ವಿಜಯಲಕ್ಷ್ಮೀ ನವನೀತಕೃಷ್ಣನ್

ವಿಜಯಲಕ್ಷ್ಮಿ ನವನೀತಕೃಷ್ಣನ್ ಅವರು ತಮಿಳು ಜಾನಪದ ಗಾಯಕಿ, ಸಂಯೋಜಕಿ ಮತ್ತು ತಮಿಳು ಜಾನಪದ ಕಲೆಯ ಪ್ರಸಿದ್ಧ ಪ್ರತಿಪಾದಕರು. ಅವರು ಇತ್ತೀಚೆಗೆ ಭಾರತ ಸರ್ಕಾರದಿಂದ ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಪತಿ ಎಂ. ನವನೀತಕೃಷ್ಣನ್ ಅವರೊಂದಿಗೆ ಅವರು ತಮಿಳು ಜಾನಪದ ಸಂಗೀತ ಮತ್ತು ನೃತ್ಯಗಳ ಕುರಿತು ಹಲವಾರು ವರ್ಷಗಳ ಸಂಶೋಧನೆ ಮತ್ತು ಅಧ್ಯಯನವನ್ನು ನಡೆಸಿದ್ದಾರೆ ಮತ್ತು ಪ್ರಾಚೀನ ತಮಿಳು ಜಾನಪದ ಹಾಡುಗಳು ಮತ್ತು ನೃತ್ಯಗಳ ಸಂಶೋಧನೆ, ಸಂಗ್ರಹಣೆ, ಪುನರುಜ್ಜೀವನ ಮತ್ತು ದಾಖಲೀಕರಣಕ್ಕಾಗಿ ಜೀವಿತಾವಧಿಯನ್ನು ಮೀಸಲಿಟ್ಟಿದ್ದಾರೆ. ಭಾರತ ಸರ್ಕಾರವು ೨೦೧೮ರ ಸಾಲಿನ ರಾಷ್ಟ್ರದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಕಲಾಕ್ಷೇತ್ರಕ್ಕೆ ವಿಜಯಲಕ್ಷ್ಮಿ ನವನೀತಕೃಷ್ಣನ್ ಅವರ ಕೊಡುಗೆಗಾಗಿ ಘೋಷಿಸಿದೆ.

ವಿಜಯಲಕ್ಷ್ಮಿ ನವನೀತಕೃಷ್ಣನ್
ಡಾ. ವಿಜಯಲಕ್ಷ್ಮಿ ನವನೀತಕೃಷ್ಣನ್
ಜನನ೨೭ ಜನವರಿ ೧೯೪೬
ವೃತ್ತಿಗಾಯಕಿ, ಸಂಯೋಜಕಿ, ರಚನಕಾರ್ತಿ ಮತ್ತು ಪ್ರೊಫ಼ೆಸರ್
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿತಮಿಳು ಜಾನಪದ ಕಲೆ

