ವಿಕಿಪೀಡಿಯ:ಹೊಸ ಲೇಖನಗಳು


ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್‌.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
  • ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
  • ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
  • ಕೊವ್ಯಾಕ್ಸಿನ್ (ಅಧಿಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
  • ಸಿಗಡಿ ಕೃಷಿಯು ಮನುಷ್ಯನ ಆಹಾರಕ್ಕಾಗಿ ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
  • ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.