ವಜ್ರಪೋಹ ಜಲಪಾತ
ವಜ್ರಪೋಹ ಜಲಪಾತಗಳು (ವಜ್ರಪೋಯ ಜಲಪಾತಗಳು), ಭಾರತದ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ. ಈ ಜಲಪಾತವು ಜಾಂಬೋಟಿ ಗ್ರಾಮದಿಂದ ನೈಋತ್ಯ ದಿಕ್ಕಿನಲ್ಲಿ ಸುಮಾರು ೮.೫ ಕಿ.ಮೀ (೫.೩ ಮೈಲಿ) ದೂರದ ಕಾಡಿನಲ್ಲಿ ನೆಲೆಗೊಂಡಿದೆ. ಎತ್ತರದ ಬೆಟ್ಟದ ಮೇಲೆ ಗವಾಲಿ ಮತ್ತು ಚಾಪೋಲಿ ಗ್ರಾಮದ ನಡುವೆ, ಮಾಂಡೋವಿ ನದಿಯು ಸುಂದರವಾದ ವಜ್ರಪೋಹ ಜಲಪಾತವಾಗಿ ಹರಿಯುತ್ತದೆ. ಹಾಗೂ ಈ ಜಲಪಾತದ ಎತ್ತರ ಸುಮಾರು ೨೦೦ ಮೀ (೬೬೦ ಅಡಿ) ಆಗಿದೆ. [೧] ಇದು ಮಳೆಗಾಲದ ನಂತರ (ಜೂನ್-ಅಕ್ಟೋಬರ್) ಉತ್ತಮವಾಗಿ ಕಂಡುಬರುತ್ತದೆ. [೨] ಬೆಳಗಾವಿಯಿಂದ ನೈಋತ್ಯ ದಿಕ್ಕಿನಲ್ಲಿ ಸಾಗಿದರೆ ಸುಮಾರು ೧.೫ ಗಂಟೆಗಳಲ್ಲಿ ಈ ಜಲಪಾತವನ್ನು ತಲುಪಬಹುದಾಗಿದೆ. [೩]
ಮಾಂಡೋವಿ ನದಿಯನ್ನು (ಮಹದಾಯಿ ನದಿ ಎಂದೂ ಕರೆಯುತ್ತಾರೆ) ಗವಳಿ, ಹೆಮ್ಮಡಗಾ, ಜಾಂಬೋಟಿ, ಕಣಕುಂಬಿ, ಮತ್ತು ತಾಳವಾಡೆ ಗ್ರಾಮಗಳ ಸಮೀಪವಿರುವ ಹೊಳೆಗಳಿಂದ ಪೋಷಿಸಲಾಗುತ್ತದೆ. ಪಶ್ಚಿಮ ಘಟ್ಟಗಳ (ಸಹ್ಯಾದ್ರಿ ಎಂದೂ ಕರೆಯಲ್ಪಡುವ) ಪರ್ವತ ಪ್ರದೇಶದಲ್ಲಿ ನೆಲೆಸಿರುವ ಈ ಪ್ರದೇಶವು ೩೮೦೦ ರಿಂದ ೫೭೦೦ ಮಿಲಿಮೀಟರ್ (೧೫೦ ರಿಂದ ೨೨೦ ಇಂಚು) ನಷ್ಟು ವಾರ್ಷಿಕ ಮಳೆಯನ್ನು ಪಡೆಯಬಹುದು. ಬೇಸಿಗೆಯ ತಿಂಗಳುಗಳಲ್ಲಿ (ಮಾರ್ಚ್-ಮೇ) ಹೊಳೆ ಮತ್ತು ನದಿ ನೀರಿನ ಮಟ್ಟವು ಕಡಿಮೆಯಾಗಬಹುದು. [೨] [೪]
ಉಲ್ಲೇಖಗಳು
ಬದಲಾಯಿಸಿ- ↑ Kerkar, Rajendra P. Vajrapoya, a gorgeous waterfall in the Western ghats. The Times of India. Bennett, Coleman & Co. Ltd. April 30, 2009. Retrieved 2011-11-11.
- ↑ ೨.೦ ೨.೧ The Hermitage Guest House in the Western Ghats The Hermitage Guest House. Retrieved 2011-11-12.
- ↑ Directions from Belgaum, Karnataka, India to Vajrapoha Water Falls, Karnataka, India Google maps. Retrieved 2011-11-11.
- ↑ Mondovi/Mahadayi River, Karnataka. Archived 2015-10-05 ವೇಬ್ಯಾಕ್ ಮೆಷಿನ್ ನಲ್ಲಿ. Tour Karnataka. Retrieved 2011-11-11.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕರ್ನಾಟಕದ ಮಹದಾಯಿ (ಮಾಂಡೋವಿ) ನದಿ, ವಜ್ರಪೋಹ ಜಲಪಾತ ಸೇರಿದಂತೆ ಸುಂದರವಾದ ಪ್ರದೇಶದ ಫೋಟೋಗಳು.
- ಗುಪ್ತ ಜಲಪಾತವನ್ನು ಪತ್ತೆಹಚ್ಚಲಾಗುತ್ತಿದೆ
- ವಜ್ರದ ಹನಿಗಳು ಮತ್ತು ಮಳೆಬಿಲ್ಲಿನ ಪರದೆಗಳು
- ಫೋಟೋಗಳು
- [೧]