ಆಪರೇಷನ್ ಒಪೇರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Osirak.jpg ಹೆಸರಿನ ಫೈಲು Didymರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೬ ನೇ ಸಾಲು:
1960 ರ ದಶಕದಲ್ಲಿಯೇ [[ಇರಾಕ್]] ತನ್ನ ಪರಮಾಣು ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಆದರೆ ೧೯೭೦ರ ಆರಂಭದವರೆಗೆ ಅದರಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿರಲಿಲ್ಲ. 1970 ರ ದಶಕದ ಮಧ್ಯಭಾಗದಲ್ಲಿ ಪರಮಾಣು ರಿಯಾಕ್ಟರ್ ಒಂದನ್ನು ಖರೀದಿಸುವ ಮೂಲಕ ಅದನ್ನು ವಿಸ್ತರಿಸಲು ಪ್ರಯತ್ನಿಸಿತು<ref>{{cite web |title=Iraqi Nuclear History |url=http://large.stanford.edu/courses/2016/ph241/basutkar1/ |website=stanford.edu |publisher=Nikhil Basutkar |accessdate=23 August 2020}}</ref>. ಈ ದಿಸೆಯಲ್ಲಿ ಗ್ಯಾಸ್ ಕೂಲ್ಡ್ ಗ್ರ್ಯಾಫೈಟ್ ಮಾಡರೇಟೆಡ್ [[ಪ್ಲುಟೋನಿಯಮ್|ಪ್ಲುಟೋನಿಯಂ]] ಉತ್ಪಾದನಾ ರಿಯಾಕ್ಟರ್ ಮತ್ತು ಮರು ಸಂಸ್ಕರಣಾ ಘಟಕವನ್ನು ಫ್ರಾನ್ಸಿನಿಂದ ಖರೀದಿಸಲು ಪ್ರಯತ್ನಿಸಿತು. ಆದರೆ ಫ್ರೆಂಚ್ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿತು. ನಂತರ [[ಇಟಲಿ]]ಯ ಕಡೆ ಮುಖ ಮಾಡಿದ ಇರಾಕ್, ಇಟಲಿ ದೇಶದಿಂದ ಸಿರೆನ್ ರಿಯಾಕ್ಟರನ್ನು ಖರೀದಿಸಲು ಪ್ರಯತ್ನಿಸಿತು.‌ ಆದರೆ ಇಲ್ಲಿಯೂ ವಿಫಲವಾದ ಇರಾಕ್, ಮತ್ತೆ ಪುನಃ ಫ್ರೆಂಚ್ ಸರ್ಕಾರದ ಕಡೆ ಮುಖ ಮಾಡಿತು. ಈ ಸಲ ಒಸಿರಿಸ್ ವರ್ಗದ, ಸಂಶೋಧನಾ ರಿಯಾಕ್ಟರನ್ನು ತನಗೆ ಮಾರಾಟ ಮಾಡುವಂತೆ ಮನವೊಲಿಸಿತು. ಈ ಪ್ರಸ್ತಾಪಕ್ಕೆ ಒಪ್ಪಿದ [[ಫ್ರಾನ್ಸ್]], ಶಾಂತಿಯುತ ಬಳಕೆಗೆ ಮತ್ತು ಪರಮಾಣು ಸಂಬಂಧಿ ಸಂಶೋಧನೆಗೆ ಮಾತ್ರ ಬಳಸಬೇಕು ಎಂಬ ನಿಯಮಗಳನ್ನು ವಿಧಿಸಿ, ಒಸಿರಿಸ್ ವರ್ಗದ ಪರಮಾಣು ರಿಯಾಕ್ಟರನ್ನು ಇರಾಕಿಗೆ ಮಾರಾಟ ಮಾಡಲು ಒಪ್ಪಿಕೊಂಡಿತು<ref>{{cite web |title=Nuclear weapon |url=https://www.britannica.com/technology/nuclear-weapon/Other-countries#ref988781 |website=www.britannica.com/ |publisher=britannica |accessdate=20 August 2020}}</ref>. 1976 ರಲ್ಲಿ ಅಂತಿಮಗೊಳಿಸಲಾದ ಈ ಒಪ್ಪಂದದ ಪ್ರಕಾರ ಫ್ರಾನ್ಸ್, ಇರಾಕಿಗೆ ಐಸಿಸ್ ಮಾದರಿಯ ರಿಯಾಕ್ಟರ್, ೯೩%ರಷ್ಟು ಪುಷ್ಟೀಕರಿಸಿದ, ೭೩ ಕಿಲೋಗ್ರಾಂಗಳಷ್ಟು [[ಯುರೇನಿಯಮ್|ಯುರೇನಿಯಂ]] ಅನ್ನು ಪೂರೈಸಿತು. ಒಟ್ಟು 300 ಮಿಲಿಯನ್ ವೆಚ್ಚದ ಈ ಒಪ್ಪಂದದಲ್ಲಿ, ತಾಂತ್ರಿಕ ಉಪಕರಣಗಳ ಜೊತೆಗೆ ಫ್ರಾನ್ಸ್, ಇರಾಕಿ ವಿಜ್ಞಾನಿಗಳಿಗೆ ಮತ್ತು ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ಸಹ ನೀಡಬೇಕಿತ್ತು. ನವೆಂಬರ್ 1975 ರಲ್ಲಿ, ಎರಡೂ ದೇಶಗಳು ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು<ref>{{cite web |title=Iraqi-French nuclear deal worries Israel |url=https://www.csmonitor.com/1980/0731/073155.html |website=www.csmonitor.com |publisher=The Christian Science Monitor |accessdate=21 August 2020}}</ref>.
