ವಿಜಯ ಬ್ಯಾಂಕ್

(ವಿಜಯಾ ಬ್ಯಾಂಕ್ ಇಂದ ಪುನರ್ನಿರ್ದೇಶಿತ)

ವಿಜಯಾ ಬ್ಯಾಂಕ್ ಮಂಗಳೂರಿನಲ್ಲಿ ಸ್ಥಾಪನೆಯಾದ ಹಲವಾರು ಬ್ಯಾಂಕುಗಳಲ್ಲಿ ಒಂದು.

ವಿಜಯಾ ಬ್ಯಾಂಕ್
ಸಂಸ್ಥೆಯ ಪ್ರಕಾರಸಾರ್ವಜನಿಕ ಬಿಎಸ್‌ಇ: 532401
ಸ್ಥಾಪನೆ೧೯೩೧ ಮಂಗಳೂರು, ಭಾರತ
ನಿಷ್ಕ್ರಿಯ1 ಏಪ್ರಿಲ್ 2019 (2019-04-01)
ಮುಖ್ಯ ಕಾರ್ಯಾಲಯ ಬೆಂಗಳೂರು, ಭಾರತ
ಪ್ರಮುಖ ವ್ಯಕ್ತಿ(ಗಳು)ಆಲ್ಬರ್ಟ್ ಟೌರೊ, ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ
ಉದ್ಯಮಆರ್ಥಿಕ
ವಾಣಿಜ್ಯ ಬ್ಯಾಂಕುಗಳು
ಉದ್ಯೋಗಿಗಳು11,528 (2007-08)
ಜಾಲತಾಣwww.vijayabank.com
ಅತ್ತಾವರ ಬಾಲಕೄಷ್ಙ ಶೆಟ್ಟಿ

ಚರಿತ್ರೆ

ಬದಲಾಯಿಸಿ

ಇದನ್ನು ಅತ್ತಾವರ ಬಾಲಕೃಷ್ಣ ಶೆಟ್ಟಿ ಅಕ್ಟೋಬರ್ ೨೩,೧೯೩೧ ರಂದು ಸ್ಥಾಪಿಸಿದರು.[]ಇದನ್ನು ವಿಜಯದಶಮಿಯ ದಿನ ಸ್ಥಾಪನೆ ಮಾಡಿದುದರಿಂದ ಇದಕ್ಕೆ ವಿಜಯಾ ಬ್ಯಾಂಕ್ ಎಂದು ಹೆಸರಾಯಿತು.[] ಇದನ್ನು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಬ್ಯಾಂಕಿಂಗ್ ಹವ್ಯಾಸ,ಉದ್ಯಮಶೀಲತೆ ಬೆಳಸಲು ಮತ್ತು ಅವರ ಆವಶ್ಯಕತೆಗಳಿಗೆ ಸುಲಭ ಹಣಕಾಸಿನ ಒದಗಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಥಾಪನೆ ಮಾಡಲಾಯಿತು.೧೯೫೮ರಲ್ಲಿ ಇದು ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಯಾದರೆ,ಎಪ್ರಿಲ್ ೧೫,೧೯೮೦ರಂದು ರಾಷ್ಟ್ರೀಕರಣಗೊಂಡಿತು.೧೯೬೦-೧೯೬ರ ಅವಧಿಯಲ್ಲಿ ಇದು ಒಂಬತ್ತು ಸಣ್ಣ ಬ್ಯಾಂಕ್‍ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಅಖಿಲ ಭಾರತ ಮಟ್ಟದ ಬ್ಯಾಂಕಾಗಿ ಬೆಳೆಯಿತು. ಇದರ ಹಿಂದಿನ ಚಾಲಕಶಕ್ತಿಯಾಗಿದ್ದವರು ಅಂದಿನ ಅಧ್ಯಕ್ಷರಾದ ಮುಲ್ಕಿ ಸುಂದರರಾಮ ಶೆಟ್ಟಿಯವರು.

ಉಲ್ಲೇಖಗಳು

ಬದಲಾಯಿಸಿ
  1. http://www.deccanherald.com/content/141131/a-banker-erased-memory.html
  2. "Vijaya Bank - Inception". Archived from the original on 2008-09-08. Retrieved 2015-08-26.

ಬಾಹ್ಯ ಸಂಪರ್ಕಗಳು

ಬದಲಾಯಿಸಿ