ಲೆಹೆಂಗಾ ಸ್ಟೈಲ್ ಸೀರೆ

ಲೆಹೆಂಗಾ ಸ್ಟೈಲ್ ಸೀರೆ

ಬದಲಾಯಿಸಿ
 
ನಟಿ ರೈಮಾ ಸೇನ್ ಅವರು ಲೆಹೆನ್ಗಾ ಸ್ಟೈಲ್ ಸಾರಿ ಯಲ್ಲಿದ್ದಾರೆ

ಲೆಹೆಂಗಾ ಶೈಲಿಯ ಸೀರೆ ಎಂಬುದು ಭಾರತದಲ್ಲಿ ಪರಿಚಯಿಸಲಾದ ಆಧುನಿಕ ಉಡುಪು. ಅಂದರೆ ಸಾಂಪ್ರದಾಯಿಕ ಸೀರೆ ಮತ್ತು ಲೆಹೆಂಗಾ ಚೋಲಿಯ ಮಿಶ್ರಣ . ಒಂದು ಲೆಹೆಂಗಾ ಶೈಲಿಯ ಸೀರೆ ಸಾಮಾನ್ಯವಾಗಿ 4.5 ಮೀಟರ್‍ಗಳು (5 ಗಜಗಳು) 5.5 ಮೀಟರ್‍ಗಳು (6 ಗಜಗಳು) ಉದ್ದವಾಗಿದೆ. ಇದು ಧರಿಸಲು ಸಂಪೂರ್ಣವಾಗಿ ಸೀರೆಯ ರೀತಿಯಲ್ಲಿ ಇರುವುದಿಲ್ಲ. ಇದಕ್ಕೆ ಸೀರೆಗೆ ಇರುವಂತಹ ನೆರಿಗೆಗಳು ಇರುವುದಿಲ್ಲ ಆದರೆ ಸರಳವಾಗಿ ನಮಗೆ ಹೊಂದಿಕೆಯಾಗುವಂತೆ ಟಕ್ ಮಾಡಬಹುದು ಮತ್ತು ಅಲಂಕರಿಸಬಹುದು. ಸಾಂಪ್ರದಾಯಿಕ ಸೀರೆಯಂತೆಯೇ . ಲೆಹೆಂಗಾ ಶೈಲಿಯ ಸೀರೆಯನ್ನು ಪೆಟಿಕೋಟ್ ( ದಕ್ಷಿಣದಲ್ಲಿ ಪಾವಡೈ ಮತ್ತು ಭಾರತದಲ್ಲಿ ಶಾಯ ) ಮೇಲೆ ಧರಿಸಲಾಗುತ್ತದೆ, ಜೊತೆಗೆ ಇದರ ಮೇಲ್ಭಾಗಕ್ಕೆ ಚೋಲಿ ಎಂಬ ವಿನ್ಯಾಸಗೊಳಿಸಿದ ಕುಪ್ಪಸವನ್ನು ಧರಿಸಲಾಗುತ್ತದೆ. ಈ ಚೋಲಿಯು ಹೆಚ್ಚಾಗಿ ಸಾಂಪ್ರದಾಯಿಕವಾದ ಲೆಹೆಂಗಾ ಅಥವಾ ಘಾಗ್ರಾ ಚೋಲಿಯನ್ನು ಹೋಲುತ್ತವೆ. ಕೆಲವೊಮ್ಮೆ ಸಾಂಪ್ರದಾಯಿಕ ಬ್ಲೌಸ್ ಕೂಡ ಲೆಹೆಂಗಾ ಶೈಲಿಯ ಸೀರೆಯೊಂದಿಗೆ ಹೊಕಿಕೊಳ್ಳುವಾಗ ಇದಕ್ಕೆ ಕುಂದನ್, ಮಣಿಗಳು ಮತ್ತು ಕನ್ನಡಿಗಳಿಂದ ಇದನ್ನು ಅಲಂಕರಿಸಲಾಗುತ್ತದೆ.

