ವಿಲಿಯಮ್ ರಾಲ್ಫ್ ಇಂಜ್
ವಿಲಿಯಮ್ ರಾಲ್ಫ್ ಇಂಜ್ (6 ಜೂನ್ 1860 – 26 ಫೆಬ್ರವರಿ 1954) ಇಂಗ್ಲೆಂಡಿನ ಧರ್ಮಬೋಧಕ ಮತ್ತು ಉದಾತ್ತ ಗ್ರಂಥಕರ್ತ.
ವಿಲಿಯಮ್ ಇಂಜ್, KCVO | |
---|---|
Born | ವಿಲಿಯಂ ರಾಲ್ಫ್ ಇಂಗೆ 6 ಜೂನ್ 1860 ಕ್ರೇಕ್, ಯಾರ್ಕ್‌ಷೈರ್, ಇಂಗ್ಲೆಂಡ್, ಯುಕೆ |
Died | 26 ಫೆಬ್ರವರಿ 1954 ವಾಲಿಂಗ್ಫೋರ್ಡ್, ಆಕ್ಸ್ಫರ್ಡ್ಶೈರ್, ಇಂಗ್ಲೆಂಡ್, ಯುಕೆ |
Education | ಎಟನ್ ಕಾಲೇಜು ಮತ್ತು ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ |
Spouse | ಮೇರಿ ಕ್ಯಾಥರೀನ್ ಇಂಗೆ |
Children | ಪೌಲಾ ಇಂಗೆ |
ಬಾಲ್ಯ ಮತ್ತು ಜೀವನ
ಬದಲಾಯಿಸಿಯಾರ್ಕ್ಷೈರಿನಲ್ಲಿ ಜನ್ಮತಾಳಿದ. ಇಟನ್ನಿನಲ್ಲೂ ಕೇಂಬ್ರಿಜ್‍ನ ಕಿಂಗ್ಸ್ ಕಾಲೇಜಿನಲ್ಲೂ ಶಿಕ್ಷಣಪಡೆದ. ಅಲ್ಲಿಯೇ 1880 ರಿಂದ 1884ರ ವರೆವಿಗೆ ಶಿಕ್ಷಕನಾಗಿದ್ದು 1889ರಿಂದ 1904ರ ವರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೆಲೋ ಆಗಿದ್ದ. 1905ರಲ್ಲಿ ಲಂಡನ್ನಿನಲ್ಲಿ ಆಲ್ ಸೇಂಟ್ಸ್ ಚರ್ಚಿನ ಪಾದ್ರಿಯಾಗಿದ್ದು ಪುನಃ 1907ರಲ್ಲಿ ಕೇಂಬ್ರಿಜ್‍ನಲ್ಲಿ ಮತಧರ್ಮಶಾಸ್ತ್ರದ ಪ್ರಾಧ್ಯಾಪಕನಾದ. 1911ರಲ್ಲಿ ಸೇಂಟ್ ಪಾಲ್ ಕೆಥೆಡ್ರಲ್‍ನ ಡೀನ್ ಪದವಿಗೆ ಏರಿದ. ಅಲ್ಲಿರುವಾಗಲೆ ತನ್ನ ಉದ್ಗ್ರಂಥಗಳನ್ನು ರಚಿಸಿದ. ಈತನ ಗ್ರಂಥಗಳು ತತ್ತ್ವಶಾಸ್ತ್ರ ಪ್ರಪಂಚದಲ್ಲಿ ಅತ್ಯಂತ ಬೋಧಪ್ರದವಾಗಿವೆ. ಭಾಷೆ ಅತಿ ಸುಂದರವಾಗಿದೆ.
ಸಾಹಿತ್ಯ ರಚನೆ
ಬದಲಾಯಿಸಿಈತನ ಮುಖ್ಯ ಕೃತಿಗಳು : ಕ್ರಿಶ್ಚಿಯನ್ ಮಿಸ್ಟಿಸಿಸಂ (1899); ಫೇತ್ ಅಂಡ್ ನಾಲೆಜ್; ಸ್ಟಡೀಸ್ ಆಫ್ ಇಂಗ್ಲಿಷ್ ಮಿಸ್ಟಿಕ್ಸ್; ಟ್ರುತ್ ಅಂಡ್ ಫಾಲ್ಸ್ ಹುಡ್ ಇನ್ ರಿಲಿಜನ್ (1906); ಪರ್ಸನಲ್ ಐಡಿಯಲಿಸಂ ಅಂಡ್ ಮಿಸ್ಟಿಸಿಸಂ: ಫೇತ್ ಅಂಡ್ ಇಟ್ಸ್ ಸೈಕಾಲಜಿ; ದಿ ಫಿಲಾಸಫಿ ಆಫ್ ಪ್ಲಾಟೈನಸ್ (1918); ಔಟ್‍ಸ್ಟೋಕನ್ ಎಸ್ಸೇಸ್ (1919, 1922) ಸೊಸೈಟಿ ಇನ್ ರೋಮ್ ಅಂಡರ್ ದಿ ಸೀಸûರ್ಸ (1886); ದಿ ಚರ್ಚ್ ಇನ ದಿ ವಲ್ರ್ಡ್; ಗಾಡ್ ಅಂಡ್ ದಿ ಅಸ್ಟ್ರಾನಮರ್ಸ್; ಎ ರಸ್ಟಿಕ್ ಮಾರಲಿಸ್ಟ್; ದಿ ಫಾಲ್ ಆಫ್ ದಿ ಐಡಲ್ಸ್; ಮಿಸ್ಟಿಸಿಸಂ ಇನ್ ರಿಲಿಜನ್ (1947); ದಿ ಎಂಡ್ ಆಫ್ ದಿ ಏಜ್ (1948).
