ವಾಣಿ (ಚಲನಚಿತ್ರ)

ಕನ್ನಡ ಚಲನಚಿತ್ರ
(ವಾಣಿ ಇಂದ ಪುನರ್ನಿರ್ದೇಶಿತ)

ಟೆಂಪ್ಲೇಟು:Testcases other

ವಾಣಿ

"ವಾಣಿ" ೧೯೪೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.[]

ಕಥಾ ಸಾರಾಂಶ

ಬದಲಾಯಿಸಿ

ಪಿಟೀಲು ವಾದಕ ಭಾಸ್ಕರ ಪಂಡಿತರು ತಮ್ಮ ಪತ್ನಿ ಛಾಯಮ್ಮ, ಪುತ್ರ ಶಂಕರ್‌ರೊಂದಿಗೆ ವಾಸವಾಗಿರುತ್ತಾರೆ.ಭಾರಿ ಚಂಡಮಾರುತವೊಂದು ಅಪ್ಪಳಿಸಿ ಇಡೀ ಹಳ್ಳಿಯೇ ಕೊಚ್ಚಿಕೊಂಡು ಹೋಗುವುದು.ಭಾಸ್ಕರ ಪಂಡಿತರು ಚಂಡಮಾರುತದಲ್ಲಿ ಕೊಚ್ಚಿಕೊಂಡು ಹೋಗುವರು. ಆದರೆ ಛಾಯಮ್ಮ ಮತ್ತು ಶಂಕರ್‌ ಬದುಕಿ ಉಳಿಯುವರು. ತಾಯಿಗೆ ಮಗನನ್ನು ಪಿಟೀಲು ವಾದಕನನ್ನಾಗಿ ಮಾಡಬೇಕೆಂಬ ಹಂಬಲ.ದೀಕ್ಷಿತ್‌ ಎಂಬ ವ್ಯಕ್ತಿ ಛಾಯಮ್ಮನ ಮೇಲೆ ಕೆಟ್ಟ ದೃಷ್ಟಿ ಬೀರುವನು. ಅದು ಫಲಿಸದಿದ್ದಾಗ ಆಕೆಯ ಮೇಲೆ ಕಳ್ಳತನದ ಆರೋಪ ಹೋರಿಸಿ ತಾಯಿ ಮಗ ಬೇರೆಯಾಗುವಂತೆ ಮಾಡುತ್ತಾನೆ. ಮಗ ಶಂಕರ ಗುರುಗಳೊಬ್ಬರ ಹತ್ತಿರ ಸಂಗೀತ ಕಲಿಯುತ್ತಾನಲ್ಲದೆ, ಜಮೀನ್ದಾರರೊಬ್ಬರ ಮಗಳೊಂದಿಗೆ ಮದುವೆಯಾಗುತ್ತಾನೆ. ಕೊನೆಗೆ ತಾಯಿ ಮಗ ಒಂದಾಗುತ್ತಾರೆ ಎಂಬುದೇ ಈ ಚಿತ್ರದ ಕಥಾ ಹಂದರವಾಗಿದೆ.

ಚೆಂಬೈ ವೈದ್ಯನಾಥ ಭಾಗವತರ್ ಅವರ ಸಂಗೀತ ಕಛೇರಿಯನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ.[] ಅವರೊಂದಿಗೆ ಫಾಲ್ಘಾಟ್ ಮಣಿ ಹಾಗೂ ಪಿಟೀಲು ಚೌಡಯ್ಯನವರು ಕಛೇರಿ ನಡೆಸಿಕೊಡುತ್ತಾರೆ.ಈ ಚಿತ್ರದ ಮೂಲಕ ಪಂಡರಿ ಬಾಯಿ ಮತ್ತು ಮುಸರಿ ಕೃಷ್ಣಮೂರ್ತಿ ಚಿತ್ರರಂಗವನ್ನು ಪ್ರವೇಶಿಸಿದರು.[] ಚೌಡಯ್ಯನವರು ತಂದೆ ಮತ್ತು ಮಗನ ಎರಡು ಪಾತ್ರಗಳನ್ನು ನಿರ್ವಹಿಸಿದರು.