ಲೆಹೆಂಗಾ ಶೈಲಿಯ ಸೀರೆ ಎನ್ನುವುದು ಇದು ಒಂದು ರೀತಿಯ ಸಿದ್ಧ ಉಡುಪು. ಈ ಲೆಹೆಂಗಾ ಸೀರೆಯು ಶುಭ ಸಮಾರಂಭಗಳಲ್ಲಿ ಧರಿಸುವುದಕ್ಕಾಗಿ ವಿಶೇಷವಾಗಿ ಕಲಾತ್ಮಕತೆಯಿಂದ ಹುಟ್ಟಿಕೊಂಡಿದೆ. ಈ ಉಡುಪನ್ನು ಮಹಿಳೆಯರು ಸುಲಭವಾಗಿ ಧರಿಸಬಹುದು ಅವರಿಗೆ ಅನುಕೂಲವಾಗುವಂತೆ ಸ್ಲಿಪ್ ಇರುತ್ತದೆ ಇದನ್ನು ಕೆಲವೇ ನಿಮಿಷಗಳಲ್ಲಿ ಧರಿಸಬಹುದು ಮತ್ತು ಒಂದು ಬದಿಯಲ್ಲಿ ಉದ್ದನೆಯ ಜಿಪ್ ಅನ್ನು ಇದು ಹೊಂದಿದ್ದು ಇದರಿಂದ ಮಹಿಳೆಯರು ಇದನ್ನು ಸ್ಕರ್ಟ್ ರೀತಿಯಲ್ಲಿ ಧರಿಸಬಹುದು. ಧರಿಸುವವರ ಅಳತೆಗೆ ತಕ್ಕಂತೆ ಇದನ್ನು ತಯಾರಿಸಲಾಗುತ್ತದೆ. ಇದರಿಂದ ಧರಿಸುವವರು ಅಳತೆಗೆ ತಕ್ಕಂತೆ ಜಿಪ್ ಅನ್ನು ಹೊಂದಿಸಿಕೊಳ್ಳಬಹುದು. ಮತ್ತು ಇದರ ಮೇಲೆ ಸೆರಗನ್ನು ಧರಿಸಬಹುದು. ಸಾಮಾನ್ಯವಾಗಿ ಸೀರೆಯನ್ನು ಉಟ್ಟುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ ಮಹಿಳೆಯರಿಗೆ ಇದು ಒಂದು ಸಿಧ್ಧ ಉಡುಪು. ಈ ರೀತಿಯ ಸೀರೆಯ ಸೆರಗು ಸಾಂಪ್ರದಾಯಿಕ ಲೆಹೆಂಗಾದ ಚೋಲಿಯ ದುಪ್ಪಟ್ಟಾದ ಹೋಲಿಕೆಯನ್ನು ಹೊಂದಿದೆ.

