ವಿಶಾಲಾಕ್ಷಿ
ಶಿವನ ಮಡದಿಯಾದ ಸತೀದೇವಿಯು ವಿಶಾಲಾಕ್ಷಿ ಎಂಬ ಹೆಸರಿನಿಂದ ಕಾಶಿಯಲ್ಲಿ ಪೂಜಿಸಲ್ಪಡುತ್ತಾಳೆ. ಇಂದಿನ ವಿಶ್ವನಾಥ ದೇವಸ್ಥಾನದ ಹಿಂದಿರುವ ಮೀರ ಘಟ್ಟದ ಬಳಿ ಇವಳ ದೇವಸ್ಥಾನವಿದೆ. ಸ್ತ್ರೀಸೌಂದರ್ಯದ ಕುರುಹಾಗಿ ವಿಶಾಲವಾದ ಕಣ್ಣುಳ್ಳವಳಾದ ಇವಳು, ವಿಶ್ವನಾಥನ ಮಡದಿಯೂ ಆಗಿರುವದರಿಂದ ಜಗತ್ತನ್ನು ತನ್ನ ವಿಶಾಲವಾದ ಕಣ್ಣುಗಳಿಂದ ವೀಕ್ಷಿಸುತ್ತಿರುವಳು. ಕೆಲವರು ಇದನ್ನು ೫೧ ಶಕ್ತಿಪೀಠಗಳಲ್ಲೊಂದನ್ನಾಗಿ ಪರಿಗಣಿಸುವರು. ಕೆಲವರ ಪ್ರಕಾರ ಸತೀದೇವಿಯ ಕಿವಿಓಲೆಯು ಬಿದ್ದ ಸಮೀಪದ ಮಣಿಕರ್ಣಿಕೆಯು ಶಕ್ತಿಪೀಠ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |