ವಿಕಿಪೀಡಿಯ ಚರ್ಚೆಪುಟ:ಪರಿಶೀಲನಾರ್ಹತೆ

ಮುನ್ನುಡಿ ಬದಲಾಯಿಸಿ

'ಸಮ್ಮಿಲನ ೧೮' ರಲ್ಲಿ ನಿರ್ದೇಶಿತನಾದಂತೆ ಈ ಲೇಖನವನ್ನು ತಯಾರಿಸಿದ್ದೇನೆ. ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೨೫, ೧೧ ಸೆಪ್ಟೆಂಬರ್ ೨೦೧೫ (UTC)

Verifiability ಗೆ ಸೂಕ್ತ ಕನ್ನಡ ಶಬ್ದದ ಬಗ್ಗೆ ಚರ್ಚೆ ಬದಲಾಯಿಸಿ

  • 'ಸತ್ಯವೆಂತ' ಎನ್ನುವ ಪದ ಸರಿಯಲ್ಲವೆನಿಸುತ್ತದೆ. 'ಸತ್ಯವೆಂದು' ಎನ್ನುವುದು ಸರಿಯಾಗುತ್ತದೆ. ಅಥವಾ ಒಟ್ಟಾರೆ verifiability ಗೆ ಬೇರೇನಾದರೂ ಪದ ಸಿಗುತ್ತದೆಯೇ ಚರ್ಚೆಯಾಗಬೇಕು.--Vikas Hegde (ಚರ್ಚೆ) ೧೫:೫೪, ೨೫ ಜೂನ್ ೨೦೧೫ (UTC)
  • ಸತ್ಯವೆಂತ ಸ್ಥಾಪಿತವಾಗಬಲ್ಲವಿಕೆ( verifiabilityಗೆ ಅನುವಾದ)-ಈ ಶಬ್ದವನ್ನು English-Kannada Dictionary by Rev.F.Ziegler Asian education series, p.no. 584 ಇಂದ ತೆಗೆದುಕೊಂಡಿದ್ದೇನೆ.

-ಸಮಾನ ಅರ್ಥಕೊಡುವ ಬೇರೆ ಶಬ್ದ ಹುಡುಕೋಣವೆ? ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೦೧, ೨೬ ಜೂನ್ ೨೦೧೫ (UTC)

  • ಪರಿಶೀಲನಾರ್ಹತೆ ಆಗಬಹುದು ಎಂದು ನನಗೆ ಅನ್ನಿಸುತ್ತಿದೆ--Pavanaja (ಚರ್ಚೆ) ೦೧:೫೧, ೨೭ ಜೂನ್ ೨೦೧೫ (UTC)


  • verifiabilityಗೆ ಅನುವಾದ-ಸತ್ಯವೆಂತ ಸ್ಥಾಪಿತವಾಗಬಲ್ಲವಿಕೆ.

ಇಂಗ್ಲೀಷ್ ನಲ್ಲಿರುವ ಸಮಾನರ್ಥಕ ಪದಗಳು. Verifiability v. -confirm, prove, authenticate, corroborrate, valididate, substantiate. *

Verification n. -evidence, proof, validation, documentation, support, confirmation. *

-A proof or confirmation, as by examination. **

ನನ್ನ ಅಭಿಪ್ರಾಯ: 1. ಇದರ ಅರ್ಥ ಮಾಹಿತಿಯನ್ನು ಪರೀಕ್ಷಿಸಿದ ನಂತರ ಫಲಿತಾಂಶವು ಸತ್ಯವೇ ಅಗಿರಬೇಕು. 2. ಆದುದರಿಂದ ಈ ಕ್ರಿಯೆಗೆ, ಈ ಕೆಳಗಿನ ಶಬ್ದಗಳು ಹೇಗಿವೆ?

- ಸತ್ಯವೆಂದು ತೋರಿಸುವಿಕೆ. - ಭರವಸೆಗೆ ಯೋಗ್ಯವಾಗುವಿಕೆ. - ನಿಜಪಡಿಸುವಿಕೆ. - ನಿಜವಾಗುವಿಕೆ. - ನಿಜವಾಗಬಲ್ಲವಿಕೆ. - ದೃಢವಾಗಬಲ್ಲವಿಕೆ. - ದೃಢೀಕರಿಸುವಿಕೆ, ಸತ್ಯಾಪನಾಶೀಲತೆ. ದೃಢವಾಗುವಿಕೆ.

3. ವಿಕಿಪೀಡಿಯ ದಲ್ಲಿ ವಿಕಿಪೀಡಿಯ ಫಿಲಾಸಫಿಯನ್ನು ಗಮನದಲ್ಲಿರಿಸಿ ದೃಢವಾಗುವಿಕೆ. ಅಥವಾ ಸತ್ಯಾಪನಾಶೀಲತೆ ಈ ಶಬ್ದಗಳಲ್ಲಿ ಒಂದನ್ನು ಉಪಯೋಗಿಸಬಹುದು ಎಂದು ನನ್ನ ಅನಿಸಿಕೆ.ವಿದ್ಯಾಧರ ಚಿಪ್ಳಿ (ಚರ್ಚೆ) ೧೧:೦೧, ೨೯ ಜೂನ್ ೨೦೧೫ (UTC)

  • ಪರಿಶೀಲನಾ ಸಾಧ್ಯತೆ =Verifiability ;yrs/bsc
  • ಇದರ ಅರ್ಥ ಮಾಹಿತಿಯನ್ನು ಪರೀಕ್ಷಿಸಿದ ನಂತರ ಫಲಿತಾಂಶವು ಸತ್ಯವೇ ಅಗಿರಬೇಕು. ಪರಿಶೀಲನೆಯ ನಂತರ ಮಾಹಿತಿ ಸುಳ್ಳು ಆಗುವ ಸಾದ್ಯತೆ ಉಂಟು. ಆದುದರಿಂದ ಈ ಶಬ್ದ ಸರಿಯಲ್ಲ.ವಿದ್ಯಾಧರ ಚಿಪ್ಳಿ (ಚರ್ಚೆ) ೧೨:೫೪, ೧೨ ಸೆಪ್ಟೆಂಬರ್ ೨೦೧೫ (UTC).

ಪರಿಶೀಲನಾರ್ಹತೆ- ಎಂಬ ಶಬ್ದ ಬದಲಾಯಿಸಿ

ಪರಿಶೀಲನಾರ್ಹತೆ- ಎಂಬ ಶಬ್ದವನ್ನು ದಿ. ೧೩.೦೯.೨೦೧೫ ರಂದು (ಸಮ್ಮಿಲನ ೧೯) ಬಹುಮತದಿಂದ ಆಯ್ಕೆ ಮಾಡಲಾಗಿದೆ. ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೫೮, ೧೫ ಸೆಪ್ಟೆಂಬರ್ ೨೦೧೫ (UTC)

Return to the project page "ಪರಿಶೀಲನಾರ್ಹತೆ".