2020-21ರ ಭಾರತೀಯ ರೈತರ ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪೨ ನೇ ಸಾಲು:
====ಐತಿಹಾಸಿಕ ತೀರ್ಪು- ದಿಶಾರವಿ ಬಿಡುಗಡೆ====
*ದಿಶಾ ಅವರು ಟೂಲ್‌ಕಿಟ್‌ ಮೂಲಕ ಜನರು ದೇಶದ ಬಗ್ಗೆ ಅಸಮಾಧಾನಗೊಳ್ಳುವಂತೆ ಮಾಡಿದ್ದರು ಎಂದು ದೆಹಲಿ ಪೊಲೀಸರು ಮಾಡಿದ ಆರೋಪವನ್ನೇ ನ್ಯಾಯಾಲಯವು ತನ್ನ 18 ಪುಟಗಳ ಆದೇಶದಲ್ಲಿ ತರಾಟೆಗೆ ತೆಗೆದುಕೊಂಡಿದೆ.
*'''*‘ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಪ್ರಜೆಗಳು ಸರ್ಕಾರದ ಆತ್ಮಸಾಕ್ಷಿ ಸಂರಕ್ಷಕರಂತೆ ಕೆಲಸ ಮಾಡುತ್ತಾರೆ. ಸರ್ಕಾರದ ನೀತಿಗಳನ್ನು ಒಪ್ಪಿಲ್ಲ ಎಂಬ ಒಂದೇ ಕಾರಣಕ್ಕೆ ಜನರನ್ನು ಜೈಲಿಗೆ ತಳ್ಳಲಾಗದು ಎಂಬುದು ನನ್ನ ಅಭಿಪ್ರಾಯ’ ಎಂದು ನ್ಯಾಯಾಧೀಶರು ಹೇಳಿದರು.'''
'''"ಐದು ಸಾವಿರ ವರ್ಷಗಳ ನಮ್ಮ ನಾಗರಿಕತೆಯು ವಿವಿಧ ರೀತಿಯ ಚಿಂತನೆಗಳ ಬಗ್ಗೆ ಯಾವತ್ತೂ ಅಸಡ್ಡೆ ಹೊಂದಿರಲಿಲ್ಲ ಎಂದು ಋಗ್ವೇದವನ್ನು ಉಲ್ಲೇಖಿಸಿ ರಾಣಾ ಅವರು ಹೇಳಿದ್ದಾರೆ.
ಭಿನ್ನಮತ, ವೈವಿಧ್ಯ, ಅಸಮಾಧಾನ ಮತ್ತು ಅಸಮ್ಮತಿಗಳೆಲ್ಲವೂ ಸರ್ಕಾರದ ನೀತಿಯಲ್ಲಿ ವಸ್ತುನಿಷ್ಠತೆ ಮೂಡಿಸುವ ನ್ಯಾಯಬದ್ಧ ಸಾಧನಗಳು ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಸರ್ಕಾರದ ಒಣಜಂಭವನ್ನು ತೃಪ್ತಿಪಡಿಸುವುದಕ್ಕಾಗಿ ದೇಶದ್ರೋಹ ಕಾಯ್ದೆಯನ್ನು ಬಳಸಿಕೊಳ್ಳಲಾಗದು ಎಂದು ತೀರ್ಪಿನಲ್ಲಿ ಹೇಳಲಾಗಿದೆ".''' <ref>[https://www.prajavani.net/india-news/toolkit-case-release-of-environmental-activist-disha-ravi-farmers-protest-delhi-808199.html ಟೂಲ್‌ಕಿಟ್ ಪ್ರಕರಣ‌: ಪರಿಸರ ಕಾರ್ಯಕರ್ತೆ ದಿಶಾ ರವಿ ಬಿಡುಗಡೆ;ಪ್ರಜಾವಾಣಿ ವಾರ್ತೆ Updated: 24 ಫೆಬ್ರವರಿ 2021,]</ref>
 
===ಟ್ರ್ಯಾಕ್ಟರ್‌ ರ್‍ಯಾಲಿ===
*ದಿ.26-1-2021 ರಂದು ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿನ ಹಿಂಸಾಚಾರವು ‘ಪೂರ್ವಯೋಜಿತ ಸಂಚು’ ಎಂದು ಟೂಲ್‌ಕಿಟ್‌ ಪ್ರಕರಣದ "ಎಫ್‌ಐಆರ್‌"ನಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿ ಧ್ವಜ ಹಾರಿಸಲು ಮತ್ತು ಹಿಂಸಾಚಾರ ನಡೆಸಲು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2.5 ಲಕ್ಷ ಡಾಲರ್‌ ಕೊಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಇದೆ. '''ಆದರೆ, ಜ. 26ರಂದು ಕೆಂಪುಕೋಟೆಯಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜ.''' ಶಾಂತಿಯುತವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ರೈತರು ಒಪ್ಪಿದ್ದರು. ಆದರೆ, ಟೂಲ್‌ಕಿಟ್‌ನ ಹಿಂದಿರುವ ಶಕ್ತಿಗಳೇ ಗಲಭೆಗೆ ಕುಮ್ಮಕ್ಕು ಕೊಟ್ಟಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ‘ಪಂಜಾಬ್‌ ಅನ್ನು *ಭಾರತದಿಂದ ಪ್ರತ್ಯೇಕಿಸಿ ಖಾಲಿಸ್ತಾನ ಎಂದು ಘೋಷಿಸಬೇಕು ಎಂದು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ರೈತರ ಪ್ರತಿಭಟನೆಯನ್ನು ಮುಂದಿರಿಸಿಕೊಂಡು ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಿದೆ. ಜನರಿಗೆ ಹಣ ನೀಡಿ, ಅಕ್ರಮವನ್ನು ಪ್ರಚೋದಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಸಂಘಟನೆಯು ಹಿಂಸೆಗೆ ಕುಮ್ಮಕ್ಕು ನೀಡಿದೆ’ ಎಂದು ಎಫ್‌ಐಆರ್‌ನಲ್ಲಿ ಇದೆ.