ವಾಯುಗುಣ ಬದಲಾವಣೆಯ ಮೇಲಿನ ಅಂತರಸರ್ಕಾರಿ ನಿಯೋಗ
ವಾಯುಗುಣ ಬದಲಾವಣೆ ಮೇಲಿನ ಅಂತರಸರ್ಕಾರಿ ನಿಯೋಗ (Intergovernmental Panel on Climate Change - IPCC) ಮಾನವನ ಪ್ರಭಾವದಿಂದ ವಾಯುಗುಣದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತುಲನ ಮಾಡಲು ಸ್ಥಾಪಿಸಲಾದ ಒಂದು ನಿಯೋಗ. ಇದನ್ನು ೧೯೮೮ರಲ್ಲಿ ಅಂತರರಾಷ್ಟ್ರೀಯ ವಾತಾವರಣಶಾಸ್ತ್ರ ಸಂಸ್ಥೆ (World Meteorological Organization - WMO) ಮತ್ತು ಸಂಯುಕ್ತ ರಾಷ್ಟ್ರ ಪರಿಸರ ಕಾರ್ಯಕ್ರಮ (United Nations Environment Programme - UNEP) ಒಟ್ಟುಗೂಡಿ ಸ್ಥಾಪಿಸಿದವು.
೨೦೦೨ರಿಂದ ಭಾರತದ ಡಾ. ರಾಜೇಂದ್ರಕುಮಾರ್ ಪಚೌರಿಯವರ ನೇತೃತ್ವದಲ್ಲಿ ನಡಿಯುತ್ತಿರುವ ಈ ನಿಯೋಗವು ೨೦೦೭ರ ನೋಬೆಲ್ ಶಾಂತಿ ಪುರಸ್ಕಾರವನ್ನು ಅಮೇರಿಕ ದೇಶದ ಮಾಜಿ ಉಪರಾಷ್ಟ್ರಪತಿ ಆಲ್ ಗೋರ್ ಒಂದಿಗೆ ಹಂಚಿಕೊಂಡಿತು.
- «UN scientist backs '350' target for CO2 reduction», AFP, 25. august 2009