ವಡ್ಡಗೆರೆ ವೀರನಾಗಮ್ಮ ದೇವಾಲಯ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಅಮ್ಮಾಜಿ ಎಂದೆ ಪ್ರಸಿದ್ದವಾಗಿರುವ ಶ್ರೀ ವೀರನಾಗಮ್ಮ ದೇವಿಯ ದೇವಾಲಯ ಇರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದಲ್ಲಿ ಈ ದೇವಾಲಯಕ್ಕೆ ಸುಮಾರು ೭೦೦ ವರ್ಷಗಳ ಪುರಾತನ ಇತಿಹಾಸ ಇದೆ, ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಜೋತೆಗೆ ಪ್ರತಿ ಸೋಮವಾರದಂದು ಅನ್ನ ಸಂತರ್ಪಣಾ ಕಾರ್ಯವು ನಡೆಯುತ್ತದೆ. ಈ ದೇವಾಲಯದ ವತಿಯಿಂದ ಮದುವೆ ಮತ್ತು ಇತರೆ ಶುಭ ಸಮಾರಂಭಗಳು ನಡೆಯುತ್ತವೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಜೋತೆಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮರುದಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಾಸ್ಥಾನದ ಪಕ್ಕದಲ್ಲಿ ಮಜ್ಜನ ಬಾವಿ ಇದ್ದು, ಇದು ಸದಾ ಕಾಲ ನೀರಿನಿಂದ ತುಂಬಿರುತ್ತದೆ.ಮತ್ತು ವಡ್ಡಗೆರೆಯಿಂದ ಸಮಾರು ೧ ಕಿ.ಮೀ ದೂರದಲ್ಲಿ ಮದ್ಯಮ್ಮನ ಬೆಟ್ಟವಿದ್ದು, ಇಲ್ಲಿಯೂ ಕೂಡ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ವಡ್ಡಗೆರೆ ವ್ಯಾಪ್ತಿಗೆ ಸೇರಿದ ಮಲಪನಹಳ್ಳಿ ಹತ್ತಿರ ತಲಪುರಿಕೆ ಎಂಬ ಸ್ಥಳವಿದ್ದು,ಇಲ್ಲಿ ಸದಾ ಕಾಲ ನೀರು ಉಕ್ಕಿ ಹರಿಯುತ್ತದೆ. ಈ ನೀರಿನಿಂದ ಈ ಬಾಗದ ಜನರು ಸುಮಾರು ೧೫೦ ಎಕರೆ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಡರಾಗಿದ್ದಾರೆ.ವಡ್ಡಗೆರೆ ಗ್ರಾಮದಲ್ಲಿ ಬಂಡಿ ಮನೆ, ಎಂಬ ಮನೆಯಿದ್ದು ಇಲ್ಲಿ ಹಿಂದೆ ದೇವತೆಗಳು ಸರಕು ಸಾಗಾಣಿಕೆಗೆಂದು ಬಳಸುತ್ತಿದ್ದ ಬಂಡಿಗಳನ್ನು ಈ ಮನೆಯಲ್ಲಿ ನಿಲ್ಲಿಸುತ್ತಿದ್ದರು. ಆದ್ದರಿಂದ ಇದಕ್ಕೆ ಬಂಡಿಮನೆ ಎಂಬ ಹೆಸರು ಬಂದಿದ್ದು, ಇಂದಿಗೂ ಇಲ್ಲಿ ಈ ಬಂಡಿಗಳು ಕಾಣಸಿಗುತ್ತವೆ. ವಡ್ಡಗೆರೆಗೆ ಹೋಗುವ ಮಾರ್ಗ : ಕೊರಟಗೆರೆ ೬ ಕೀ.ಮೀ ದೂರದಲ್ಲಿ (ಕೊರಟಗೆರೆ-ಕೊಡಗದಾಲ ರಸ್ತೆ)