ಬಾಲ್ಯ ಮತ್ತು ವೃತ್ತಿಜೀವನ

ಬದಲಾಯಿಸಿ

ವಿಜಯಲಕ್ಷ್ಮಿ ಅವರು ರಾಜಪಾಳ್ಯಂ ಬಳಿಯ ಚಿನ್ನಸೂರೈಗಾಯಮಪಟ್ಟಿಯಲ್ಲಿ ಜನಿಸಿದರು. ಆಕೆಯ ತಂದೆ ಪೊನ್ನುಸ್ವಾಮಿ ಮತ್ತು ತಾಯಿ ಮೂಕಮ್ಮಾಳ್. ಅವರು ಪಿಎಚ್.ಡಿ. ಎಂ.ಎ ಪದವಿಯನ್ನು ಪಡೆದಿದ್ದು, ಅವರು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಜಾನಪದ ಕಲೆಗಳ ಕೇಂದ್ರದಲ್ಲಿ ಕಲಾ ಇತಿಹಾಸ ಮತ್ತು ಸೌಂದರ್ಯದ ಲಲಿತಕಲೆಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅವರ ಪತಿ ಡಾ.ನವನೀತಾ ಕೃಷ್ಣನ್ ಕೂಡ ಇದೇ ಕ್ಷೇತ್ರದಲ್ಲಿ ಪ್ರಾಧ್ಯಾಪಕರು ಆಗಿದ್ದಾರೆ. ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದಿಂದ ಜಾನಪದ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ದಂಪತಿಗಳು ಜಾನಪದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಅವರ ತಂಡದ ಜೊತೆಗೆ ಅವರು ಪ್ರಪಂಚದಾದ್ಯಂತದ ತಮಿಳು ಜಾನಪದ ಸಂಗೀತದ ಅಭಿಜ್ಞರು ಮತ್ತು ಸಂಗೀತ ಪ್ರೇಮಿಗಳು ಬಯಸಿದ ಪ್ರದರ್ಶನಗಳನ್ನು ನಡೆಸುತ್ತಾರೆ. ದಂಪತಿಗಳು ಅಧಿಕೃತ ತಮಿಳು ಜಾನಪದ ಸಂಗೀತದ ಹಲವಾರು ಹಾಡುಗಳನ್ನು ಹೊರತಂದಿದ್ದಾರೆ. ಅಧಿಕೃತ ಜಾನಪದ ಸಂಗೀತದ ೧೦,೦೦೦ ಕ್ಕೂ ಹೆಚ್ಚು ಆಡಿಯೊ ಕ್ಯಾಸೆಟ್‌ಗಳನ್ನು ರೆಕಾರ್ಡ್ ಮಾಡಿದ ನಂತರ ದಂಪತಿಗಳು, ಈಗ ತಮಿಳು ಜಾನಪದ ಸಂಗೀತದ ವ್ಯಾಕರಣ ಮತ್ತು ಮಾರ್ಗದರ್ಶಿಯನ್ನು ರಚಿಸಲು ಈ ವ್ಯಾಪಕ ಸಂಗ್ರಹವನ್ನು ವರ್ಗೀಕರಿಸಲು ಕೆಲಸ ಮಾಡುತ್ತಿದ್ದಾರೆ. ಅವರು ತಮಿಳು ಜಾನಪದ ಕಲೆಯ ವಿಶ್ವಕೋಶವನ್ನುಅಭ್ಯಸಿಸಿದ್ದಾರೆ.

ಕೊಡುಗೆಗಳು ಮತ್ತು ಪ್ರಶಸ್ತಿಗಳು

ಬದಲಾಯಿಸಿ

ಡಾ.ವಿಜಯಲಕ್ಷ್ಮಿ ನವನೀತಕೃಷ್ಣನ್ ಅವರು ಜಾನಪದ ಕಲೆಯ ಕುರಿತು ಇಪ್ಪತ್ತಮೂರು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು ಜಾನಪದ ಕಲೆ ಮತ್ತು ಸಂಗೀತದ ಕುರಿತು ರೇಡಿಯೊದಲ್ಲಿ ಮೂವತ್ತು ಭಾಷಣಗಳನ್ನು ನೀಡಿದ್ದಾರೆ. ಡಾ.ವಿಜಯಲಕ್ಷ್ಮಿ ನವನೀತಕೃಷ್ಣನ್ ಮತ್ತು ಡಾ.ನವನೀತಕೃಷ್ಣನ್ ಅವರು ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಹನ್ನೊಂದು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಜಾನಪದ ಗೀತೆಗಳಿಗಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಪಡದಿದ್ದಾರೆ. ಡಾ. ವಿಜಯಲಕ್ಷ್ಮಿ ನವನೀತಕೃಷ್ಣನ್ ಅವರಿಗೆ ೨೦೧೮ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. []

ಉಲ್ಲೇಖಗಳು

ಬದಲಾಯಿಸಿ
  1. "6 Padma awardees are pride and joy of Tamil Nadu". The Times of India. 26 January 2018. Retrieved 26 January 2018.


ಬಾಹ್ಯ ಕೊಂಡಿಗಳು

ಬದಲಾಯಿಸಿ