ವಿಕಿಪೀಡಿಯ:ಸಭ್ಯ ನಡವಳಿಕೆ
ನಾಗರಿಕತೆಯು ವಿಕಿಪೀಡಿಯದ ನೀತಿ ಸಂಹಿತೆಯ ಭಾಗವಾಗಿದೆ ಮತ್ತು ಅದರ ಐದು ಸ್ತಂಭಗಳಲ್ಲಿ ಒಂದಾಗಿದೆ. ಸರಳವಾಗಿ ಹೇಳುವುದಾದರೆ, ಸಂಪಾದಕರು ಪರಸ್ಪರ ಸೌಜನ್ಯದಿಂದ ನೆಡೆದುಕೊಳ್ಳಬೇಕು . ಅವರು ಬಿಸಿಯಾದ ಚರ್ಚೆಯ ಸಮಯದಲ್ಲಿಯೂ ಸಹ ಸೌಜನ್ಯದಿಂದ, ಶಾಂತವಾಗಿ ಮತ್ತು ಸಮಂಜಸವಾಗಿ ವರ್ತಿಸುವ ಮೂಲಕ ಆಹ್ಲಾದಕರ ಸಂಪಾದನೆಯ ವಾತಾವರಣವನ್ನು ಉಳಿಸಿಕೊಂಡು ವಿಶ್ವಕೋಶವನ್ನು ಸುಧಾರಿಸುವತ್ತ ಗಮನಹರಿಸಬೇಕು.
ವಿಕಿಪೀಡಿಯದ ಸಭ್ಯತೆಯ ನಿರೀಕ್ಷೆಗಳು ವಿಕಿಪೀಡಿಯದಲ್ಲಿನ ಎಲ್ಲಾ ಸಂವಾದಗಳ ಸಮಯದಲ್ಲಿ ಎಲ್ಲಾ ಸಂಪಾದಕರಿಗೆ ಅನ್ವಯಿಸುತ್ತವೆ. ಬಳಕೆದಾರ ಮತ್ತು ಲೇಖನದ ಚರ್ಚೆ ಪುಟಗಳಲ್ಲಿ ಚರ್ಚೆಗಳು, ಸಂಪಾದನೆ ಸಾರಾಂಶಗಳಲ್ಲಿ ಮತ್ತು ಸಹ ವಿಕಿಪೀಡಿಯನ್ನರೊಂದಿಗೆ ಅಥವಾ ಅವರ ಬಗ್ಗೆ ಯಾವುದೇ ಇತರ ಚರ್ಚೆಗಳಲ್ಲಿ ಅನ್ವಯವಾಗುತ್ತದೆ.
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Vikashegde (ಚರ್ಚೆ | ಕೊಡುಗೆಗಳು) 8222823 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |