ಲೋಹಾರ್ ಚಾಲ್, ಮುಂಬೈ
'ಲೋಹಾರ್ ಚಾಲ್' 'ಲೋಹಾರ್,' ಅಂದರೆ ಹಿಂದಿಭಾಷೆಯಲ್ಲಿ, ಕಬ್ಬಿಣ ಎಂದರ್ಥ. 'ಲೋಹಾರ್ ಚಾಲ್,' ದಕ್ಷಿಣ ಮುಂಬಯಿ ನ ಒಂದು ಪ್ರಖ್ಯಾತ ವ್ಯಾಪಾರಸ್ಥಳ. 'ಹಾರ್ಡ್ವೇರ್ ಪದಾರ್ಥಗಳು,' ಇಲ್ಲಿ ಹೋಲ್ ಸೇಲ್ ಬೆಲೆಯಲ್ಲಿ ಸಿಗುತ್ತವೆ. 'ದಾವಾ ಬಝಾರ್,' ಗೆ ಇದು ತೀರ ಸಮೀಪದಲ್ಲಿದೆ. 'ಎಲೆಕ್ಟ್ರಿಕಲ್ ಮತ್ತು ಹಾರ್ಡ್ವೇರ್,' ಗೆ ಸಂಬಂಧಿಸಿದ ಸಮಸ್ತ ದಿನಬಳಕೆಯ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಕಾರ್ಖಾನೆಗಳಲ್ಲಿ ಉಪಯೋಗವಾಗುವ 'ಸ್ಪ್ರಿಂಗ್ ಗಳು', 'ಕರ್ಟನ್ ರಾಡ್ಸ್ ಗಳು' , 'ವಿವಿಧ ಸೈಙ್ ' ಗಳಲ್ಲಿ ಬರುವ 'ಪ್ಲಾಸ್ಟಿಕ್ ' ಹಾಗೂ 'ಕಬ್ಬಿಣ/ಅಲ್ಲ್ಯೂಮಿನಿಯಮ್ ಪೈಪ್,' ಗಳು, ಅದರ 'ತಿರುಪುಗಳು', ಹಾಗೂ ಅದಕ್ಕೆ ಸಂಬಂಧಿಸಿದ 'ವಾಲ್ವ್,' ಗಳು 'ಜಾಯಿಂಟ್ಸ್,' ಗಳು 'ಪಂಪ್ ಸೆಟ್,' ಗಳು ಇತ್ಯಾದಿ. ಇನ್ನೂ ಹಲವಾರು ಹೋಲ್ ಸೇಲ್ ವಸ್ತುಗಳು ಇಲ್ಲಿ ಕಡಿಮೆದರದಲ್ಲಿ, ಫ್ಯಾಕ್ಟರಿ ದರಕ್ಕೆ ದೊರಕುತ್ತವೆ. 'ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್,' ಇಲ್ಲಿಂದ ಹೆಚ್ಚಿಗೆ ದೂರವಿಲ್ಲ. 'ಲೋಹಾರ್ ಚಾಲ್ ,' ನಿಂದ ಮುಂಬಯಿ ನಗರದ ಎಲ್ಲಾ ಕಡೆಗೆ ಹೋಗಿ-ಬರಲು ಬಸ್ಸುಗಳ ಸೌಕರ್ಯವಿದೆ.