ವರುಣ್ ಅಗರ್ವಾಲ್
ವರುಣ್ ಅಗರ್ವಾಲ್ ಭಾರತದ ಮೊದಲನೇ ತಲೆಮಾರಿನ ಒಬ್ಬ ಉದ್ಯಮಿ,ಲೇಖಕ ಮತ್ತು ಚಿತ್ರ ತಯಾರಕ.[೧] ( ಡಿಸೆಂಬರ್ ೦೬, ೧೯೮೬ ರಂದು ಭಾರತದಲ್ಲಿ ಜನನ),ಬೆಂಗಳೂರಿನ ಬಿಶಪ್ ಕಾಟನ್'ಸ್ ಹೈಸ್ಕೂಲಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು.[೨]. ಅವರು ಆಲ್ಮ ಮೇಟರ್ ಹಾಗು ಮತ್ತೆರಡು ಕಂಪನಿಗಳಾದ - ರೆಟಿಕುಲಾರ್ ಮತ್ತು ಲಾಸ್ಟ್ ಮಿನಿಟ್ ಫ಼ಿಲ್ಮ್ಸ್ ಬಂಡವಾಳಗಾರ. ಅದಲ್ಲದೆ, ಅವರು "How I Braved Anu Aunty and Co-Founded A Million Dollar Company" ಪುಸ್ತಕದ ಲೇಖಕರು.[೩]
ವರುಣ್ ಅಗರ್ವಾಲ್ | |
---|---|
ಜನನ | ೧೯೮೬-೧೨-೦೬ ಭಾರತ |
ವೃತ್ತಿ | ಲೇಖಕ, ಉದ್ಯಮಿ |
ರಾಷ್ಟ್ರೀಯತೆ | ಭಾರತ |
ಪ್ರಮುಖ ಕೆಲಸ(ಗಳು) | "How I Braved Anu Aunty" ಪುಸ್ತಕದ ಲೇಖಕ ಮತ್ತು ದಶಲಕ್ಷ ಡಾಲರ್ ಮೌಲ್ಯದ ಕಂಪನಿಯ ಸದಸ್ಯ ಬಂಡವಾಳಗಾರ |
[[೧] www |
ವೃತ್ತಿಜೀವನ
ಬದಲಾಯಿಸಿಬೆಂಗಳೂರಿನಲ್ಲಿ ತಮ್ಮ ಇಂಜಿನಿಯರಿಂಗ್ ಕಾಲೇಜು ದಿನಗಳಲ್ಲಿ, ಚಿತ್ರ ನಿರ್ದೆಶನ ಮಾಡುವುದನ್ನು ಪ್ರಾರಂಭಿಸಿದರು ಮತ್ತು 'ಲಾಸ್ಟ್ ಮಿನಿಟ್ ಫ಼ಿಲ್ಮ್ಸ್' ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಸಿ ಎಮ್ ಆರ್ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ವ್ಯಾಸಂಗದ ನಂತರ ಫ಼ಟ್ ಫ಼ಿಶ್ ಫ಼ಿಲ್ಮ್ಸ್ನಲ್ಲಿ ನಿರ್ದೆಶಕರಾಗಿ ಕೆಲಸ ಮಾಡಿದರು ಮತ್ತು ೨೧ರ ವಯಸ್ಸಿನಲ್ಲಿ ಬಾಲಿವುಡ್ ತಾರೆಗಳಾದ ಪ್ರೀತೀ ಜ಼ಿನ್ಟ ಹಾಗು ಎ. ಆರ್. ರಹಮಾನ್ ಅವರನ್ನು ಸಂಗೀತ ದೃಶ್ಯಸುರಳಿಯಲ್ಲಿ ನಿರ್ದೆಶಿಸಿದರು.[೪]
ಉದ್ಯಮ
ಬದಲಾಯಿಸಿಆವರು ೨೩ನೇ ವಯಸ್ಸಿನಲ್ಲಿ, ಸ್ನೇಹಿತ ರಾಹ್ನ್ ಮಲ್ಹೋತ್ರಾ ಜೋತೆಗೂಡಿ ತಮ್ಮ ಏರಡನೇ ಕಂಪನಿಯಾದ ಆಲ್ಮ ಮೇಟರ್ ಅನ್ನು ಪ್ರಾರಂಭಿಸಿದರು. ಈ ಕಂಪನಿಯು ಭಾರತದ ಅನೇಕ ವಿದ್ಯಾಸಂಸ್ಥೆಗಳೊಂದಿಗೆ ಕಸ್ಟಮೈಜ಼್ಡ್ ಉಡುಪು ತಯಾರಕ ಪಾಲುದಾರರಾಗಿದೆ.[೫] ಈ ಎರಡು ಕಂಪನಿಗಳಲ್ಲದೆ, ರೆಟಿಕುಲಾರ್ ಎಂಬ ಮತ್ತೊಂದು ಕಂಪನಿಯ ಸದಸ್ಯ ಬಂಡವಾಳಗಾರರು.
ಉಲ್ಲೇಖಗಳು
ಬದಲಾಯಿಸಿ- ↑ "Koramangala is a convenient location for entrepreneurs: Varun Agarwal". indiatimes.com. Archived from the original on 2014-10-15. Retrieved 2014-09-25.
- ↑ "Notes to Myself". The Hindu.
- ↑ "Varun to work with brother Rohit Dhawan". "indiatimes.com".
- ↑ "Last Minute Success". The Hindu. Archived from the original on 2014-04-18. Retrieved 2014-09-25.
- ↑ "From failing in engineering to co-founding a million-dollar company". news.yahoo.com. 2014-06-26.