ಲೈಬ್‍ನಿಟ್ಸ್ ಪ್ರಮೇಯ

ಕಲನಶಾಸ್ತ್ರದಲ್ಲಿ, ಲೈಬ್‍ನಿಟ್ಸ್ ಪ್ರಮೇಯ ಎನ್ನುವುದು ಗುಣಲಬ್ಧ ನಿಯಮವನ್ನು ಸಾರ್ವತ್ರೀಕರಿಸುತ್ತದೆ.[೧] ಇದಕ್ಕೆ ಲೈಬ್‍ನಿಟ್ಸ್ ಹೆಸರನ್ನು ಇಡಲಾಗಿದೆ. ಇದನ್ನು ಲೈಬ್‌ನಿಟ್ಸ್ ಸೂತ್ರವೆಂದೂ ಕರೆಯುವುದಿದೆ. ಎರಡು ಗಣಿತ ಫಲನಗಳ ಗುಣಲಬ್ಧದ n-ನೆಯ ನಿಷ್ಪನ್ನವನ್ನು ಕಂಡುಹಿಡಿಯಲು ಈ ಸೂತ್ರದ ಬಳಕೆ ಇದೆ. ಸೂತ್ರ ಹೀಗಿದೆ:

Dn(uv) = vDnu + nDn-1uDv + ½n(n-1)Dn-2uD2v + … + uDnv

ಇಲ್ಲಿ u,v ಎರಡು ಗಣಿತ ಫಲನಗಳು; D = ಅವಕಲ ಪರಿಕರ್ಮಿ (differential operator). ಇಲ್ಲಿಯ ಸಂಖ್ಯಾಗುಣಾಂಕಗಳು (number co-efficients) (u+v)n ಎಂಬುದರ ದ್ವಿಪದ ವಿಸ್ತರಣೆಯಲ್ಲಿಯ ಗುಣಾಂಕಗಳು; ಮತ್ತು ಸೂಚಿತವಾಗಿರುವ ನಿಷ್ಪನ್ನಗಳ ದರ್ಜೆ ಈ ವಿಸ್ತರಣೆಯಲ್ಲಿಯ ಸಂವಾದಿ ಘಾತಗಳ ದರ್ಜೆಯವೇ ಆಗಿರುತ್ತವೆ. ಸಾದೃಶ್ಯವಾಗಿ ಹೇಳುವುದಾದರೆ, k ಫಲನಗಳ ಗುಣಲಬ್ಧದ n-ನೆಯ ವ್ಯುತ್ಪನ್ನವನ್ನು k ಪರಿಮಾಣಗಳ ಮೊತ್ತದ n-ಘಾತದ (nth power), ಬಹುಪದೀಯ ವಿಸ್ತರಣೆಯಿಂದ ಬರೆಯಬಹುದು.

ಉಲ್ಲೇಖಗಳು

ಬದಲಾಯಿಸಿ
  1. Olver, Peter J. (2000). Applications of Lie Groups to Differential Equations. Springer. pp. 318–319. ISBN 9780387950006.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: