ಕುಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕುಸ್ತಿ
 
No edit summary
೧ ನೇ ಸಾಲು:
[[ಚಿತ್ರ:WrestlingUSAF_Flag.jpg|thumb]]
 
'''ಕುಸ್ತಿ'''ಯು ಆಯುಧಗಳನ್ನು ಉಪಯೋಗಿಸದೆ ಒಬ್ಬನೊಡನೊಬ್ಬ ಸೆಣಸಿ ಗೆಲ್ಲುವ ಒಂದು ಪಂದ್ಯಾಟದ ಬಗೆ. ಇದರಲ್ಲಿ ವ್ಯಕ್ತಿಯ ಶಕ್ತಿ ಹಾಗೂ ಯುಕ್ತಿಗಳು ಪ್ರದರ್ಶಿತವಾಗುತ್ತದೆ. ಭಾರತದಲ್ಲಿ ಕುಸ್ತಿ ಅದರ ಲಿಖಿತ ಚರಿತ್ರೆಗಿಂತ ಪುರಾತನವಾದುದ್ದು . ಇಲ್ಲಿನ ಪುರಾಣಕಥೆಗಳಲ್ಲಿ ಅನೇಕ ಕುಸ್ತಿ ಪ್ರಸಂಗಗಳಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳೂ ಕುಸ್ತಿಪಟಗಳ ಶ್ಲಾಘನೀಯವಾದ ಸಾಹಸ ಕಾರ್ಯಗಳಿಂದ ತುಂಬಿವೆ. ಹನುಮಂತ, ವಾಲಿ, ಸುಗ್ರೀವ ಇವರು ಯಾರಿಗೂ ಸಗ್ಗದಿರುವ ಕುಸ್ತಿಪಟುಗಳಾಗಿದ್ದರು. ಭೀಮ ಮತ್ತು ಜರಾಸಂಧ ಇವರೀರ್ವರಿಗೂ ನಡೆದ ಕುಸ್ತಿಯೂ ಸ್ಮರಣೀಯವಾದದ್ದು. ಹನುಮಂತ ಭಾರತದಲ್ಲಿನ ಕುಸ್ತಿ ಪಟುಗಳ ಆರಾಧ್ಯದೈವವಾಗಿದ್ದಾನೆ. ಕುಸ್ತಿಗೆ ದ್ವಂದ್ವಯುದ್ಧ, ಮುಷ್ಟಿಯುದ್ಧ ಎಂಬ ಹೆಸರುಗಳೂ ಬಳಕೆಯಲ್ಲಿದ್ದುವು.
 
ಭಾರತದಲ್ಲಿ ಕುಸ್ತಿ ಕಲೆ ಪುರುಷ ಕ್ರೀಡೆಗಳಲ್ಲೆಲ್ಲ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಕುಸ್ತಿ ಶರೀರದ ಎಲ್ಲ ಭಾಗಗಳಿಗೂ ವ್ಯಾಯಾಮ ಒದಗಿಸಿ, ದೇಹವನ್ನು ಸಮಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ, ಮಾಂಸಖಂಡಗಳನ್ನು ತುಂಬುವಂತೆಮಾಡಿ, ದೇಹವನ್ನು ನೋಡಲು ಅಂದವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಧೈರ್ಯ, ಮುನ್ನುಗ್ಗುವ ಶಕ್ತಿಗಳನ್ನು ಕೊಟ್ಟು ಆತ್ಮವಿಶಾಸವನ್ನು ಬಲಪಡಿಸುತ್ತದೆ. ಇದು ಗುರುಭಕ್ತಿಯನ್ನು ಹೆಚ್ಚಿಸುವ ಕ್ರೀಡೆ. ಬೇರೆ ಯಾವ ಕ್ರೀಡೆಯಲ್ಲಿಯೂ ಇಂಥ ಗುರುಭಕ್ತಿ ಕಂಡುಬರುವುದಿಲ್ಲ. ಶಿಷ್ಯನಾದವ ಗುರುವಿನ ಕಾಲಿಗೆ ಬೀಳುವ ಪದ್ಧತಿ ಇಂದಿಗೂ ಗರಡಿಗಳಲ್ಲಿ ರೂಢಿಯಲ್ಲಿದೆ.
೫೮ ನೇ ಸಾಲು:
|}
 