ತತ್ವಜ್ಞಾನಿ
ಬದಲಾಯಿಸಿಪ್ಲೇಟೋನ ಅನಂತರ ಬಂದ ಸುಪ್ರಸಿದ್ಧ ತತ್ವಜ್ಞಾನಿಯಾದ ಪ್ಲಾಟೈನಸ್‍ನ ಸಿದ್ಧಾಂತಗಳನ್ನು ಹೊಸರೀತಿಯಲ್ಲಿ ನಿರೂಪಿಸಿ ಎರಡು ಮಹತ್ವದ ಗ್ರಂಥಗಳನ್ನು ಈತ ಜಗತ್ತಿಗೆ ನೀಡಿದ್ದಾನೆ. ತಾನು ಅವನ ಶಿಷ್ಯನೆಂದೂ 30 ವರ್ಷಗಳ ಕಾಲ ಅವರ ತತ್ತ್ವಗಳನ್ನು ಅಧ್ಯಯನ ಮಾಡಿ ಅವುಗಳ ಶಾಶ್ವತ ಮೌಲ್ಯವನ್ನು ಕಂಡುಕೊಂಡವನೆಂದೂ ಹೇಳಿಕೊಂಡಿದ್ದಾನೆ. ಪ್ಲಾಟೈನಸ್‍ನನ್ನು ಪಾಶ್ಚಾತ್ಯರು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲವೆಂದು ಸ್ಪಷ್ಟಪಡಿಸಿ ಕ್ರೈಸ್ತಧರ್ಮದ ಮೂಲವನ್ನೇ ಅದರಲ್ಲಿ ತೋರಿಸಿಕೊಟ್ಟಿದ್ದಾನೆ.
ಮಾನವನ ಅಧ್ಯಾತ್ಮಜೀವನ ಪ್ರತ್ಯಕ್ಷ ಜಗತ್ತಿಗಿಂತಲೂ ಸತ್ಯವಾದುದೆಂದೂ ಭಗವಂತ ಜಗತ್ತನ್ನು ಸೃಷ್ಟಿಸಿ ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆಂದೂ ಮಾನವ ತನ್ನ ವ್ಯಕ್ತಿತ್ವವನ್ನು ಭಗವಂತನ ಇಚ್ಛೆಗೆ ಒಪ್ಪಿಸಿ ಮುಕ್ತಿಪಡೆಯಬೇಕೆಂದೂ ಈತ ತನ್ನ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾನೆ. ದೈವಸಾಕ್ಷಾತ್ಕಾರದ ಆವಶ್ಯಕತೆಯನ್ನು, ಮಾನವನ ನಶ್ವರತೆಯನ್ನು ವಿಶದಪಡಿಸಿದ್ದಾನೆ. ಸಹಜವಾದ ಅಧ್ಯಾತ್ಮಜೀವನವನ್ನು ಬಿಟ್ಟು ಅರ್ಥವಿಲ್ಲದ ಬಾಳನ್ನು ಮಾನವ ನಡೆಸುತ್ತಾನೆಂದು ಶೋಕಿಸಿದ್ದಾನೆ. ಆಧುನಿಕ ಜಗತ್ತಿನ ವೈe್ಞÁನಿಕ ನಾಗರಿಕತೆಯ ಅಪಾಯವನ್ನು ಕುರಿತು ಎಚ್ಚರಿಕೆ ಕೊಟ್ಟಿದ್ದಾನೆ. ಸತ್ಯ, ಧರ್ಮ, ಸೌಂದರ್ಯಗಳೇ ಅಂತಿಮ ಮೌಲ್ಯಗಳು, ಅವುಗಳ ಅಂತಿಮ ಸಮರಸವೇ ಭಗವಂತ ಎಂದು ಹೇಳಿದ್ದಾನೆ. ಇವನನ್ನು ಬ್ರಿಟನ್ನಿನ ಅಧ್ಯಾತ್ಮ ಜೀವನದ ಪ್ರತಿನಿಧಿ ಎಂದೂ ಮಾರ್ಗದರ್ಶಕನೆಂದೂ ಹೇಳಬಹುದು. ತತ್ತ್ವಶಾಸ್ತ್ರಕ್ಕೂ ಮತಧರ್ಮಶಾಸ್ತ್ರಕ್ಕೂ ವಿರೋಧವಿಲ್ಲವೆಂದೂ ಅವರೆಡೂ ಪರಸ್ಪರ ಪೋಷಕಗಳೆಂದೂ ಸಿದ್ಧಾಂತಪಡಿಸಿದವನೀತ. ಭಗವದನುಭವ ವಿಚಾರಶೀಲವಲ್ಲವೆಂದೂ ವಿಚಾರದ ಪರಮಾವಧಿಯೇ ದೈವಸಾಕ್ಷಾತ್ಕಾರವೆಂದೂ ಹೇಳಿದ್ದಾನೆ.ಹೀಗೆ ಆಧುನಿಕ ತತ್ತ್ವಶಾಸ್ತ್ರದ ಸೀಮೆಯನ್ನು ಈತ ವಿಸ್ತರಿಸಿದ್ದಾನೆ. ಜೀವನ ದರ್ಶನತತ್ತ್ವ ದೇಶಕಾಲಾತೀತವಾದುದು ಎಂದು ಪ್ರಚುರಪಡಿಸಿದ್ದಾನೆ. ಐತಿಹಾಸಿಕ ಸಂಶೋಧನೆಯಿಂದ ಸಂಸ್ಕøತಿಯ ತಾತ್ತ್ವಿಕ ಹಿನ್ನೆಲೆಯನ್ನು ಪರಿಶೀಲಿಸಿದ್ದಾನೆ.ಜರ್ಮನಿಯ ಕ್ಯಾಂಟ್ ಮತ್ತು ಹೆಗೆಲ್ಲರ ತತ್ತ್ವಗಳಿಗೆ ಈತ ಮನ್ನಣೆ ಕೊಟ್ಟಿಲ್ಲ. ಜರ್ಮನಿಯ ಅನ್ರ್ಸ್‍ಟ್ ಟ್ರಾಯೆಲ್ಚ್ ಎಂಬ ತಾತ್ತ್ವಿಕನೇ ಅತ್ಯುತ್ತಮ ದಾರ್ಶನಿಕನೆಂದು ಈತನ ಭಾವನೆ.
ಪ್ರಕಟವಾದ ಪುಸ್ತಕಗಳು
ಬದಲಾಯಿಸಿ- Society in Rome under the Caesars 1888
- Eton Latin Grammar 1888
- Christian Mysticism (Bampton Lectures) 1899
- Faith 1900
- Contentio Veritatis Essays in Constructive Theology by Six Oxford Tutors (two essays) 1902
- Faith and Knowledge: Sermons 1904
- Light, Life and Love (Selections from the German mystics of the Middle Ages) 1904 also online at Project Gutenberg and CCEL
- Studies of English Mystics 1905
- Truth and Falsehood in Religion (Cambridge Lectures 1906