ನಿರ್ಮಾಣ ಮತ್ತು ಬಿಡುಗಡೆ

ಬದಲಾಯಿಸಿ

ಹೆಚ್.ಆರ್.ಜಿ.ಸಿ. ಶ್ರೀ ಪಿಕ್ಚರ್ಸ್, ಮೈಸೂರು ಲಾಂಛನದಲ್ಲಿ, ಕೆ.ಹಿರಣ್ಣಯ್ಯ,ಜಿ.ಆರ್.ರಾಮಯ್ಯ,ಗೋಪಾಲ, ಟಿ.ಚೌಡಯ್ಯ ಹಾಗೂ ಸಾಹುಕಾರ್ ಟಿ.ಎಸ್. ಶಿವಬಸವ ಸ್ವಾಮಿ ಸೇರಿ ನಿರ್ಮಿಸಿದರು. ಆದರೆ ಅಧಿಕೃತವಾಗಿ ಶಿವಬಸವ ಸ್ವಾಮಿಯವರ ಹೆಸರು ಮಾತ್ರ ಇದೆ. ಚಿತ್ರೀಕರಣ ಪ್ರಕ್ರಿಯೆಯು ಕೊಯಂಬತ್ತೂರಿನ ಸೆಂಟ್ರಲ್ ಸ್ಟೂಡಿಯೋದಲ್ಲಿ ನಡೆಯಿತು.[] ೧೯೪೦ರಲ್ಲಿ ಚಿತ್ರೀಕರಣ ಪ್ರಾರಂಭಿಸಿದ ಈ ಚಿತ್ರವು ತೆರೆಕಾಣಲು ಮೂರು ವರ್ಷಗಳ ಸಮಯ ಕಂಡಿತು.[] ಬಿಡುಗಡೆಗೊಂಡ ಬಳಿಕ ವಾಣಿಜ್ಯ ದೃಷ್ಟಿಯಿಂದ ಈ ಚಲನಚಿತ್ರ ವಿಫಲಗೊಂಡು ನಿರ್ಮಾಪಕರು ಆರ್ಥಿಕ ನಷ್ಟವನ್ನು ನೋಡಬೇಕಾಯ್ತು.[] ಮಾರ್ಚ್ ೩೧,೧೯೪೪ರಂದು ಈ ಚಿತ್ರ ಸೆನ್ಸಾರ್ ಪ್ರಮಾಣ ಪತ್ರ ಪಡೆದುಕೊಂಡಿತು.

ಪಾತ್ರ ವರ್ಗ

ಬದಲಾಯಿಸಿ

ಟಿ.ಚೌಡಯ್ಯ ಬಳ್ಳಾರಿ ಲಲಿತಾ ಬಳ್ಳಾರಿ ರತ್ನಮಾಲಾ ಕೆ.ವಿ.ಆಚ್ಯುತ ರಾವ್ ಸುಬ್ಬಯ್ಯ ಸುಬ್ಬಣ್ಣ ಶಾಮಣ್ಣ ಎ.ನಾರಾಯಣ ರಾವ್ ಮುಸುರಿ ಕೃಷ್ಣಮೂರ್ತಿ ಕೆ.ಹಿರಣ್ಣಯ್ಯ ಪಂಡರಿ ಬಾಯಿ ಶಾಂತಾ ರಾಜಮ್ಮ ಚೆಂಬೈ ವೈದ್ಯನಾಥ ಭಾಗವತರ್ ಪಾಲ್ಘಾಟ್ ಟಿ.ಎಸ್.ಮಣಿ ಎಂ. ಮಾಧವ ರಾವ್ ಎಂ.ಆರ್.ಪಿ. ಸಾರಥಿ

ಉಲ್ಲೇಖ

ಬದಲಾಯಿಸಿ
  1. Baburao, Patel (1943). "Vani or Violinist". Filmindia. 9 (1): 48. Retrieved 13 April 2017.
  2. Classical concert of 'Vani'
  3. Khajane, Muralidhara (7 March 2013). "A star who became the mother to stars". The Hindu.
  4. "Kovai Central Studios Was Once a Home for Kannada Cinema Too". 26 October 2018.
  5. "History 17 - Vani Producer Ambi Grand Father Pitilu Chowdaiah". Chitraloka. Archived from the original on 17 ಡಿಸೆಂಬರ್ 2014. Retrieved 15 August 2013.
  6. "Actress who glowed with inner beauty". The Hindu. 14 February 2003. Archived from the original on 5 April 2003.