ಹೆಲೆನ್ ಬೈಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
==ಕೊಲೆ ವಿಚಾರಣೆ==
ಜನವರಿ ೨೦೧೭,ಕಾನೂನು ಪರ ವಕೀಲರು ಇಯನ್ ಬೈಲಿಯನ್ನು ಉಸಿರುಕಟ್ಟಿ ಸಾಯಿಸುವ ಕೆಲ ತಿಂಗಳ ಮೊದಲಿನಿಂದಲೂ ಅವಳಿಗೆ ನಿದ್ದೆಯ ಮಂಪರಿಗೆ ತಳ್ಳುವ ಮಾದಕ ದ್ರವ್ಯವನ್ನು ಗುಟ್ಟಾಗಿ ಕೊಡುತ್ತಿದ್ದ ಎಂದು ಹೇಳಿದರು. ಹಾಗೂ ಆತ ಬೈಲಿಯನ್ನು ಜೀವಂತವಾಗಿಯೇ ಮನೆಯ ಸೆಸ್ ಪಿಟ್‌ನಲ್ಲಿ ಹಾಕಿದ ಎಂದು ದೂರಿದರು.ಬೈಲಿಯ ಸಾವಿನಿಂದ ಇಯನ್‌ಗೆ ಹೆಚ್ಚು ಲಾಭ ಲಭಿಸಿತು. ಬೈಲಿ ಯಾವುದೇ ಕೆಲಸವಿಲ್ಲದೆ ದುಡಿಮೆ ಮಾಡದ ಇಯನ್‌ನ ಪ್ರೀತಿಯಲ್ಲಿ ಕುರುಡಾಗಿ ತನ್ನ ಇಡೀ ಆಸ್ತಿಯನ್ನೆಲ್ಲಾ ಮುಂದೆ ತನ್ನನ್ನು ಮದುವೆಯಾಗಲಿರುವ ಇಯನ್‌ನ ಹೆಸರಿಗೆ ವಿಲ್ ಮಾಡಿದ್ದಳು.ಹಲವು ಬಾರಿ ಬೈಲಿ ಜೀವಂತವಾಗಿರುವಾಗಲೇ ಇಯನ್ ಪವರ್ ಆಫ್ ಅಟಾರ್ನಿ ಬಳಸಿ ಬೈಲಿಯ ಮನೆಯೊಂದನ್ನು ಮಾರಲು ಪ್ರಯತ್ನ ಮಾಡಿದ್ದರು.ಅಕ್ಕ ಪಕ್ಕದ ಮನೆಯವರು ಇಯನ್ ಗುಮ್ಮನುಸುಗ, ಯಾರ ಹತ್ತಿರವೂ ಮಾತನಾಡುತ್ತಿರಲಿಲ್ಲ ಆದರೆ ಬೈಲಿ ತುಂಬಾ ಸಂತೋಷದಿಂದ ಎಲ್ಲರ ಜೊತೆ ಬೆರೆತು ಮಾತನಾಡುತ್ತಿದ್ದರು. ಆದರೆ ಕೆಲವೊಮ್ಮೆ ಇಯನ್ ತುಂಬಾ ಕ್ರೋಧಕ್ಕೆ ಒಳಗಾಗಿ ವರ್ತಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಹೇಳಿದರು.ಇಯನ್ ಅವರನ್ನು ಪ್ರಶ್ನಿಸಿದಾಗ ಅವರಿಗೆ ಬೈಲಿಯ ಕಣ್ಣು ಗುಡ್ಡೆಯ ಬಣ್ಣವಾಗಲಿ, ಅವಳ ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕ ಯಾವುದು ಸಹ ಅವರಿಗೆ ಗೊತ್ತಿರಲ್ಲಿಲ್ಲ.ಬೈಲಿಯ ತಾಯಿಯು ಸಹ ಬೈಲಿ ನಾಪತ್ತೆಯಾಗುವುದಕ್ಕಿಂತ ಸ್ವಲ್ಪ ದಿನದ ಕೆಳಗೆ ಆಕೆ ಅತಿ ನಿದ್ದೆ,ಮಂಪರು ಎನ್ನುತ್ತಿದ್ದಳು ಎಂದು ಸಾಕ್ಷಿ ನೀಡಿದರು. ಬೈಲಿಯ ಶರೀರದಲ್ಲಿ ವಿರೋಧಿ ನಿದ್ರಾಹೀನತೆಯ ಔಷಧಿಯ ಕುರುಹುಗಳು ಸಹಾ ಸಿಕ್ಕಿತು.ಕೊನೆಗೆ ಬಹಳಷ್ಟು ವಾದ ವಿವಾದಗಳ ನಂತರ ಫೆಬ್ರುವರಿ ೨೨, ೨೦೧೭ರಂದು [[ನ್ಯಾಯಾಲಯ]] ಇಯನ್ ಅಪರಾಧಿ ಎಂದು ಘೋಷಿಸಿ ೩೪ ವರುಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿತು. ಬೈಲಿಯ ಈ ಕೃತ್ಯ ಕಂಡ ಪೋಲಿಸರು ಇಯನ್‌ನ ಮೊದಲನೆಯ ಹೆಂಡತಿಯ ಸಾವನ್ನು ಪರಿಶೀಲಿಸಲು ಮುಂದಾದರು.<ref><nowiki>https://www.theguardian.com</nowiki> › World › UK News › Crime</ref>
 
ಒಟ್ಟಿನಲ್ಲಿ ಪ್ರತಿಭಾವಂತ ಬರಹಗಾರ್ತಿ ಬೈಲಿ ಕುರುಡು ಪ್ರೇಮಕ್ಕೆ ಒಳಗಾಗಿ ದುರಂತ ಅಂತ್ಯವನ್ನು ಕಂಡರು.[[ಯುನೈಟೆಡ್ ಕಿಂಗ್‌ಡಂ|ಬ್ರಿಟನ್]] ದೇಶದ ಹಲವರು ಇಂದು ಸಹಾ ಬೈಲಿಯ ಮಾತು,ಬರಹ ಹಾಗು ಪುಸ್ತಕಗಳನ್ನು ಓದಿ ಅವರನ್ನು ನೆನೆಯುತ್ತಾರೆ.
 
== ಸಹ ನೋಡಿ ==
"https://kn.wikipedia.org/wiki/ಹೆಲೆನ್_ಬೈಲಿ" ಇಂದ ಪಡೆಯಲ್ಪಟ್ಟಿದೆ