ವಾದ್ಯಸಂಗೀತ
ಲೇಖನ ವಿವರಣೆ (ಇಂಗ್ಲಿಷ್) ಗಾಯನವಿಲ್ಲದ ಸಂಗೀತ
ವಾದ್ಯಸಂಗೀತ ಎಂದರೆ ಸಾಹಿತ್ಯ ಅಥವಾ ಗಾಯನವಿರದ ಸಂಗೀತ ಸಂಯೋಜನೆ ಅಥವಾ ಸಂಗೀತ ಮುದ್ರಣ. ಆದರೆ ಇದು ದೊಡ್ಡ ಬ್ಯಾಂಡ್ ಸನ್ನಿವೇಶದಲ್ಲಿ ಒದರಿದ ಸಹಾಯಕ ಗಾಯನದಂತಹ ಕೆಲವು ಅಸ್ಫುಟ ಧ್ವನಿಗಳನ್ನು ಒಳಗೊಳ್ಳಬಹುದು. ಅರ್ಥದ ವಿಸ್ತರಣೆ ಮೂಲಕ, ಹಾಡು ಶಬ್ದದ ವಿಶಾಲವಾದ ಅರ್ಥವು ವಾದ್ಯಸಂಗೀತವನ್ನು ಸೂಚಿಸಬಹುದು.[೧] ಸಂಗೀತವನ್ನು ಮುಖ್ಯವಾಗಿ ಅಥವಾ ಕೇವಲ ಸಂಗೀತ ವಾದ್ಯಗಳನ್ನು ಬಳಸಿ ಸೃಷ್ಟಿಸಲಾಗುತ್ತದೆ. ವಾದ್ಯಸಂಗೀತವು ಸಂಯೋಜಕನು ಸಂಯೋಜಿಸಿದ ನಂತರ ಸಂಗೀತ ಸಂಕೇತ ರೂಪದಲ್ಲಿರಬಹುದು; ಸಂಯೋಜಕನ ಮನಸ್ಸಿನಲ್ಲಿರಬಹುದು (ವಿಶೇಷವಾಗಿ ಸಂಯೋಜಕನು ಕೃತಿಯನ್ನು ಸ್ವತಃ ನುಡಿಸುವ ಸಂದರ್ಭಗಳಲ್ಲಿ, ಉದಾಹರಣೆಗೆ ಬ್ಲೂಸ್ ತನಿ ಗಿಟಾರ್‌ವಾದಕ ಅಥವಾ ಜಾನಪದ ಸಂಗೀತದ ಫ಼ಿಡಲ್ ವಾದಕ); ಒಬ್ಬನೇ ವಾದಕನಿಂದ ಅಥವಾ ಸಂಗೀತಮೇಳದಿಂದ ನೇರವಾಗಿ ಪ್ರದರ್ಶಿಸಲ್ಪಟ್ಟ ಕೃತಿಯ ರೂಪದಲ್ಲಿ ಇರಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Ozzi, Dan; Staff, Noisey (2018-04-11). "RLYR's 'Actual Existence' Is 40 Minutes of Beautiful Chaos". Noisey (in ಅಮೆರಿಕನ್ ಇಂಗ್ಲಿಷ್). Retrieved 2019-01-26.