ಕಸೂತಿ ಮತ್ತು ಅಲಂಕರಣಗಳು

ಬದಲಾಯಿಸಿ

ಲೆಹೆಂಗಾ ಶೈಲಿಯ ಸೀರೆಯಲ್ಲಿ ವಿವಿಧ ಪ್ರಕಾರದ ಕಸೂತಿ ಮಾದರಿಗಳನ್ನು ಬಳಸಲಾಗುತ್ತದೆ. ಬಾಗ್, ಚಿಕಾನ್, ಕಾಶಿಡಾ, ಕಸುತಿ, ಕಾಂತಾ, ಸೊಜ್ನಿ, ಶಿಶಾ, ಝಾರ್ಡೊಜಿ ಮೊದಲಾದವುಗಳು ಲೆಹೆಂಗಾ ಶೈಲಿಯ ಸೀರೆಯಲ್ಲಿ ಸಾಮಾನ್ಯವಾಗಿ ಅಭ್ಯಾಸದ ರೀತಿಯ ಕಸೂತಿಗಳಾಗಿವೆ. ಬಾಗ್ ಎಂಬುದು ಪಂಜಾಬ್‍ನಲ್ಲಿ ಹಬ್ಬಗಳು ಮತ್ತು ವಿವಾಹಗಳಲ್ಲಿ ಧರಿಸುವುದಕ್ಕಾಗಿ ವಿಶೇಷ ರೀತಿಯ ಕಸೂತಿಯಾಗಿದೆ. ಬಾಗ್ ಕಸೂತಿ ಸಂಪೂರ್ಣವಾಗಿ ಬೇಸ್ ಫ್ಯಾಬ್ರಿಕ್ ಅನ್ನು ಮರೆಮಾಡುತ್ತದೆ ಮತ್ತು ತುಂಬಾ ಭಾರವಾದ ಕಸೂತಿಯಾಗಿದೆ, ಲೆಹೆಂಗಾ ಶೈಲಿಯ ಸೀರೆಯ ಮೇಲೆ ಈ ಕಸೂತಿಯು ಅದರ ಬಟ್ಟೆಯ ಮೇಲೆ ಅಂದವಾಗಿ ಕಾಣುತ್ತದೆ. ಮತ್ತು ಅದರ ಕಸೂತಿಯು ಮಾತ್ರವೇ ಸುಲಭವಾಗಿ ಕಾಣುತ್ತದೆ. ಕಾಶಿಡಾವು ಇದು ಕಾಶ್ಮೀರಿ ಕಸೂತಿ ವಿಧವಾಗಿದೆ. ಇದು ಅತ್ಯಂತ ವರ್ಣರಂಜಿತವಾಗಿದೆ ಮತ್ತು ಕಾಶ್ಮೀರವನ್ನು ತನ್ನ ಮಾದರಿಗಳ ಮುಖಾಂತರ ಚಿತ್ರಿಸುತ್ತದೆ. ಲೆಹೆಂಗಾ ಸೀರೆಗಳ ಮೇಲಿನ ಇತರ ಪ್ರಸಿಧ್ದ ಕಸೂತಿ ವರ್ಕರ್‍ಗಳೆಂದರೆ ಕಾಂತ ವರ್ಕರ್ಸ್ ಮತ್ತು ಬೆಂಗಳೂರಿನ ಕಸೂತಿ ವಕ್ರ್ಸ. ಬೆಳ್ಳಿ ಕಸೂತಿ, ಚಿನ್ನದ ಕಸೂತಿ, ಲೋಹದ ಮಣಿಗಳು, ನೈಜ ಮುತ್ತುಗಳು, ಮರದ ಮಣಿಗಳು, ಗಾಜಿನ ಮಣಿಗಳು, ಕನ್ನಡಿ ಕೆಲಸ, ಕಸೂತಿ ಕೆಲಸ, ಕುಂದನ್ , ಮಿನುಗುಗಳು, ಹೊಳೆಯುವ ಕಲ್ಲುಗಳು, ಝಾರ್ಡೊಜಿ ಇತ್ಯಾದಿಗಳನ್ನು ಒಳಗೊಂಡಂತೆ ಲೆಹೆಂಗಾ ಶೈಲಿ ಸೀರೆಯ ಮಾದರಿಗಳಲ್ಲಿ ವಿವಿಧ ಶ್ರೀಮಂತ ಮತ್ತು ಸೊಗಸಾದ ಅಲಂಕರಣಗಳನ್ನು ಬಳಸಲಾಗುತ್ತದೆ, ರೇಷ್ಮೆ, ಜಿಯರ್ಗೇಟ್, ಬ್ರಾಸ್ಸೋ, ಬ್ರೊಕೇಡ್, ಚಿಫಾನ್, ಕ್ರೆಪೆ ಮುಂತಾದ ಬಹುತೇಕ ಶ್ರೀಮಂತ ಬಟ್ಟೆಗಳನ್ನು ಲೆಹೆಂಗಾ ಶೈಲಿಯ ಸೀರೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಸಬಸಾಶಿ ಮುಖರ್ಜಿ ಅವರು ಲೆಹೆಂಗಾ ಶೈಲಿಯ ಸೀರೆಗೆ ಹೆಸರುವಾಸಿಯಾಗಿದ್ದಾರೆ.

