ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್

ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ಈ ವರ್ಷದಿಂದ ಆರಂಭಗೊಳ್ಳುತ್ತಿದೆ. ವಿಕಿಪೀಡಿಯದ ಬಗ್ಗೆ ಅಭ್ಯಾಸ ಮಾಡಲು ಈ ಪುಟವನ್ನು ತಯಾರಿಸಲಾಗಿದೆ. ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಎಂಬುದು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್‍ನ ಪರಿಕಲ್ಪನೆ. ಅವರು ತಯಾರಿಸಿದ ಯೋಜನೆಯ ಕೆಲವು ಮೂಲಭೂತ ರೂಪುರೇಷೆಗಳನ್ನು ಈ ಪುಟದಲ್ಲಿ ಓದಬಹುದು. ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ಕರಾವಳಿ ವಿಕಿಮೀಡಿಯನ್ಸ್ ಸಹಯೋಗದ ಮತ್ತು ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ.

ಉದ್ದೇಶ

ಬದಲಾಯಿಸಿ
  1. ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸರ್ವತೋಮುಕವಾಗಿ ಬೆಳೆಯಬೇಕಾದರೆ ಅವರ ಕಲಿಕೆಯ ಜೊತೆಗೆ ವಿವಿಧ ಭಾಷೆಯ ‘ತಂತ್ರಜ್ಞಾನ’ವನ್ನು ಪ್ರತ್ಯೇಕವಾಗಿ ಕಲಿಯುವ ಅವಕಾಶದ ಕಡೆಗೆ ಗಮನ ನೀಡುವುದು.
  2. ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದಿನೊಂದಿಗೆ ಸಂಶೊಧನಾ ಚಟುವಟಿಕೆಯನ್ನು ಬೆಳೆಸಿಕೊಳ್ಳುವುದು. ಈ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಅಸೋಸಿಯೇಶನ್ ಆರಂಭಗೊಂಡಿದೆ.
  3. ಪದವಿ ವಿದ್ಯಾರ್ಥಿಗಳು ಸಿಬಿಸಿಎಸ್ ಪಠ್ಯಕ್ರಮಕ್ಕೆ ಪರಿವರ್ತನೆಯಾಗುವ ಈ ವರ್ಷ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಾತ್ರ ಅಸೋಶಿಯೇಶನ್ ವ್ಯಾಪ್ತಿಗೆ ಬರುತ್ತಾರೆ. ಮುಂದಿನ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷದ 50 ವಿದ್ಯಾರ್ಥಿಗಳಿಗೆ ಅಸೋಶಿಯೇಶನ್ ಮುಂದುವರಿಯುತ್ತದೆ. ಪ್ರತೀ ಸೆಮಿಸ್ಟರ್ 50 ಅಂಕಗಳಂತೆ ನಾಲ್ಕು ಸೆಮಿಸ್ಟರ್ ಈ ಯೋಜನೆ ಮುಂದುವರಿಯುತ್ತದೆ. ಇಲ್ಲಿ ವಿದ್ಯಾರ್ಥಿಗಳು ಆಸಕ್ತಿ ಇದ್ದರೂ ಇಲ್ಲದಿದ್ದರೂ ಭಾಗವಹಿಸಬೇಕಾಗುತ್ತದೆ. ಕಾಲೇಜಿನಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳ, ಸಂಸ್ಕೃತ, ಕೊಂಕಣಿ, ಫ್ರೆಂಚ್ ಮತ್ತು ತುಳು ಭಾಷೆಯಲ್ಲಿ ಲೇಖನಗಳನ್ನು ಬರೆಯುವ ಸಾಮರ್ಥ್ಯವಿರುವವರಿಗೆ ಈ ಅಸೋಶಿಯೇಶನ್ ಉಪಯೋಗವಾಗುತ್ತದೆ.

ಅಧ್ಯಕ್ಷರು

ಬದಲಾಯಿಸಿ
  1. --Vishwanatha Badikana (ಚರ್ಚೆ) ೧೦:೨೬, ೨೮ ಜೂನ್ ೨೦೧೯ (UTC)
  2. --Renita Menezes (ಚರ್ಚೆ) ೦೯:೫೪, ೫ ಜುಲೈ ೨೦೧೯ (UTC)
  3. --Santhosh Notagar (ಚರ್ಚೆ) ೦೭:೫೩, ೨೧ ಸೆಪ್ಟೆಂಬರ್ ೨೦೨೨ (UTC)

೨೦೧೯-೨೦

ಬದಲಾಯಿಸಿ

೨೦೧೯-೨೦ ಸಾಲಿನ ಸದಸ್ಯರು ಮತ್ತು ಅವರ ಚಟುವಟಿಕೆಗಳು

  1. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್/೨೦೧೯-೨೦