ವಿಕಿಡಾಟಾ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ವಿಕಿಡಾಟಾ ಜಗತ್ತಿನ ಸಾಮಾನ್ಯ ಜನರ ಸ್ವಯಂಪ್ರೇರಿತ ಸಹಕಾರದಿಂದ ರಚಿಸಲಾದ ಜ್ಞಾನ ನೆಲೆ. ಇದನ್ನು ವಿಕಿಮೀಡಿಯಾ ಫೌಂಡೇಶನ್ ಆಯೋಜಿಸಿದೆ. ಇದು ವಿಕಿಪೀಡಿಯ ಬಳಸುವ ಉಚಿತ ಡಾಟಾದ ಸಾರ್ವತ್ರಿಕ ಮೂಲವಾಗಿದೆ. ಇತರ ಜನರು ಇದನ್ನು ಉಚಿತವಾಗಿ ಮತ್ತು ಸಾರ್ವಜನಿಕ ಪರವಾನಗಿ ಅಡಿಯಲ್ಲಿ ಬಳಸಬಹುದು. ವಿಕಿಮೀಡಿಯ ಕಾಮನ್ಸ್ ಮಾಧ್ಯಮ ಕಡತಗಳನ್ನು ಸಂಗ್ರಹಿಸಿದಂತೆಯೇ ಮತ್ತು ಎಲ್ಲಾ ವಿಕಿಪೀಡಿಯಾ ಪ್ರಾಜೆಕ್ಟ್‌ಗಳು ಬಳಸುತ್ತಿರುವಂತೆಯೇ, ವಿಕಿಡಾಟಾ ಸಹ ಎಲ್ಲರಿಗೂ ಉಚಿತ ಡಾಟಾವನ್ನು ಸಂಗ್ರಹಿಸುತ್ತದೆ. ವಿಕಿಡಾಟಾ ವಿಕಿಬೇಸ್ ಎಂಬ ಸಾಫ್ಟ್‌ವೇರ್‌ನಿಂದ ಚಲಿಸುತ್ತದೆ .
ವಿಕಿಡಾಟಾದ ವಿಶೇಷತೆಯೆಂದರೆ ಇದನ್ನು ಮಾನವರು ಮತ್ತು ಯಂತ್ರಗಳು ಬಳಸಬಹುದು.