ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.[೧]

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆ ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿ ಸೋಮೇಶ್ವರ ೨
ಉತ್ತರಾಧಿಕಾರಿ ಸೋಮೇಶ್ವರ ೩
ಗಂಡ/ಹೆಂಡತಿ ಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನ ಕಲ್ಯಾಣಿ ಚಾಲುಕ್ಯ
ತಂದೆ ಸೋಮೇಶ್ವರ ೧
ಮರಣ ಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.

6ನೇ ವಿಕ್ರಮಾಧಿತ್ಯ ಜೀವನ ಮತ್ತು ಸಾಧನಗಳು

ಚಿತ್ರ ಮಾಹಿತಿ ಬದಲಾಯಿಸಿ

ಇವನ್ನೂ ನೋಡಿ ಬದಲಾಯಿಸಿ

ಆಕರ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Chalukyas of Kalyana". {{cite web}}: Text "ಜ್ಯೋತ್ಸ್ನಾ ಕಾಮತ್ ಅವರ ವೆಬ್ ತಾಣದ ಕಲ್ಯಾಣಿ ಚಾಲುಕ್ಯರ ಕುರಿತಾದ ಆಂಗ್ಲ ಮಾಹಿತಿ ಪುಟ" ignored (help)