ವಾಯುಭಾರ ಕುಸಿತ
ವಾಯುಭಾರ ಕುಸಿತವು ಭೂಮಿಯ ಒಂದು ಭಾಗದಲ್ಲಿ ವಾಯುಭಾರವು ಸುತ್ತಲಿನದಕ್ಕಿಂತ ಕಡಿಮೆ ಇರುವ ಪರಿಸ್ಥಿತಿ. ಹವಾಮಾನದಲ್ಲಿ ಆಗುವ ಬದಲಾವಣೆಗಳು ವಾಯುಭಾರ ಕುಸಿತ ಹಾಗೂ ಚಂಡಮಾರುತಕ್ಕೆ ಮೂಲ ಕಾರಣ. ಸಮುದ್ರದ ಮೇಲ್ಮೈನಲ್ಲಿ ಉಂಟಾಗುವ ವ್ಯತ್ಯಾಸಗಳು, ವಾತಾವರಣದಲ್ಲಿ ಗಾಳಿಯ ಒತ್ತಡದಲ್ಲಿ ಉಂಟಾಗುವ ಏರುಪೇರಿನಿಂದ ಪ್ರಬಲವಾದ ಸುಂಟರಗಾಳಿ ಮೇಲೇಳುತ್ತದೆ. ಸಮುದ್ರಮಟ್ಟದಿಂದ ಇದು ಗಂಟೆಗೆ ೨೦೦ರಿಂದ ೨೦೦೦ ಕಿ.ಮೀ. ವೇಗದಲ್ಲಿ ತೀಕ್ಷ್ಣವಾಗಿ ಬೀಸುತ್ತದೆ. ವಾಯುಭಾರ ಕುಸಿತದಿಂದ ಮಳೆ ಮೋಡಗಳೆಲ್ಲ ತೇಲಿಬಂದು ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುತ್ತದೆ. ಈ ಗಾಳಿ ಯಾವ ದಿಕ್ಕಿಗೆ ಬೀಸುತ್ತದೋ ಅತ್ತ ಮಳೆ ಮೋಡಗಳು ಚದುರಿಹೋಗಿ ಮಳೆಯನ್ನು ಸುರಿಸುತ್ತವೆ. ಒಮ್ಮೊಮ್ಮೆ ಹಲವು ದಿನಗಳ ಕಾಲ ಗಾಳಿಯ ವೇಗ ಒಂದೇ ದಿಕ್ಕಿನಲ್ಲಿ ನೆಲೆನಿಲ್ಲುವುದೂ ಉಂಟು. ಮಳೆಯ ಮಾರುತಗಳು ಆರಂಭವಾಗುವ ಸಮಯದಲ್ಲೇ ಗಾಳಿಯ ವೇಗವೂ ಹೆಚ್ಚಿರುತ್ತದೆ. ಇಂತಹ ಸಮಯದಲ್ಲೇ ವಾಯುಭಾರ ಕುಸಿತ ಹೆಚ್ಚಾಗಿ ಸಂಭವಿಸುತ್ತದೆ.