಕಣವನ್ನು ಬರೆಯುತ್ತಿದ್ದರು.ಸಾತಂತ್ರ್ಯ ಚಳುವಳಿ, ರಾಜಕೀಯ,ದೈನಂದಿನ ಸ್ಥಳೀಯ ಮತ್ತು ಸುತ್ತಮುತ್ತ ನಡೆಯುವ ಘಟನೆಗಳು ಅಪ್ಪಾಭಟ್ಟರ ಹೊತ್ತಿಗೆಯಲ್ಲಿ ಮೂಡಿ ಬರುತ್ತಿದ್ದವು.ಪತ್ರಿಕೆಗಳಮೇಲೆ ಗದಾಪ್ರಹಾರವನ್ನು ತಡೆಯುವದಕ್ಕೊಸ್ಕರ ಕರ್ನಾಟಕ ಪತ್ರಿಕೋದ್ಯಮ ಪರಿಷತ್ತನ್ನು ಸ್ಥಾಪಿಸುವ ಅವರ ಕನಸನ್ನು ನನಸಾಗಿ ಮಾಡಲು ಪ್ರಯತ್ನಿಸಿದರು.೧೯೨೮ ರಲ್ಲಿ ಕರ್ನಾಟಕ ಪತ್ರಿಕೋದ್ಯಮ ಪ್ರಥಮ ಪರಿಷತ್ತಿನ ಕಾರ್ಯದರ್ಶಿಯ ಹೊಣೆಯನ್ನು ಹೊತ್ತುಕೊಂಡು
ಪ್ರಸಿಧ್ಧ ಪತಿಕೋದ್ಯಮಿ ಡಿ ವ್ಹಿ ಗುಂಡಪ್ಪ ರವರ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಅಧಿವೇಶನವನ್ನು ಬಾಗಲಕೋಟೆಯಲ್ಲಿ ನೆರವೇರಿಸಿದರು.
 
"===ಸಂಯುಕ್ತ ಕರ್ನಾಟಕ ==="
"https://kn.wikipedia.org/wiki/ಮೊಹರೆ_ಹಣಮಂತರಾಯರು" ಇಂದ ಪಡೆಯಲ್ಪಟ್ಟಿದೆ