 
 
[[File:Osirak.jpg|thumb|left|ಒಸಿರಾಕ್ ಪರಮಾಣು ಸ್ಥಾವರ]]
40 ಮೆಗಾವ್ಯಾಟ್ ಲೈಟ್-ವಾಟರ್ ನ್ಯೂಕ್ಲಿಯರ್ ರಿಯಾಕ್ಟರ್ ನಿರ್ಮಾಣವು 1979 ರಲ್ಲಿ [[ಬಾಗ್ದಾದ್]] ಬಳಿಯ ಅಲ್ ತುವೈಥಾ ನ್ಯೂಕ್ಲಿಯರ್ ಸೆಂಟರ್‌ನಲ್ಲಿ ಪ್ರಾರಂಭವಾಯಿತು. ಮುಖ್ಯ ರಿಯಾಕ್ಟರ್ ಅನ್ನು ಫ್ರಾನ್ಸ್, ಒಸಿರಾಕ್ (ಒಸಿರಿಸ್ ಹೆಸರಿನ ಮೊದಲ ಎರಡು ಶಬ್ಧ+ಇರಾಕ್ ಹೆಸರಿನ ಕೊನೆಯ ಎರಡು ಶಬ್ಧ) ಎಂದು ಹೆಸರಿಸಿತು. ಇರಾಕ್, ಮುಖ್ಯ ರಿಯಾಕ್ಟರನ್ನು ತಮ್ಮುಜ್ 1 ಎಂದೂ, ಇನ್ನೊಂದು ಚಿಕ್ಕ ರಿಯಾಕ್ಟರನ್ನು ತಮ್ಮುಜ್ 2 ಎಂದು ಹೆಸರಿಸಿತು. (ತಮ್ಮುಜ್ ಎಂಬುದು ಬೆಬಿಲೋನಿಯನ್ ಕ್ಯಾಲೆಂಡರ್‌ನಲ್ಲಿ ಬರುವ ೪ನೇ ತಿಂಗಳಾದ ಆರಾ ದಮೂಜು ದ ಅಧಿದೇವತೆಯ ಹೆಸರಾಗಿದೆ.) ಜುಲೈ 1980 ರಲ್ಲಿ, ಇರಾಕ್ ಫ್ರಾನ್ಸ್‌ನಿಂದ ಸರಿಸುಮಾರು 12.5 ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಅನ್ನು ಮೊದಲ ಶಿಪ್‌ಮೆಂಟಿನಲ್ಲಿ ಪಡೆದುಕೊಂಡಿತು. (ಒಟ್ಟು ೭೩ ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು ೬ ಹಂತಗಳಲ್ಲಿ ಪೂರೈಸಬೇಕಿತ್ತು.)<ref>{{cite web |title=The iraqi Nuclear program:Progress despite setbacks |url=https://nsarchive2.gwu.edu//NSAEBB/NSAEBB82/iraq19.pdf |website=nsarchive2.gwu.edu |publisher=The George Washington University |accessdate=21 August 2020}}</ref>
 
"https://kn.wikipedia.org/wiki/ಆಪರೇಷನ್_ಒಪೇರಾ" ಇಂದ ಪಡೆಯಲ್ಪಟ್ಟಿದೆ