ವಸಂತ ಕನಕಾಪುರ ಇವರು ಧಾರವಾಡದಲ್ಲಿ ವಾಸಿಸುತ್ತಿರುವ ಸುಪ್ರಸಿದ್ಧ ಹಾರ್ಮೋನಿಯಮ್ ವಾದಕರು.

ಶಿಕ್ಷಣ

ಬದಲಾಯಿಸಿ

ತಮ್ಮ ಐದನೆಯ ವಯಸ್ಸಿನಿಂದಲೆ ಕನಕಾಪುರ ಇವರು ತಬಲಾ ಶಿಕ್ಷಣ ಪ್ರಾರಂಭಿಸಿದರು. ಇವರ ಮೊದಲ ಗುರುಗಳು ಹುಬ್ಬಳ್ಳಿಯ ಶ್ರೀ ಆರ್.ಜಿ.ದೇಸಾಯಿ ಹಾಗು ಶ್ರೀ ಗೋಪಾಲರಾವ ದೇಸಾಯಿ. ಧಾರವಾಡದ ಶ್ರೀ ಹನುಮಂತರಾವ ವಾಳ್ವೇಕರರಿಂದ ಇವರು ಹೆಚ್ಚಿನ ಶಿಕ್ಷಣ ಪಡೆದರು.

ಕನಕಾಪುರರವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೆ, ಆಗ ಪ್ರಸಿದ್ಧ ಹಿಂದುಸ್ತಾನಿ ಗಾಯಕಿಯಾದ ಸುರಶ್ರೀ ಕೇಸರಬಾಯಿ ಕೇರಕರ ಇವರಿಗೆ ಹಾರ್ಮೋನಿಯಮ್ ಸಾಥ ಕೊಟ್ಟಿದ್ದರು. ಇದಲ್ಲದೆ ಉಸ್ತಾದ ಅಮೀರ ಖಾನ, ಶ್ರೀಮತಿ ಗಂಗೂಬಾಯಿ ಹಾನಗಲ್,ಪಂಡಿತ ಭೀಮಸೇನ ಜೋಷಿ, ಪಂಡಿತ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾರ್ಜುನ ಮನಸೂರ, ಪಂಡಿತ ರಸಿಕಲಾಲ ಅಂಧಾರಿಯಾ, ಶ್ರೀಮತಿ ಕಿಶೋರಿ ಅಮೋನಕರ, ಶ್ರೀಮತಿ ಪ್ರಭಾ ಅತ್ರೆ ಹಾಗು ಶ್ರೀಮತಿ ಪರ್ವೀನಾ ಸುಲ್ತಾನಾ ಇವರೆಲ್ಲರಿಗೆ ಹಾರ್ಮೋನಿಯಮ್ ಸಾಥ ನೀಡಿದ್ದಾರೆ.


ವೃತ್ತಿ

ಬದಲಾಯಿಸಿ

ಪಂಡಿತ ವಸಂತ ಕನಕಾಪುರ ಇವರು ಧಾರವಾಡ ಆಕಾಶವಾಣಿಯ ಕಲಾಕಾರರಾಗಿದ್ದಾರೆ. ಅಲ್ಲದೆ ಅನೇಕ ವರ್ಷಗಳಿಂದ ಧಾರವಾಡದಲ್ಲಿ ಸಂಗೀತ ಶಿಕ್ಷಣ ನೀಡುತ್ತ ಬಂದಿದ್ದಾರೆ.

ಪುರಸ್ಕಾರ

ಬದಲಾಯಿಸಿ

ಪಂಡಿತ ವಸಂತ ಕನಕಾಪುರ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಸಂಗೀತ ನೃತ್ಯ ಅಕಾಡೆಮಿಯು ಇವರಿಗೆ “ಕರ್ನಾಟಕ ಕಲಾ ತಿಲಕ” ಗೌರವ ನೀಡಿದೆ. ಕರ್ನಾಟಕ ಸರಕಾರವು ರಾಜ್ಯೋತ್ಸವ ಪುರಸ್ಕಾರ ನೀಡಿದೆ. ಮಹಾರಾಷ್ಟ್ರ ಸರಕಾರವು “ ಮಂಜೂಷ ರತ್ನ ” ಪ್ರಶಸ್ತಿಯನ್ನು ನೀಡಿದೆ. ಕರ್ನಾಟಕ ಕಲಾಕಾರ ಮಂಡಲವು “ ನಾದಶ್ರೀ ” ಪ್ರಶಸ್ತಿಯನ್ನು ನೀಡಿದೆ.