'''ನಿಲ್ಲುವ ರೀತಿ ಮತ್ತು ಪಟ್ಟುಗಳು''':ಕುಸ್ತಿಮಾಡುವಾಗ ನಿಂತುಕೊಳ್ಳುವ ರೀತಿ ಮತ್ತು ಹಾಕುವ ಪಟ್ಟುಗಳು ಗಮನೀಯವಾದ ಅಂಶಗಳು. ಜಟ್ಟಿ ನಿಲ್ಲುವ ರೀತಿಯಿಂದಲೇ, ಅವನು ಒಳ್ಳೆಯ ಕುಸ್ತಿಯ ಪಟು ಎಂದು ನಿರ್ಧರಿಸಬಹುದು. ಕುಸ್ತಿಯಲ್ಲಿ ನಿಲ್ಲುವ ರೀತಿ ಹಲವು ಬಗೆಯದು. ಇವುಗಳಲ್ಲೆಲ್ಲ. ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ರೀತಿಯೆಂದರೆ ಪವಿತ್ರರೀತಿ (ಕ್ಲೋಸ್ ಸ್ಟಾನ್ಸ್ ). ಈ ರೀತಿಯಲ್ಲಿ ಜಟ್ಟಿ, ಒಂದು ಕಾಲು ಹಿಂದೆ ಹಾಕಿ, ತನ್ನ ಶರೀರದ ಭಾರವನ್ನು ಕಾಲುಗಳ ಮೇಲೆ ಸರಿಸಮನಾಗಿ ಬೀಳುವಂತೆ ಮಾಡಿಕೊಂಡು ನಿಲ್ಲುತ್ತಾನೆ. ಹಾಗೆಯೆ ಜಟ್ಟಿಗೆ ಪಟ್ಟುಗಳ ಅಥವಾ ಡಾವುಗಳ ಆವಶ್ಯಕತೆ ಇರುತ್ತದೆ. ಈ ಡಾವುಗಳಲ್ಲಿ ಹಲವಾರು ವಿಧಗಳಿವೆ.
 
'''ಎದುರು ಬದುರು ನಿಂತಾಗ ಮಾಡುವ ಡಾವುಗಳು''': ಎದುರು ಬದುರು ನಿಂತು ಕುಸ್ತಿ ಮಾಡುವಾಗ, ಜಟ್ಟಿ ಡಾಕ್ ಹೊಡೆಯುವುದು, ಏಕಲಾಂಗ್ ಹೊಡೆಯುವುದು, ದೋಬಿ ಶಾಟ್ ಹೊಡೆಯುವುದು, ಸಖೀ ಹೊಡೆಯುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ. ಹಾಗೆಯೇ ತನ್ನ ಎದುರಾಳಿಯ ಹಿಂದೆ ಬಂದು, ಸೊಂಟಹಿಡಿದು, ಉಖ್ಖಾಡು ಎತ್ತುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ. ಎದುರಾಳಿಯೂ ತನ್ನ ಸೊಂಟ ಹಿಡಿದಿರುವ ಜಟ್ಟಿಗೆ, ಒಳಟಾಂಗ ಹೊಡೆಯುವುದು, ಹೊರಟಾಂಗ ಹೊಡೆಯುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ.
 
'''ಕುಳಿತು ಕುಸ್ತಿ ಮಾಡುವ ಡಾವುಗಳು''': ಕುಳಿತಿರುವಾಗ ಮೇಲಿರುವ ಜಟ್ಟಿ, ಕೆಳಗಿನ ತನ್ನ ಎದುರಾಳಿಗೆ ಒಂಟಿಗಾಲು ಸವಾರಿ, ಜೋಡಿಗಾಲು ಸವಾರಿ, ಮತ್ತು ಸಿವುಡುಕಾಲು ಸವಾರಿ (ಕ್ರೌಚ್ ಲಿಫ್ಟ್ ) ಮತ್ತು ನೆಲ್ಸನ್ ಮುರಿತ ಇತ್ಯಾದಿ ಡಾವುಗಳನ್ನು ಮಾಡುತ್ತಾನೆ. ಸಿವುಡುಕಾಲು ಸವಾರಿಗೆ ಫ್ರೀಸ್ಟೈಲ್ ಕುಸ್ತಿಯಲ್ಲಿ ಅವಕಾಶವಿಲ್ಲ. ಹಾಗೆಯೇ ಕೆಳಗೆ ಕುಳಿತಿರುವ ಜಟ್ಟಿ ತನ್ನ ಮೇಲಿರುವ ಜಟ್ಟಿಗೆ ಬಗಲಿ ಹೊಡೆಯುವುದು, ಗದ್ದಾಲೋಡ್ (ಒಂದು ಕೈ, ಒಂದು ಕಾಲು ಹಿಡಿದು ಮೂಟೆಯಂತೆ ಹಿಂದೆ ಉರುಳಿಸುವುದು), ರೂಮು ತಿರುಗುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ.
 
