ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

(ಲೋಕತಂತ್ರಿಕ ಕಾಂಗೋ ಗಣರಾಜ್ಯ ಇಂದ ಪುನರ್ನಿರ್ದೇಶಿತ)

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
République Démocratique du Congo
Flag of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Flag
Coat of arms of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Coat of arms
Motto: Justice – Paix – Travail(ಫ್ರೆಂಚ್)
"ನ್ಯಾಯ-ಶಾಂತಿ-ದುಡಿಮೆ"
Anthem: ದಿಬೌತ್ ಕಾಂಗೊಲೈಸ್
Location of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Capitalಕಿನ್ಶಾಸಾ
Largest cityರಾಜಧಾನಿ
Official languagesಫ್ರೆಂಚ್
Recognised regional languagesಲಿಂಗಾಲಾ, ಕಾಂಗೋ/ಕಿಟೂಬಾ, ಸ್ವಾಹಿಲಿ, ಟ್ಶಿಲೂಬಾ
Demonym(s)Congolese
Governmentಅರೆ ಅಧ್ಯಕ್ಷೀಯ ಗಣರಾಜ್ಯ
ಜೋಸೆಫ್ ಕಬೀಲ
ಆಂಟೋಯ್ನ್ ಗಿಝೆಂಗಾ
ಸ್ವಾತಂತ್ರ್ಯ
• ಬೆಲ್ಜಿಯಂನಿಂದ
ಜೂನ್ 30 1960
• Water (%)
3.3
Population
• 2007 estimate
63,655,000 (20ನೆಯದು)
• 1984 census
29,916,800
GDP (PPP)2005 estimate
• Total
$46.491 ಬಿಲಿಯನ್ (78ನೆಯದು)
• Per capita
$774 (174ನೆಯದು)
GDP (nominal)2005 estimate
• Total
$7.094 ಬಿಲಿಯನ್ (116ನೆಯದು)
• Per capita
$119 (181ನೆಯದು)
HDI (2004)Increase 0.391
Error: Invalid HDI value · 167ನೆಯದು
Currencyಕಾಂಗೊಲೀಸ್ ಫ್ರಾಂಕ್ (CDF)
Time zoneUTC+1 to +2 (WAT, CAT)
• Summer (DST)
UTC+1 to +2 (ಪರಿಗಣನೆಯಲ್ಲಿಲ್ಲ)
Calling code243
Internet TLD.cd