ವಿಓಎಲ್ಟಿಇ
ವಿಓಎಲ್ಟಿಇ ಎಂದರೆ ಮೊಬೈಲ್ ಫೋನ್ ಮತ್ತು ಇತರೆ ಸಂಪರ್ಕ ಸಾಧನಗಳ ನಡುವೆ ಅತಿ ವೇಗದಲ್ಲಿ ಮಾಹಿತಿಯ ರವಾನೆಯ ಒಂದು ಶಿಷ್ಟತೆ. ಇದನ್ನು ಪಿಆರ್‍ಡಿ ಐಆರ್ ೯೨ ಶಿಷ್ಟತೆಯಲ್ಲಿ ವಿವರಿಸಲಾಗಿದೆ.[೧] ಇದು Voice over Long Term Evolution (VoLTE ) ಎಂಬುದರ ಹ್ರಸ್ವ ರೂಪ. ಇದು ಬಹುಮಟ್ಟಿಗೆ ವಿಓಐಪಿಗೆ (VOIP = Voice Over Internet Protocol) ಸಮೀಪವಾಗಿದೆ. ಇದನ್ನು ಬಳಸಿ ಮಾಹಿತಿ ವರ್ಗಾವಣೆ ಮತ್ತು ಧ್ವನಿ ಕರೆಗಳನ್ನು ಮಾಡಬಹುದು. ಈ ಶಿಷ್ಟತೆಯ ಮೂಲಕ ಧ್ವನಿ ಕರೆ ಮಾಡುವಾಗ ಪ್ರತಿ ಕರೆಯೂ ಅಂತರಜಾಲದ ಮೂಲಕವೇ ಆಗುತ್ತದೆ.
ಇತಿಹಾಸ
ಬದಲಾಯಿಸಿಮೆ ೨೦೧೪ರಲ್ಲಿ ಸಿಂಗಾಪುರದ ಸಿಂಗ್‍ಟೆಲ್ ಕಂಪೆನಿ ಪ್ರಥಮ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಿತು.[೨] ಪ್ರಾರಂಭದಲ್ಲಿ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ ೩ ಫೊನ್‍ಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ನಂತರ ಇತರೆ ಫೋನ್‍ಗಳಿಗೂ ಅದನ್ನು ವಿಸ್ತರಿಸಲಾಯಿತು. ೨೦೧೪, ೨೦೧೫ ಮತ್ತು ೨೦೧೬ರಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಈ ಶಿಷ್ಟತೆಯನ್ನು ಬಳಸಲಾಯಿತು ಮತ್ತು ದೂರಸಂಪರ್ಕ ಸೇವೆ ನೀಡುವ ಹಲವು ಕಂಪೆನಿಗಳು ಈ ಸೌಲಭ್ಯವನ್ನು ನೀಡತೊಡಗಿದವು.
ಭಾರತ ದೇಶದಲ್ಲಿ ೨೦೧೬ರಲ್ಲಿ ರಿಲಯನ್ಸ್ ಕಂಪೆನಿ ಜಿಯೊ ಹೆಸರಿನಲ್ಲಿ ಈ ಶಿಷ್ಟತೆಯ ಸಂಪರ್ಕ ಸೇವೆಯನ್ನು ಪ್ರಾರಂಭಿಸಿತು.
