ವಿಕಿಪೀಡಿಯ ಚರ್ಚೆಪುಟ:ವಿಶ್ವಕೋಶದಲ್ಲಿ ಭಾಷಾಂತರ ವಿನಿಯೋಗ
ಈ ಪುಟವು ಕನ್ನಡ ವಿಶ್ವಕೋಶದ ಭಾಷಾಂತರದ ಬಗೆಗಿನ ಚರ್ಚೆಗೆ ಮೀಸಲಾಗಿದೆ. ಈ ಪುಟದಲ್ಲಿ ಈಗ ಮಾಡಲಾಗಿರುವ ಹಾಗೂ ಮಾಡಬೇಕಾಗಿರುವ ಭಾಷಾಂತರದ ಬಗ್ಗೆ ಚರ್ಚೆ ಮಾಡಬಹುದು. ಚರ್ಚಾ ಪುಟದ ಧ್ಯೇಯ ಈಗಿರುವ ಭಾಷಾಂತರವನ್ನು ಉತ್ತಮಗೊಳಿಸುವುದು. ಚರ್ಚೆಯನ್ನು ವಿಸ್ತರಿಸಲು ಸಮುದಾಯದ Mailing Listಗೆ ನೀವು ಸದಸ್ಯರಾಗಬಹುದು. ನಿಮ್ಮ ಅಭಿಪ್ರಾಯ ದಾಖಲಿಸಲು ಮೇಲೆ ಇರುವ '+' ಟ್ಯಾಬನ್ನು ಕ್ಲಿಕ್ ಮಾಡಿ ಅಥವಾ Alt, + ಕೀಲಿಗಳನ್ನುಪಯೋಗಿಸಿ.
'ಮುಖ್ಯ ಪುಟ'
ಬದಲಾಯಿಸಿಮಾನ್ಯರೆ, ಅಂತರ್ಜಾಲದಲ್ಲಿ "Main Page"(ಮುಖ್ಯ ಪುಟ) ಅಥವಾ "Front Page"(ಮುಖ ಪುಟ) ಎನ್ನುವ ಪದಗಳನ್ನು ಬಹಳ ಮಟ್ಟಿಗೆ ಸಮಾನವಾಗಿ ಉಪಯೋಗಿಸಿದರೂ, ಅವುಗಳಿಗೆ ಕನ್ನಡದಲ್ಲಿ ಬೇರೆ ಅರ್ಥ ಇರುವುದರಿಂದ ದಯವಿಟ್ಟು ಕನ್ನಡ ವಿಕಿಪೀಡಿಯಾದ ಮೊದಲ ಪುಟವನ್ನು "ಮುಖ ಪುಟ" ಎಂದು ನಾಮಂತರಿಸಬೇಕೆಂದು ನನ್ನ ಅನಸಿಕೆ.
ಇಂತಿ, ರೋಹಿತ್.
- ನಮಸ್ತೆ ರೋಹಿತ್, 'ಮುಖ ಪುಟ' ಸಮಂಜಸವಾದರೂ 'ಮುಖ್ಯ ಪುಟ' ಎಂಬುದರಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇದರರ್ಥಗಳನ್ನು ಪರಿಶೀಲಿಸಿ ಮುನ್ನಡೆಯೋಣ. ಆಂಗ್ಲ ವಿಕಿಪೀಡಿಯಾದಲ್ಲಿ 'Main_Page' ಎಂಬ ಬಳಕೆ ಇರುವುದನ್ನು ನೀವು ಗಮನಿಸಬೇಕು. ಧನ್ಯವಾದಗಳು.
--hpnadig ೧೦:೪೩, ೩ ನವೆಂಬರ್ ೨೦೦೪ (UTC)