ವಾಣಿ (ಲೇಖಕಿ)
ವಾಣಿ(೧೯೧೨-೧೯೮೮) ಕನ್ನಡದ ಲೇಖಕಿ.ಮೈಸೂರು ನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಇವರ ತಂದೆ ಪಿ.ನರಸಿಂಗ ರಾವ್ ಶ್ರೀರಂಗಪಟ್ಟಣದಲ್ಲಿ ವಕೀಲರಾಗಿದ್ದರು.ಮೂಲ ಹೆಸರು ಬಿ.ಎನ್.ಸುಬ್ಬಮ್ಮ . ಕಾವ್ಯನಾಮ -ವಾಣಿ. ವಾಣಿಯವರ ತಂದೆ ಮೈಸೂರು ಅರಮನೆಯ ನಾಲ್ವಡಿ ಕೃಷ್ನ ರಾಜ ಒಡೆಯರ್ ಅವರಿಂದ "ರಾಜಸೇವಾಸಕ್ತ" ಎಂಬ ಬಿರುದನ್ನು ಪಡೆದಿದ್ದರು. ವಾಣಿಯವರ ಪ್ರಸಿದ್ಧ ಕಾದಂಬರಿಗಳು -ಶುಭಮಂಗಳ, ಎರಡು ಕನಸು, ಹೊಸಬೆಳಕು - ಕನ್ನಡ ಚಲನಚಿತ್ರಗಳಾಗಿವೆ.[೧][೨]
ಬಿ.ಎನ್.ಸುಬ್ಬಮ್ಮ | |
---|---|
ಜನನ | 1912 ಶ್ರೀರಂಗಪಟ್ಟಣ, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಭಾರತ |
ಮರಣ | 1988 (ವಯಸ್ಸು ೭೫–೭೬) ಮೈಸೂರು, ಕರ್ನಾಟಕ, ಭಾರತ |
ಕಾವ್ಯನಾಮ | ವಾಣಿ |
ವೃತ್ತಿ | ಕಾದಂಬರಿಗಾರ್ತಿ |
ರಾಷ್ಟ್ರೀಯತೆ | ಭಾರತಿಯ |
ಸಾಹಿತ್ಯ ಚಳುವಳಿ | ನವ್ಯ |
ಪ್ರಮುಖ ಕೆಲಸ(ಗಳು) | ಶುಭಮಂಗಳ, ಎರುಡು ಕನಸು , ಹೊಸಬೆಳಕು |
ಜೀವನ
ಬದಲಾಯಿಸಿವಾಣಿಯವರು ಎಸ್.ಎಸ್.ಎಲ್.ಸಿ ಯವರೆಗೂ ಓದಿದ್ದರು. ಚಿಕ್ಕಂದಿನಿಂದಲೂ ಬರವಣಿಗೆಯಲ್ಲಿ ಆಸಕ್ತಿಯಿತ್ತು. ಹತ್ತನೆ ವಯಸ್ಸಿನಲ್ಲಿ ವಕೀಲರಾಗಿದ್ದ ಎಮ್.ಎನ್.ನಂಜುಂಡಯ್ಯನವರೊಡನೆ ಮದುವೆಯಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ತ್ರಿವೇಣಿ, ಬಿ.ಎಮ್.ಶ್ರೀಕಂಠಯ್ಯ, ಆರ್ಯಾಂಬ ಪಟ್ಟಾಭಿ, ವಾಣಿಯವರ ಕುಟುಂಬ ಸದಸ್ಯರು ಆಗಿದ್ದರು.
ಕನ್ನಡ ಸಾಹಿತ್ಯಕ್ಕೆ ಕೊಡುಗೆ
ಬದಲಾಯಿಸಿ೧೯೪೪ ರಲ್ಲಿ ಕಸ್ತೂರಿಯಂಬ ಕಥಾ ಸಂಕಲನ ಬಿಡುಗಡೆಯಾಯಿತು. ಆದನಂತರ ವಾಣಿಯವರು ೩೩ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನೀಡಿದ್ದಾರೆ.
ಕಾದಂಬರಿಗಳು
ಬದಲಾಯಿಸಿಪ್ರಶಸ್ತಿಗಳು
ಬದಲಾಯಿಸಿ- ೧೯೬೨- ಕರ್ನಾಟಕ ರಾಜ್ಯ ಪ್ರಶಸ್ತಿ
- ೧೯೭೨- ಕರ್ನಾಟಕ ಸಾಹಿತ್ಯ ಅಖಾಡೆಮಿ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ Mohan Lal (2006). The Encyclopaedia Of Indian Literature (Volume Five (Sasay To Zorgot). Sahitya Akademi. p. 4489. ISBN 81-260-1221-8.
- ↑ Subramanyam, Lakshmi; T. V. Subramanyam (2000). Third eye: Women Writings from Karnataka. Srishti Publishers & Distributors. p. 153. ISBN 81-87075-60-0.