ಕೆಲಸ ಮಾಡುವ ವಿಧಾನ
ಬದಲಾಯಿಸಿಮೊಬೈಲ್ ಸಂಪರ್ಕದಲ್ಲಿ ಮಾಹಿತಿಯ ವರ್ಗಾವಣೆಗೆ ೨ಜಿ,೩ಜಿ ಮತ್ತು ೪ಜಿ ಎಂಬ ಶಿಷ್ಟತೆಗಳಿವೆ. ಇವುಗಳಲ್ಲಿ ೪ಜಿ ಎಂಬುದಕ್ಕೆ ಎಲ್‍ಟಿಇ ಎಂಬ ಹೆಸರಿದೆ. ಇದು Long Term Evolution ಎಂಬುದರ ಹ್ರಸ್ವ ರೂಪ. ೨ಜಿ, ೩ಜಿ ಮತ್ತು ೪ಜಿ ಶಿಷ್ಟತೆಯನ್ನು ಬಳಸುವ ಫೋನ್‍ಗಳಲ್ಲಿ ಧ್ವನಿ (voice) ಮತ್ತು ಮಾಹಿತಿ (data) ರವಾನೆ ಪ್ರತ್ಯೇಕವಾಗಿರುತ್ತವೆ. ಅಂದರೆ ಮಾಹಿತಿ ರವಾನೆಯ ಸೌಲಭ್ಯವಿಲ್ಲದಿದ್ದರೂ ಧ್ವನಿ ಕರೆ ಮಾಡಬಹುದು. ೪ಜಿ ಎಲ್‍ಟಿಇ ಮೇಲೆ ಧ್ವನಿ ಕರೆಯನ್ನು ಮಾಡಿದರೆ ಅದು ವಿಓಎಲ್‍ಟಿಇ ಆಗುತ್ತದೆ. ಅಂದರೆ ಎಲ್‍ಟಿಇ ಮೇಲೆ ಧ್ವನಿ ಅರ್ಥಾತ್ ವಾಯ್ಸ್ ಓವರ್ ಎಲ್‍ಟಿಇ. ಈ ವಿಧಾನದಲ್ಲಿ ಮಾಹಿತಿ ಪ್ರವಾಹ ಇಲ್ಲದಿದ್ದಲ್ಲಿ ಧ್ವನಿ ಕರೆ ಆಗುವುದಿಲ್ಲ. ಅಂತರಜಾಲದ ಮೂಲಕ ಕರೆ ಮಾಡುವ ಇನ್ನೊಂದು ವಿಧಾನ ವಿಓಐಪಿಗೆ ಇದು ಸಾಮ್ಯವಾಗಿದೆ. ಈ ರೀತಿ ಮಾಡುವ ಕರೆಯ ಗುಣಮಟ್ಟ ತುಂಬ ಉತ್ತಮವಾಗಿರುತ್ತದೆ. ವಿಓಎಲ್‌ಟಿಇ ಮೂಲಕ ಕರೆ ಅಥವಾ ವಿಡಿಯೊ ಕರೆ ಮಾಡುವುದೂ ಅಂತರಜಾಲದ ಮೂಲಕವೇ. ಒಂದು ವಿಓಎಲ್‌ಟಿಇ ಫೋನಿನಿಂದ ಇನ್ನೊಂದು ವಿಓಎಲ್‌ಟಿಇ ಫೋನಿಗೆ ಅಥವಾ ಮಾಮೂಲಿ ಫೋನಿಗೆ ಕರೆ ಮಾಡಬಹುದು. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಲ್ಲಿ ಕರೆಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.[೩] ಇದಕ್ಕೆ ತಾಂತ್ರಿಕ ಪರಿಭಾಷೆಯಲ್ಲಿ HD ಎಂದರೆ ಹೈಡೆಫಿನಿಶನ್ ಕರೆ ಎನ್ನುತ್ತಾರೆ.[೪] ವಿಓಎಲ್‌ಟಿಇ ತಂತ್ರಜ್ಞಾನ ಕರೆಗಳ ಗುಣಮಟ್ಟವನ್ನು ಮಾತ್ರ ಹೆಚ್ಚಿಸುವುದಲ್ಲ. ಅಂತರಜಾಲ ಸಂಪರ್ಕದ ವೇಗವೂ ಉತ್ತಮವಾಗಿರುತ್ತದೆ.
ಉಲ್ಲೇಖ
ಬದಲಾಯಿಸಿ- ↑ http://www.gsma.com/newsroom/wp-content/uploads/2013/04/IR.92-v7.0.pdf
- ↑ https://www.singtel.com/about-us/news-releases/singtel-samsung-and-ericsson-unveil-worlds-first-full-featured-voice-over-lte
- ↑ http://www.iis.fraunhofer.de/content/dam/iis/en/doc/pr/2012/Full_HD_Voice_engl.pdf
- ↑ http://www.pcworld.com/article/259471/voice_over_lte_explained_better_voice_quality_coming_soon_to_your_4g_phone.html