ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ (ಡಾ.ಫಕೀರಪ್ಪ .ಗುರುಬಸಪ್ಪ .ಹಳಕಟ್ಟಿ ) ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿ ಇದೆ. ಇದು 1982ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದಲೂ ಕೂಡ ಮಾನ್ಯತೆ ಪಡೆದಿದೆ. ಪ್ರಸ್ತುತ 10 ಪದವಿ ಹಾಗೂ 5 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ | |
---|---|
ಬಿ.ಎಲ್.ಡಿ.ಇ.ಎ | |
ಸ್ಥಾಪನೆ | 1982 |
ಸ್ಥಳ | ಆಶ್ರಮ ರಸ್ತೆ, ವಿಜಯಪುರ |
ವಿದ್ಯಾರ್ಥಿಗಳ ಸಂಖ್ಯೆ | 1500 |
ಪದವಿ ಶಿಕ್ಷಣ | 500 |
ಸ್ನಾತಕೋತ್ತರ ಶಿಕ್ಷಣ | 120 |
ಅಂತರಜಾಲ ತಾಣ | http://bldeacet.ac.in |
ಚರಿತ್ರೆ
ಬದಲಾಯಿಸಿವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಿ.ಎಲ್.ಡಿ.ಈ. ಸಂಸ್ಠೆಯಿಂದ 1982ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಯಪುರ ನಗರದಲ್ಲಿದೆ.[೧]
ವಿಭಾಗಗಳು
ಬದಲಾಯಿಸಿಪದವಿ ವಿಭಾಗಗಳು
- ಅಟೋಮೋಬೈಲ್ ಎಂಜಿನಿಯರಿಂಗ್
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಮೆಕ್ಯಾನಿಕಲ್ ಎಂಜಿನಿಯರಿಂಗ್
- ವಾಸ್ತುಶಿಲ್ಪ ಎಂಜಿನಿಯರಿಂಗ್
ಸ್ನಾತಕೋತ್ತರ ಪದವಿ ವಿಭಾಗಗಳು
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
- ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
- ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)
ಆಡಳಿತ
ಬದಲಾಯಿಸಿಪ್ರಸ್ತುತ ಶ್ರೀ ಎಮ್.ಬಿ.ಪಾಟೀಲರು ಬಿ.ಎಲ್.ಡಿ.ಈ.ಸಂಸ್ಠೆಯ ಅಧ್ಯಕ್ಷರಾಗಿದ್ದಾರೆ.
ಆವರಣ
ಬದಲಾಯಿಸಿಮಹಾವಿದ್ಯಾಲಯವು 50 ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.
ಗ್ರಂಥಾಲಯ
ಬದಲಾಯಿಸಿಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಪ್ರವೇಶ
ಬದಲಾಯಿಸಿದ್ವಿತೀಯ ಪಿಯುಸಿ (10+2) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (10+2) ಮತ್ತು ಐಸಿಎಸ್ಸಿ (10+2) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿವೇತನ
ಬದಲಾಯಿಸಿ- ಅರ್ಹತೆ ವಿದ್ಯಾರ್ಥಿವೇತನ
- ರಕ್ಷಣಾ ವಿದ್ಯಾರ್ಥಿವೇತನ
- ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
ಬಾಹ್ಯ ಸಂಪರ್ಕಗಳು
ಬದಲಾಯಿಸಿವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಅಧಿಕೃತ ಅಂತರಜಾಲ ತಾಣ