ಸಾಮಾನ್ಯವಾಗಿ ಜಟ್ಟಿಗಳು ಒಬ್ಬರ ಕತ್ತನ್ನು ಮತ್ತೊಬ್ಬರು ಹಿಡಿದು ಕುಸ್ತಿ ಮಾಡುವುದುಂಟಷ್ಟೆ. ಇದಕ್ಕೆ ಕಾರಣವೆಂದರೆ ಇತರ ಅಂಗಾಂಗಗಳಿಗೆ ಹೋಲಿಸಿ ನೋಡಿದಾಗ ಕತ್ತು ದುರ್ಬಲವಾಗಿರುತ್ತದೆ. ಆದ್ದರಿಂದಲೇ ಜಟ್ಟಿಗಳು ತಮ್ಮ ತಮ್ಮ ಎದುರಾಳಿಗಳ ಕತ್ತನ್ನು ಹಿಡಿದು ಕತ್ತನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಡಾವುಗಳನ್ನು ಮಾಡುತ್ತಾನೆ.
೭೦ ನೇ ಸಾಲು:
ಪುರಾತನ ಕಾಲದಲ್ಲಿ ಕುಸ್ತಿಯಿಂದ ಪ್ರಾಣಹಾನಿಯಾಗುತ್ತಿತ್ತು. ರಾಮಾಯಣ ಮಹಾಭಾರತ ಕಾವ್ಯಗಳಲ್ಲಿ ಕಂಡುಬರುವ ಕುಸ್ತಿಪಂದ್ಯಗಳಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬ ಸಾಯುವುದನ್ನು ಕಾಣಬಹುದು. ದಿನಗಳುರುಳಿದಂತೆ ಕುಸ್ತಿಯ ಉದ್ದೇಶದಲ್ಲಿ ಮಾರ್ಪಾಡಾಯಿತು. ಅಪಾಯ ಉಂಟುಮಾಡುವ ಡಾವುಗಳನ್ನು ನಿಷೇಧಿಸಲಾಯಿತು.
 
'''ಬಗೆಗಳು''': ಇಂದು ವಾಡಿಕೆಯಲ್ಲಿರುವ ಕುಸ್ತಿಯ ಬಗೆಗಳು ಮೂರು. 1. ಭಾರತೀಯ ಮಾದರಿ, 2. ಸ್ವಚ್ಛಂದ (ಫ್ರೀಸ್ಟೈಲ್ ಅಥವಾ ಕ್ಯಾಚ್ ಆ್ಯಸ್ ಕ್ಯಾಚ್ ಕ್ಯಾನ್ ) ಮಾದರಿ, 3. ಗ್ರೀಕೋರೋಮನ್ ಮಾದರಿ.
 
