ವಯಸ್ಸಾಗುವಿಕೆ
ವಯಸ್ಸಾಗುವಿಕೆ (ವಯೋವೃದ್ಧಿ) ಎಂದರೆ ವಯಸ್ಸು ಹೆಚ್ಚಾಗುವ ಪ್ರಕ್ರಿಯೆ. ಈ ಪದವು ವಿಶೇಷವಾಗಿ ಮಾನವರು, ಅನೇಕ ಪ್ರಾಣಿಗಳು ಹಾಗೂ ಶಿಲೀಂಧ್ರಗಳನ್ನು ಸೂಚಿಸುತ್ತದೆ, ಆದರೆ ಬ್ಯಾಕ್ಟೀರಿಯಾ, ಬಹುವಾರ್ಷಿಕ ಸಸ್ಯಗಳು ಹಾಗೂ ಕೆಲವು ಸರಳ ಪ್ರಾಣಿಗಳು ಸಂಭಾವ್ಯವಾಗಿ ಜೈವಿಕವಾಗಿ ಅಮರ್ತ್ಯವಾಗಿವೆ. ವಿಶಾಲವಾದ ಅರ್ಥದಲ್ಲಿ, ವಯಸ್ಸಾಗುವಿಕೆಯು ವಿಭಜಿಸುವುದು ನಿಂತುಹೋಗಿರುವ ಒಂದು ಜೀವಿಯೊಳಗಿನ ಏಕ ಕೋಶಗಳನ್ನು ಸೂಚಿಸಬಹುದು.
ಮಾನವರಲ್ಲಿ, ವಯಸ್ಸಾಗುವಿಕೆಯು ಕಾಲಾಂತರದಲ್ಲಿ ಮನುಷ್ಯನಲ್ಲಿ ಆದ ಬದಲಾವಣೆಗಳ ಶೇಖರಣೆಯನ್ನು ಪ್ರತಿನಿಧಿಸುತ್ತದೆ ಮತ್ತು ಶಾರೀರಿಕ, ಮಾನಸಿಕ, ಹಾಗೂ ಸಾಮಾಜಿಕ ಬದಲಾವಣೆಗಳನ್ನು ಒಳಗೊಳ್ಳುತ್ತದೆ. ಉದಾಹರಣೆಗೆ ವಯಸ್ಸಾದಂತೆ ಪ್ರತಿಕ್ರಿಯಾ ಸಮಯವು ನಿಧಾನವಾಗಬಹುದು, ಆದರೆ ವಿಶ್ವದ ಘಟನೆಗಳ ಜ್ಞಾನ ಹಾಗೂ ಬುದ್ಧಿವಂತಿಕೆಯು ವಿಸ್ತರಿಸಬಹುದು. ವಯಸ್ಸಾಗುವಿಕೆಯು ಬಹುತೇಕ ಮಾನವ ರೋಗಗಳಿಗೆ ಪರಿಚಿತವಿರುವ ಅತ್ಯಂತ ದೊಡ್ಡ ಅಪಾಯದ ಅಂಶಗಳ ಪೈಕಿ ಒಂದಾಗಿದೆ: ವಿಶ್ವದಾದ್ಯಂತ ಪ್ರತಿ ದಿನ ಸಾಯುವ ಸರಿಸುಮಾರು ೧೫೦,೦೦೦ ಜನರಲ್ಲಿ, ಸುಮಾರು ಮೂರನೇ ಎರಡರಷ್ಟು ಜನ ವಯೋಸಂಬಂಧಿ ಕಾರಣಗಳಿಂದ ಸಾಯುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Global AgeWatch Statistics on population ageing and life expectancy
- HelpAge International and UNFPA (2012). Ageing in the 21st Century – A Celebration and a Challenge. Archived 2016-07-29 ವೇಬ್ಯಾಕ್ ಮೆಷಿನ್ ನಲ್ಲಿ.