ವಿಕಿಪೀಡಿಯ:ಯೋಜನೆ/ಮನೆ ಮನೆಗೆ ವಿಕಿಪೀಡಿಯ

ಮನೆ ಮನೆಗೆ ವಿಕಿಪೀಡಿಯ

ಬದಲಾಯಿಸಿ

ಕರಾವಳಿ ವಿಕಿಮೀಡಿಯನ್ನರು ಮನೆ ಮನೆಗೆ ವಿಕಿಪೀಡಿಯ ಎಂಬ ಶೀರ್ಷಿಕೆಯಡಿಯಲ್ಲಿ ಈ ಹೊಸ ಯೋಜನೆ ಎತ್ತಿಕೊಂಡಿದ್ದೇವೆ . ಇದೊಂದು ಆಪ್‌ಲೈನ್ ವಿಕಿಪೀಡಿಯ ಚಟುವಟಿಕೆಯಾಗಿದೆ. ವಿಕಿಪೀಡಿಯಾದಿಂದ ಹೊರಗುಳಿದವರೇ ಹೆಚ್ಚು. ಅದರಲ್ಲೂ ಹಿರಿಯ ತಲೆಮಾರು. ಈಗಿನ ಅಗತ್ಯವೇ ಮಾಹಿತಿಯನ್ನು ಅಪ್‍ಲೋಡ್ ಮಾಡುವುದು. ಆದರೆ ಹಿರಿಯ ತಲೆಮಾರು ಮತ್ತು ಜನಪದರಲ್ಲಿ ಅಪಾರವಾದಿ ಮಾಹಿತಿಗಳಿವೆ. ಆದರೆ ಅವರಿಗೆ ತಂತ್ರಜ್ಞಾನದ ತಿಳುವಳಿಕೆಯ ಕೊರತೆಯಿದೆ. ಜೊತೆಗೆ ಇನ್ನೂ ನಮ್ಮ ಹಳ್ಳಿಯ ಜನರಿಗೆ ಉತ್ತಮ ಗುಣಮಟ್ಟದ ನೆಟ್‍ವರ್ಕ್ ಸಿಗುತ್ತಿಲ್ಲ. ಹಾಗಾಗಿ ಅಪಾರ ಜನರು ಕೆಲವೊಂದು ಆಧುನಿಕ ಸೌಲಭ್ಯಕ್ಕಾಗಿ ನಗರವನ್ನು ಓಲೈಸುತ್ತಿದ್ದಾರೆ. ಇನ್ನೂ ನಗರ ಕೇಂದ್ರವಲ್ಲದ ಹಳ್ಳಿಗರಿಗೆ ಈ ಬಗ್ಗೆ ಏನೂ ಮಾಹಿತಿಯಿಲ್ಲ. ಗೊತ್ತಿದ್ದರೂ ಇದನ್ನು ನಾವೇ ಸಂಪಾದಿಸಬಹುದೆಂಬ ತಿಳುವಳಿಕೆಯೂ ಇಲ್ಲ. ಆ ಪ್ರಯುಕ್ತ ವಿಕಿಪೀಡಿಯದ ಬಗ್ಗೆ ಏನೂ ತಿಳಿಯದವರಿಗೆ ಹೀಗೊಂದು ಇದೆಯೆಂದೂ ವಿಕಿಪೀಡಿಯ ಒಂದು ಇದೆ, ಆದರೆ ಅಲ್ಲಿ ನಮಗೆ ಬರೆಯಲಾಗುತ್ತಿಲ್ಲ ಎಂಬವರಿಗೆ ಈ ಯೋಜನೆಯ ಮೂಲಕ ಅವರ ಹತ್ತಿರ ಹೋಗಿ ಮಾಹಿತಿ ನೀಡುವ ಕೆಲಸವನ್ನು ಎತ್ತಿಕೊಂಡಿದ್ದೇವೆ.

ಹೊರಗೆ ಹೋಗಿ(Outreach) ಮಾಹಿತಿ ನೀಡುವ ತಯಾರಿ ಕಷ್ಟಕರವಾದರೂ ಸದ್ಯಕ್ಕೆ ಇದೊಂದು ಪ್ರಯತ್ನದಲ್ಲಿರುವ ಯೋಜನೆ. ಈ ಯೋಜನೆಯಲ್ಲಿ ಮಾಡಲಾದ ಚಟುವಟಿಕೆಗಳು:

ನವೆಂಬರ್ ೨೦೧೮

ಬದಲಾಯಿಸಿ

ಇದೇ ತಿಂಗಳಲ್ಲಿ ಕನ್ನಡ ಮತ್ತು ತುಳು ಭಾಷೆಯ ಮೂವರು ಸಾಹಿತಿಗಳಾದ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಅಮೃತ ಸೋಮೇಶ್ವರ, ಪ್ರೊ. ಎ.ವಿ.ನಾವಡ ಈ ಮೂವರು ಹಿರಿಯರ ಮನೆಗೆ ಹೋಗಿದ್ದೆವು. ವಿಕಿಪೀಡಿಯ ತಿಳುವಳಿಕೆಗಾಗಿ ಇದೊಂದು ಕೊಡು ಕೊಳ್ಳುವ ಪ್ರಯತ್ನ. ಈ ಮೂವರೂ ವಿದ್ವಾಂಸರು ತಮ್ಮಲ್ಲಿರುವ ಅವರದ್ದೇ ಆದ ಪುಸ್ತಕಗಳನ್ನು ವಿಕಿಸೋರ್ಸ್‌ಗೆ ನೀಡುವುದಾಗಿ ಒಪ್ಪಿದ್ದಾರೆ.

ಡಿಸೆಂಬರ್ ೨೦೧೮

ಬದಲಾಯಿಸಿ

ಈ ತಿಂಗಳಲ್ಲಿ ಕನ್ನಡ ಮತ್ತು ತುಳುವಿನ ಸಂಶೋಧಕರಾದ ಡಾ. ಪುರುಷೋತ್ತಮ ಬಿಳಿಮಲೆಯವರ ಬೇಟಿ ಹಾಗೂ ಮಾತುಕತೆ ನಡೆಸಲಾಯಿತು. ಸಿದ್ದವೇಷಕ್ಕೆ ಸಂಬಂಧಿಸಿದ ಹಾಗೆ ಬಿಳಿಮಲೆಯವರು ಮಾತಾಡುಲಿದನ್ನು ವಿಡಿಯೋ, ಅಡಿಯೊ ಮೂಲಕ ದಾಖಲಾತಿಯನ್ನು ಮಾಡಲಾಯಿತು.