'''ಭಾರತೀಯ ಮಾದರಿ ಕುಸ್ತಿ''': ಈ ಬಗೆಯ ಕುಸ್ತಿ, ಕೆಂಪು ಮಣ್ಣಿನ ಮೇಲೆ ನಡೆಯುವಂಥದಾಗಿದ್ದು, ಭಾರತದ ಎಲ್ಲ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಜಟ್ಟಿಗಳು ಬಿಗಿಯಾಗಿ ಕಾಚವನ್ನು ಕಟ್ಟಿ, ಅದರ ಮೇಲ್ಭಾಗದಲ್ಲಿ ಹನುಮಾನ್ ಚಡಿಯನ್ನು ಧರಿಸುತ್ತಾರೆ. ಅನಧಿಕೃತವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಜಟ್ಟಿಗಳು ಮೈಗೆ ಎಣ್ಣೆ ಬಳಿದುಕೊಂಡು ಅಖಾಡಕ್ಕಿಳಿಯಲು ಅವಕಾಶವಿರುತ್ತದೆ. ಅಖಾಡಕ್ಕಿಳಿಯವ ಜಟ್ಟಿ ಸಾಮಾನ್ಯವಾಗಿ ತನ್ನ ತಲೆಯನ್ನು ನುಣ್ಣನೆ ಬೋಳಿಸಿರುತ್ತಾನಲ್ಲದೆ ಮೈಕೈ ಕಾಲುಗಳ ಮೇಲಿನ ಕೂದಲನ್ನು ತೆಗೆಸಿರುತ್ತಾನೆ. ಅವಿದ್ದಲ್ಲಿ ಎದುರಾಳಿಗೆ ಹಿಡಿತ ಸಿಕ್ಕುತ್ತದೆಂದೇ ಜಟ್ಟಿಗಳ ಭಾವನೆ. ಜಟ್ಟಿಗಳಲ್ಲಿ ಒಬ್ಬ ಕೆಳಕ್ಕುರುಳಿ ಅವನ ಎರಡು ಭುಜಗಳೂ ಒಮ್ಮೆಗೇ ನೆಲಕ್ಕೆ ಸೋಕಿದರೆ ಆತ ಸೋತಂತಾಗುತ್ತದೆ. ಯಾರೊಬ್ಬರೂ ಬೀಳದಿದ್ದರೆ ಪಂದ್ಯ ಸಮ ಆಟದಲ್ಲಿ ಮುಕ್ತಾಯವಾಗುತ್ತದೆ. ಈ ಬಗೆಯ ಕುಸ್ತಿಯಲ್ಲಿ ಹನುಮಾನ್ ಚಡ್ಡಿಯನ್ನು ಹಿಡಿಯಲು ಅವಕಾಶವಿರುತ್ತದೆ. ಭಾರತದ ಜಟ್ಟಿಗಳಲ್ಲಿ ಫ್ರೀಸ್ಟೈಲ್ ಕುಸ್ತಿಕಲೆಯಲ್ಲಿ ಪರಿಣಿತರನ್ನಾಗಿ ಮಾಡಲೋಸುಗ ಭಾರತೀಯ ರೀತಿಯ ಕುಸ್ತಿ ಸಂಘದವರು ನಿಯಮಗಳನ್ನು ಸ್ವಲ್ಪ ಬದಲಿಸಿ, ಕುಸ್ತಿಯ ರೀತಿಯಲ್ಲಿ ಹೊಸತಂತ್ರಗಳನ್ನು ಅಳವಡಿಸಿದ್ದಾರೆ. ಭಾರತೀಯ ಮಾದರಿ ಕುಸ್ತಿಸಂಘದ ನಿಯಮದ ಪ್ರಕಾರ ಲೈಟ್‍ವೇಟ್ ವಿಭಾಗಕ್ಕೆ 10 ನಿಮಿಷಗಳೂ ಮಿಡ್ಲ್‍ವೇಟ್ ವಿಭಾಗಕ್ಕೆ 15 ನಿಮಿಷಗಳೂ ಲೈಟ್ ಹೆವಿ ಮತ್ತು ಹೆವಿವೇಟ್ ವಿಭಾಗಗಳಿಗೆ 20 ನಿಮಿಷಗಳೂ ನಿಗದಿಯಾಗಿದೆ. ಪಂದ್ಯದಲ್ಲಿ ಯಾರೊಬ್ಬರೂ ನಿಗದಿಯಾದ ಕಾಲಾವಧಿಯಲ್ಲಿ ಸೋಲದಿದ್ದರೆ, ಇಡೀ ಕುಸ್ತಿ ನಡೆದ ಕಾಲಾವಧಿಯಲ್ಲಿ, ಯಾವ ಜಟ್ಟಿ ಉತ್ತಮವಾಗಿ ಕಾದಾಡಿದ, ಉತ್ತಮ ಡಾವುಗಳನ್ನು ಮಾಡಿದ, ಮತ್ತು ತನ್ನ ಎದುರಾಳಿ ಮಾಡಿದ ಡಾವುಗಳಿಗೆ ಪ್ರತಿಯಾಗಿ ತೋಡುಮಾಡಿ ಎದುರಾಳಿ ಮಾಡಿದ ಡಾವಿನಿಂದ ತಪ್ಪಿಸಿಕೊಂಡ, ಮುಕ್ಕಾಲುಭಾಗ ಕುಸ್ತಿ ಆಗುವವರೆಗೆ ಎಷ್ಟುಬಾರಿ ಚಿತ್ತುಮಾಡಿದ, ಎದುರಾಳಿಯೊಡ್ಡಿದ್ದ ಇಂಥ ಅಪಾಯದಿಂದ ಹೇಗೆ ಪಾರಾದ-ಮುಂತಾದ ಎಲ್ಲ ಅಂಶಗಳನ್ನೂ ಪರಿಗಣಿಸಿ, ಯಾವ ಜಟ್ಟಿ ಹೆಚ್ಚು ಪಾಯಿಂಟು (ಅಂಕ)ಗಳಿಸಿದ ಎನ್ನುವ ಆಧಾರದ ಮೇಲೆ, ಅಖಾಡದ ಸುತ್ತ ಕುಳಿತಿರುವ ಮೂರು ಜನ ತೀರ್ಪುಗಾರರಿಂದ ಜಟ್ಟಿಯ ಸೋಲು ಗೆಲುವುಗಳು ನಿರ್ಧಾರವಾಗುತ್ತದೆ.
"https://kn.wikipedia.org/wiki/ಕುಸ್ತಿ" ಇಂದ ಪಡೆಯಲ್ಪಟ್ಟಿದೆ