ಭಾರತದಲ್ಲಿ ಲೆಹೆಂಗಾ ಶೈಲಿಯ ಸೀರೆಯ ಬಳಕೆ

ಬದಲಾಯಿಸಿ

ಸಾಂಪ್ರದಾಯಿಕ ಸೀರೆಯನ್ನು ತೊಡುವ ವಿಧಾನಕ್ಕೆ ಹೋಲಿಸಿದರೆ ಲೆಹೆಂಗಾ ಶೈಲಿಯ ಸೀರೆಯನ್ನು ಧರಿಸುವುದು ಬಹಳ ಸುಲಭ. ಈ ಸೀರೆಯ ತುದಿಯು ಪೆಟಿಕೋಟ್‍ಗೆ ಹೊಂದಿಕೊಂಡಿದ್ದು ಟಕ್ ಆಗಿರುತ್ತದೆ ಮತ್ತು ಒಂದು ಸುತ್ತು ಸೊಂಟದ ಸುತ್ತಲೂ ಸುತ್ತುವರೆದಿರುತ್ತದೆ. ಸಾಮಾನ್ಯವಾಗಿ ಸೀರೆಯನ್ನು ಶರಿಸುವಂತೆಯೇ ಇದನ್ನು ಸಹ ಧರಿಸಲಾಗುತ್ತದೆ. ಸಾಂಪ್ರದಾಯಿಕ ಸೀರೆಗಳಲ್ಲಿ ನೆರಿಗೆಗಳನ್ನು ಹೊಂದಿರುತ್ತವೆ. ಆದರೆ ಲೆಹೆಂಗಾ ಶೈಲಿಯ ಈ ಸೀರೆಗಳು ಯಾವುದೇ ನೆರಿಗೆಗಳನ್ನು ಹೊಂದದೇ ಟಕ್‍ನೊಂದಿಗೆ ತನ್ನದೇ ಆದ ಶೈಲಿಯಲ್ಲಿ ಇರುತ್ತದೆ. ಲೆಹೆಂಗಾ ಶೈಲಿಯಾ ಸೀರೆಯಲ್ಲಿ ಸಾಮಾನ್ಯ ಸೀರೆಗಳಲ್ಲಿ ಕಂಡುಬರುವಂತಹ ನೆರಿಗೆಗಳ ಬದಲಾಗಿ ಈ ಸೀರೆಗಳ ತುದಿಯಲ್ಲಿ ಅಂಚುಪಟ್ಟಿಗಳು ಅಥವಾ ದಡಿಗಳನ್ನು ಬಳಸಲಾಗುತ್ತದೆ . ಇದು ಲೆಹೆಂಗಾ ಶೈಲಿಯ ಸೀರೆಯ ವಿಶಿಷ್ಟ ಲಕ್ಷಣ. ಅಂತಿಮವಾಗಿ ಸೆರಗನ್ನು ಎಂದಿನಂತೆ ಪೂರ್ಣ ಮೈ ಮುಚ್ಚುವಂತೆ ಭುಜದ ಮೇಲೆ ಧರಿಸಲಾಗುತ್ತದೆ.

ಲೆಹೆಂಗಾ ಶೈಲಿಯ ಸೀರೆ ಮತ್ತು ಸಾಂಪ್ರದಾಯಿಕ ಸೀರೆಯ ನಡುವಿನ ವ್ಯತ್ಯಾಸವೆಂದರೆ ಸಾಂಪ್ರದಾಯಿಕ ಸೀರೆಯಲ್ಲಿ ನಾವು ನೆರಿಗೆಗಳನ್ನು ಸೀರೆಯ ಮುಂಭಾಗದಲ್ಲಿ ಬರುವಂತೆ ಧರಿಸುತ್ತೇವೆ ಆದರೆ ಲೆಹೆಂಗಾ ಮಾದರಿಯ ಸೀರೆಯಲ್ಲಿ ಇದು ಕಂಡು ಬರುವುದಿಲ್ಲ . ಮತ್ತು ಕೆಲವು ಲೆಹೆಂಗಾ ಶೈಲಿಯ ಸೀರೆಗಳು ಸೀರೆಯ ಬದಿಯಲ್ಲಿ ಹುಕ್‍ಗಳನ್ನು ಹೊಂದಿರುತ್ತವೆ, ಈ ಹುಕ್‍ಗಳನ್ನು ಬಳಸಿಕೊಂಡು ಸುಲಭವಾಗಿ ತಮ್ಮ ಅಳತೆಗೆ ತಕ್ಕಂತೆ ಸೀರೆಯನ್ನು ಧರಿಸಬಹುದು.

ಉಲ್ಲೇಖಗಳು

ಬದಲಾಯಿಸಿ

[] https://medium.com/.../the-interesting-history-of-

ಉಲ್ಲೇಖಗಳು

ಬದಲಾಯಿಸಿ