ಕೋಟಿ ಚೆನ್ನಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
ಎಣ್ಮೂರು ಸೀಮೆಗೂ ಪಂಜಸೀಮೆಗೂ ಗಡಿವಿಚಾರದಲ್ಲಿ ಕಲಹವಿತ್ತು. ಪಂಜದ ಕೇಮರ ಬಲ್ಲಾಳನು ಗಡಿಕಲ್ಲನ್ನು ಮುಂದೆ ಹಾಕಿ ಎಣ್ಮೂರಿನ ಭೂಮಿಯನ್ನು ಕಬಳಿಸಿದ್ದ. ಕೋಟಿಚೆನ್ನಯರು ಮಣಭಾರದ ಗಡಿಕಲ್ಲನ್ನು ಪುನಃ ಸ್ವಸ್ಥಾನದಲ್ಲಿ ನೆಟ್ಟರು. ಆ ವೇಳೆಗಾಗಲೇ ಎಣ್ಮೂರು ಸೀಮೆಯಲ್ಲಿ ಕೋಟಿಚೆನ್ನಯರು ಪ್ರಸಿದ್ಧರಾಗಿದ್ದರು. ಎಣ್ಮೂರಿನ ದೇವಬಲ್ಲಾಳನು ಕೋಟಿಚೆನ್ನಯರನ್ನು ಸ್ವಾಗತಿಸಿ, ಕೋಟಿಚೆನ್ನಯರ ಆಶಯದಂತೆ ವಿವಾದಿತ ಸ್ಥಳದಲ್ಲಿ ಅವರಿಗೆ ವಾಸವಾಗಲು ಅನುಮತಿ ನೀಡಿದನು.
==ಯುದ್ಧ, ಮರಣ==
ಪಡುಮಲೆಯ ಪೆರುಮಾಳು ಬಲ್ಲಾಳನೂ, ಪಂಜದ ಕೇಮರ ಬಲ್ಲಾಳನೂ ಕೋಟಿಚೆನ್ನಯರನ್ನು ಬಂಧಿಸುವುದನ್ನೇ ಗುರಿಯಾಗಿರಿಸಿಕೊಂಡು ಎಣ್ಮೂರಿನ ಮೇಲೆ ದಂಡೆತ್ತಿ ಬಂದರು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಕೋಟಿಚೆನ್ನಯರು ಎಣ್ಮೂರು ಶಿವದೇವಾಲಯದ ಅಂಗಣದಲ್ಲೇ ವೀರಮರಣವನ್ನಪ್ಪಿದರು. ಮರಣಾನಂತರ ಪೆರುಮಾಳು ಬಲ್ಲಾಳನೂ ಕೇಮರ ಬಲ್ಲಾಳನೂ ತುಂಬಾ ವ್ಯಥೆಪಟ್ಟರು. ಸುಂಕದ ಕಟ್ಟೆಯಲ್ಲಿ ಜ್ಯೋತಿಷ ಹೇಳಿದ್ದವರ ಕುಟುಂಬವೇ ಮುಂದೆ ಶಿವದೇವಾಲಯದ ಪೂಜೆ ಮಾಡಬೇಕು ಎಂಬುವುದು ಕೋಟಿಚೆನ್ನಯರ ಕೊನೆಯ ಆಸೆಯಾಗಿತ್ತು.<ref>[https://kn.wikisource.org/wiki/%E0%B2%95%E0%B3%8B%E0%B2%9F%E0%B2%BF_%E0%B2%9A%E0%B3%86%E0%B2%A8%E0%B3%8D%E0%B2%A8%E0%B2%AF ಕೋಟಿ ಚೆನ್ನಯ]</ref>
 
==ಸಮಾಜಮುಖಿ ಕೆಲಸಗಳು==
ಕೋಟಿಚೆನ್ನಯರ ಅನೇಕ ಸಮಾಜಮುಖಿ ಕೆಲಸಗಳು ಪಾಡ್ದನಗಳಲ್ಲಿ ಉಲ್ಲೇಖವಾಗಿವೆ. ಶ್ರೀಮಂತರ ಶೋಷಣೆಯ ವಿರುದ್ಧವಾಗಿ ಕೋಟಿಚೆನ್ನಯರು ಆರಂಭದಿಂದಲೇ ದನಿಯೆತ್ತಿದರು. ತಮ್ಮ ತೋಳ್ಬಲದಿಂದ ಅನೇಕ ಕೆರೆ ಕುಂಟೆಗಳನ್ನು ನಿರ್ಮಿಸಿದರು. ಕಾಡುಮೃಗಗಳಿಂದ ನಾಡಿನ ಕೃಷಿಯನ್ನು ರಕ್ಷಿಸಿದರು ಮೊದಲಾದಂತಹ ಅನೇಕ ವರ್ಣನೆಗಳಿವೆ. ಆದ್ದರಿಂದಲೇ ಕೋಟಿಚೆನ್ನಯರನ್ನು ದೈವತ್ವಕ್ಕೇರಿಸಿ ತುಳುನಾಡಿನ ಅನೇಕ ಕಡೆಗಳಲ್ಲಿ ಗರಡಿಗಳನ್ನು ಕಟ್ಟಿಸಲಾಗಿದೆ.
"https://kn.wikipedia.org/wiki/ಕೋಟಿ_ಚೆನ್ನಯ" ಇಂದ ಪಡೆಯಲ್ಪಟ್ಟಿದೆ