ಗುಲ್ವಾಡಿ ವೆಂಕಟರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
==ಸಾಹಿತ್ಯ==
ಹಳತು ಹೊಸತರ ಸಂಘರ್ಷ ಇಂದಿರಾಬಾಯಿ ಎಂಬ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಪೋಲಿಸ್ ಖಾತೆಯಲ್ಲಿದ್ದಾಗಿನ ಲೋಕಾನುಭವ ಇಲ್ಲಿ ಸಾಹಿತ್ಯವಾಗಿ ರೂಪುಗೊಂಡಿದೆ. ಇಂದಿರೆಯ ತಂದೆ ತಾಯಿಗಳು ಸ್ವಾರ್ಥಪರರು. ತಮಗೆ ಆಗದವರನ್ನು ವಿಷಹಾಕಿ ಕೊಲ್ಲಿಸುವುದಕ್ಕೂ ಹೇಸರು. ಒಬ್ಬ ವ್ಯಸನಿಯೊಡನೆ ಮಗಳ ಮದುವೆ ಮಾಡಿಸಿದ್ದರ ಫಲವಾಗಿ ಇಂದಿರೆ ಬಾಲವಿಧವೆಯಾಗಿ ಅಮೃತರಾಯನೆಂಬುವನ ಆಶ್ರಯದಲ್ಲಿ ನಿಲ್ಲುತ್ತಾಳೆ. ಆತನ ಪೋಷಣೆಯಲ್ಲಿ ಆಕೆಯೂ ಭಾಸ್ಕರನೆಂಬ ಅನಾಥ ಹುಡುಗನೊಬ್ಬನೂ ವಿದ್ಯೆ ಕಲಿಯುತ್ತಾರೆ. ಕೊನೆಗೆ ಭಾಸ್ಕರನೊಡನೆ ಇಂದಿರೆಯ ಮರುಮದುವೆಯಾಗುತ್ತದೆ. ಈ ಸಂಬಂಧದಿಂದ ನಿಜವಾದ ಸದ್ಧರ್ಮದ ವಿಜಯವಾಯಿತೆಂದು ತೋರಿಸಲಾಗಿದೆ. ಕಥೆಯಲ್ಲಿನ ಘಟನೆಗಳು ವಾಸ್ತವಾಂಶದಿಂದ ಕೂಡಿದುವಾಗಿದ್ದು ಯಾವ ದೃಷ್ಟಿಯಿಂದ ನೋಡಿದರೂ ಕಾದಂಬರಿ ಆಧುನಿಕ ಸಮಾಜದ ಕಥನವೆನ್ನಿಸಿಕೊಳ್ಳುತ್ತದೆ. ಈ ಕಾದಂಬರಿಯ ಗುಣವನ್ನು ಮೆಚ್ಚಿ, ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕೌಚ್ಮನ್ ಎಂಬಾತ ಇದನ್ನು ಇಂಗ್ಲಿಷಿಗೆ ಭಾಷಾಂತರಿಸಿ ಪ್ರಕಟಿಸಿದ್ದಾನೆ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ವಾಡಿ ವೆಂಕಟರಾವ್}}
== ಉಲ್ಲೇಖಗಳು ==
<references />