ಬಯಲಾಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧ ನೇ ಸಾಲು:
==ಮುನ್ನುಡಿ==
{{ಬಯಲಾಟ [[ಕರ್ನಾಟಕ]] ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ 'ಬಯಲಾಟ'ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ '[[ಭಾಗವತ]]' ಎಂದು ಕರೆಯುತ್ತಾರೆ. ಈ ಭಾಗವತನಿಗೆ ಕಲಾವಿದರೆಲ್ಲರೂ ಸೇರಿ ಇಂತಿಷ್ಟು ದವಸ ಧಾನ್ಯಗಳೆಂದು ಸಂಭಾವನೆಯ ರೂಪದಲ್ಲಿ ಕೊಡುತ್ತಾರೆ. ಸಾಮಾನ್ಯವಾಗಿ ಬಯಲಾಟ ನಡೆಯುವುದು ಹಬ್ಬ, ಜಾತ್ರೆ ಮತ್ತಿತರ ಸಂತೋಷದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನೆಂಟರಿಷ್ಟರು, ಅಕ್ಕಪಕ್ಕದ ಊರಿನವರ ಎದುರಿಗೆ ತಮ್ಮ ಕಲೆ ಪ್ರದರ್ಶಿಸಬೇಕೆಂಬುದು ಕಲಾವಿದರ ಆಸೆ. ಬಯಲಾಟದಲ್ಲಿ ಆಸಕ್ತಿಯುಳ್ಳವರು ಭಾಗವಹಿಸಬಹುದು. ಆದರೆ ಭಾಗವತರು ಅವರವರ ವಯೋಗುಣ, ಮೈಕಟ್ಟು, ಕಂಠಗಳಿಗೆ ಅನುಗುಣವಾಗಿ ಪಾತ್ರ ಹಂಚುತ್ತಾರೆ. ರಾಜಾ ಪಾತ್ರ ಮತ್ತು ಸ್ತ್ರೀ ಪಾತ್ರ ಬಹುಮುಖ್ಯ..}}
ಬಯಲಾಟ ಎಂಬ ನಾಟಕವು ಇದನ್ನು ಊರಿನ ಬಯಲು ಪ್ರದೇಶದಲ್ಲಿ (ದೇವಸ್ಥಾನ, ಕಟ್ಟೆ, ರಂಗಭವನ) ಆಡುವ ಕಲೆ. ಇದನ್ನು ದೊಡ್ಡಾಟ ಎಂತಲೂ ಕರೆಯುವರು. ಈ ನಾಟಕವು ಉತ್ತರ ಕರ್ನಾಟಕ (ರಾಯಚೂರು, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ) ಭಾಗದ ಪ್ರಸಿದ್ದಿ ಕಲೆ. ಬಯಲಾಟ ನಾಟಕ ರೂಪದ ಕಥಾ ರೂಪ, ಇದರ ಮುಖ್ಯವಾದ ಕಥಾವಸ್ತು ಎಂದರೆ ಪೌರಾಣಿಕ ಹಿನ್ನಲೆಯುಳ್ಳ ಪಾತ್ರಗಳಿಂದ ಕೂಡಿರುತ್ತದೆ. ಬಯಲಾಟದಲ್ಲಿ ಪೌರುಷದ ಕುಣಿತಗಳು, ಭರ್ಜರಿಯಾದ ವೇಷಭೂಷಣಗಳು, ಭವ್ಯವಾದ ರಂಗಮಂಟಪ, ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತ ಇದು ಬಯಲಾಟದ ವೈಶಿಷ್ಠತೆಗಳು.
 
==ಭಿನ್ನತೆ==
ಕರಾವಳಿ ಪ್ರದೇಶ ಬಿಟ್ಟು ಉಳಿದಡೆ ಪ್ರಚಲಿತವಿದ್ದ ಯಕ್ಷಗಾನ ಆಟಕ್ಕೆ ಮೂಡಲಪಾಯ ಸಂಪ್ರದಾಯದಲ್ಲಿಯೇ ಉತ್ತರ ಕರ್ನಾಟಕದ ಆಟಗಳಿಗೂ ದಕ್ಷಿಣ ಕರ್ನಾಟಕದ ಆಟಗಳಿಗೂ ಸ್ವಲ್ಪ ಭಿನ್ನತೆ ಕಂಡುಬರುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಆಟವೆಂದೇ ಕರೆಯಲಾಗುವ ಈ ಪ್ರಕಾರವನ್ನು ವಿದ್ವಾಂಸರು, "ಬಯಲಾಟ" ,"ಮೂಡಲಪಾಯ ಆಟ" ದೊಡ್ಡಾಟ ಎಂದು ಕರೆಯುವರು.
"https://kn.wikipedia.org/wiki/ಬಯಲಾಟ" ಇಂದ ಪಡೆಯಲ್ಪಟ್ಟಿದೆ