ವಡ್ಡಾರಾಧನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
ಕಥೆಯ ನಿರೂಪಣೆ ಸರಳವಾಗಿದೆ. ಪ್ರಾರಂಭದಲ್ಲಿ ಪ್ರಾಕೃತ ಗಾಹೆ ಮತ್ತು ಕನ್ನಡ ಅನುವಾದವಿರುತ್ತದೆ. ಜಂಬೂದ್ವೀಪದ ಭರತಖಂಡದ ಒಂದು ನಾಡು, ಅಲ್ಲಿ ಪಟ್ಟಣ, ಅದನ್ನಾಳುವ ರಾಜ, ರಾಣಿ, ಮಂತ್ರಿ, ಮಂತ್ರಿಪತ್ನಿ ಇವರ ವರ್ಣನೆಯಿಂದ ಕಥೆ ಆರಂಭವಾಗುತ್ತದೆ. ರಾಜಮನೆತನ ಅಥವಾ ವಣಿಕ ಕುಟುಂಬದ ವರ್ಣನೆ. ಕಥಾನಾಯಕನಿಗೆ ವೈರಾಗ್ಯಕ್ಕೆ ಒಂದು ಕಾರಣ, ಅವನ ಕುಟುಂಬ ತ್ಯಾಗ, ಸಂಚಾರ, ಉಪಸರ್ಗಗಳನ್ನು ಸಹಿಸುವುದು, ದೇಹತ್ಯಾಗದೊಂದಿಗೆ ಮುಕ್ತಿ ಪಡೆಯುವಲ್ಲಿಗೆ ಕಥೆ ಮುಗಿಯುತ್ತದೆ. ನಡುವೆ ಅನೇಕ ಉಪಕಥೆಗಳು ಬರುತ್ತವೆ. ಕಥೆಗೆ ಪೂರಕವಾಗಿ ಪಾತ್ರ ಚಿತ್ರಣವಿದೆ. ವರ್ಣನೆಗಳು ಕಣ್ಣಿಗೆ ಕಟ್ಟುತ್ತವೆ. ನಿರೂಪಣೆ ಸರಳ ರೇಖಾತ್ಮಕವಾಗಿದೆ. ಪೂರ್ವಭವಗಳನ್ನು ವರ್ಣಿಸುವಾಗ ಹಿಂದೆ ಬಂದು ಮುಂದುವರೆಯುವ ಕ್ರಮವನ್ನು ಅನುಸರಿಸಲಾಗಿದೆ.
 
ವಡ್ಡಾರಾಧನೆಯಲ್ಲಿ ದೇಸಿ ಭಾಷೆಯ ಸೊಗಡು ಗಮನಾರ್ಹವಾಗಿದೆ. ಜಾನಪದ ಆಶಯಗಳು ವಿಶೇಷವಾಗಿವೆ. ಬಳಕೆಯಲ್ಲಿರುವ ಜನಪದ ಕಥೆಗಳನ್ನೇ ಧರ್ಮನಿರೂಪಣೆಗೆ ಅಳವಡಿಸಿಕೊಂಡಿರುವಂತಿದೆ. ವಡ್ಡಾರಾಧನೆ ಜೈನ ಧರ್ಮದ ಗ್ರಂಥವಾಗಿರುವಂತೆ 10ನೇ ಶತಮಾನದ ಕನ್ನಡನಾಡಿನ ಜೀವನ ಚಿತ್ರಣದ ದಾಖಲೆಯೂ ಆಗಿದೆ.<ref> [https://kn.wikisource.org/s/1ed ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಡ್ಡಾರಾಧನೆ]</ref>
 
==ಉಲ್ಲೇಖ==
 
"https://kn.wikipedia.org/wiki/ವಡ್ಡಾರಾಧನೆ" ಇಂದ ಪಡೆಯಲ್ಪಟ್ಟಿದೆ