ವಿದಾಯ ಪಿ.ಶೇಷಾದ್ರಿಯವರು ನಿರ್ದೇಶಿರುವ, ೨೦೧೫ರಲ್ಲಿ ತೆರೆಕಂಡ ಚಿತ್ರ. ಮುಖ್ಯ ಭೂಮಿಕೆಯಲ್ಲಿ ಸುಚೇಂದ್ರ ಪ್ರಸಾದ್, ಲಕ್ಷ್ಮೀ ಗೋಪಾಲಸ್ವಾಮಿ, ಎಚ್.ಜಿ.ದತ್ತಾತ್ರೆಯ, ಪ್ರತಾಪ್ ನಟಿಸಿದ್ದಾರೆ.

ವಿದಾಯ
ನಿರ್ದೇಶನ[ಪಿ. ಶೇಷಾದ್ರಿ]
ನಿರ್ಮಾಪಕಬಸಂತ್ ಕುಮಾರ್ ಪಾಟೇಲ್
ಅಮೃತ ಪಾಟೇಲ್
ಲೇಖಕಪಿ.ಶೇಷಾದ್ರಿ
ಚಿತ್ರಕಥೆಪಿ.ಶೇಷಾದ್ರಿ
ಪಾತ್ರವರ್ಗಲಕ್ಷ್ಮೀ ಗೋಪಾಲಸ್ವಾಮಿ
ಸುಚೇಂದ್ರ ಪ್ರಸಾದ್
ಎಚ್.ಜಿ.ದತ್ತಾತ್ರೆಯ
ಪ್ರತಾಪ್
ಸಂಗೀತಸೋಮರಾಜು
ಛಾಯಾಗ್ರಹಣಸಭ ಕುಮಾರ್
ಸಂಕಲನಬಿ ಎಸ್ ಕೆಂಪರಾಜು
ಸ್ಟುಡಿಯೋಬಸಂತ್ ನಿರ್ಮಾಣ
ಬಿಡುಗಡೆಯಾಗಿದ್ದು5 June 2015
ಅವಧಿ102 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ಬದಲಾಯಿಸಿ

ಅಫಘಾತದಿಂದ ದೀರ್ಘಕಾಲ ಹಾಸಿಗೆ ಹಿಡಿದಿದ್ದ ವಾಸುಕಿ ಎರಡು ಮಕ್ಕಳ ತಂದೆ. ವಾಸುಕಿ ಎಷ್ಟೇ ಕೋರಿಕೊಂಡರೂ 'ದಯಾ ಮರಣ'ವನ್ನು ವಿರೋಧಿಸುತ್ತಿದ್ದ, ವಾಸುಕಿಯ ಪತ್ನಿ, ಮೀರ ಕೊನೆಗೆ ಎಲ್ಲಾ ಭರವಸೆಗಳ್ಳನ್ನು ಕಳೆದುಕೊಂಡು, ಗಂಡನ ಇಚ್ಛೆಯಂತೆ ದಯಾಮರಣಕ್ಕೆ(passive euthanasia) ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸುತ್ತಾಳೆ. ಆದರೆ ಈ ವಿಷಯ ಮಾಧ್ಯಮದಲ್ಲಿ ಹೊಸ ತಿರುವು ಪಡೆದುಕೊಂಡು, ಮೀರ ಗಂಡನನ್ನೇ ಕೊಲ್ಲಲುವವಳಾಗಿ ಚಿತ್ರಿಸಲಾಗುತ್ತದೆ. ವಾಸುಕಿಯ ಅರ್ಜಿಯನ್ನು ಕಾನೂನು ತಿರಸ್ಕರಿಸುತ್ತದೆ. ವಾಸುಕಿಗೆ ನಿರಾಸೆ, ಆಶಾಭಂಗವಾದರೂ, ಮೀರಾಳಿಗೆ ಸಂತೋಷವಾಗುತ್ತದೆ. ವಾಸುಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೀರಾಳ ತಾಯಿಯ ಸಲಹೆಯಂತೆ ಅವನ ಊರಿನ ಹತ್ತಿರದ ಇನ್ನೊಂದು ಊರಿಗೆ ಕರೆದೊಯ್ಯಲಾಗುತ್ತದೆ. ಸಮುದ್ರ ದಂಡೆಯಲ್ಲಿರುವ ಆ ಊರಿನ ವಾಸ, ವಾಸುಕಿಯಲ್ಲಿ ಕೆಲವು ಭರವಸೆಗಳನ್ನು ಹುಟ್ಟುಹಾಕುತ್ತದೆ. ಆ ಪ್ರಕೃತಿ ಚಿಕಿತ್ಸಾಲಯದಲ್ಲಿ , ಲಕ್ಷ್ಮಿಯ ಗಮನವನ್ನು ವಯಸ್ಸಾದ ಕರ್ನಲ್ ಸೆಳೆಯುತ್ತಾರೆ. ತನ್ನ ಸುತ್ತಮುತ್ತ ನೂರಾರು ಸಾವನ್ನು ನೋಡಿಯೂ, ತನಗೆ ನೋವಿನ ಅರಿವೇಯಿಲ್ಲದಂತೆ ಇರುವ, ಕರ್ನಲ್ ನ ಉತ್ಸಾಹ ಮೀರಾಳನ್ನು ಗಟ್ಟಿಮಾಡುತ್ತದೆ. ವಾಸುಕಿ ಗುಣವಾದಂತೆ, ಚೇತರಿಸಿಕೊಂಡಂತೆ ಭಾಸವಾಗುತ್ತದೆ. ಅದೇ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್), ದಯಾಮರಣದ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನಿಸುತ್ತದೆ. ಆದರೆ ವಾಸುಕಿಯ ಆರೋಗ್ಯ ಅದೇ ಸಮಯದಲ್ಲಿ ಕ್ಷೀಣಿಸುತ್ತದೆ. ಮುಂದೆ ಏನಾಗುತ್ತದೆ ಎನ್ನುವುದೇ ತವಕದ ಪ್ರಶ್ನೆ.

ನಟ ವರ್ಗ

ಬದಲಾಯಿಸಿ
  • ಸುಚೇಂದ್ರ ಪ್ರಸಾದ್
  • ಲಕ್ಷ್ಮೀ ಗೋಪಾಲಸ್ವಾಮಿ
  • ಎಚ್.ಜಿ.ದತ್ತಾತ್ರೆಯ
  • ಪ್ರತಾಪ್

ಊಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