- Personal Idealism and Mysticism (Paddock Lectures) 1906
- All Saints' Sermons 1907
- Faith and its Psychology (Jowett Lectures) 1909
- Speculum Animae 1911
- The Church and the Age 1912
- The Religious Philosophy of Plotinus and some Modern Philosophies of Religion 1914
- Types of Christian Saintliness 1915
- Christian Mysticism, considered in eight lectures delivered before the University of Oxford (1918)
- The Philosophy of Plotinus (Gifford Lectures) 1918. Online: Volume 1 Volume 2 Print versions: ISBN 1-59244-284-6 (softcover), ISBN 0-8371-0113-1 (hardcover)
- Outspoken Essays I 1919 & II 1922
- The Idea of Progress (Romanes Lecture) 1920
- The Victorian Age: the Rede Lecture for 1922 1922
- Personal Religion and the Life of Devotion 1924
- Lay Thoughts of a Dean 1926
- The Platonic Tradition in English Religious Thought Hulsean Lectures 1926 ISBN 0-8414-5055-2
- The Church in the World 1927
- Assessments and Anticipations 1929
- Christian Ethics and Modern Problems 1930
- More Lay Thoughts of a Dean 1931
- Things New and Old 1933
- God and the Astronomers 1933
- The Post Victorians 1933 (Introduction only)
- The Gate of Life 1935
- Our Present Discontents 1938 ISBN 0-8369-2846-6
- A Pacifist in Trouble 1939 ISBN 0-8369-2192-5
- The Fall of the Idols 1940
- Talks in a Free Country 1942 ISBN 0-8369-2774-5
- Mysticism in Religion 1947 ISBN 0-8371-8953-5
- The End of an Age and Other Essays 1948
- Diary of a Dean 1949
- The Things That Remain edited by W R Matthews 1958
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Bibliographic directory from Project Canterbury
- Works by ವಿಲಿಯಮ್ ರಾಲ್ಫ್ ಇಂಜ್ at Project Gutenberg
- William Ralph Inge Archived 2008-04-20 ವೇಬ್ಯಾಕ್ ಮೆಷಿನ್ ನಲ್ಲಿ. biographical notes and Lectures available from the Gifford Lectures website
- Portraits of William Ralph Inge Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.
- Profile
- HyperDictionary Definition Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- W.R. Inge from Questia.com
- Information from Christian Classic Ethereal Library