ಲುಬ್ಧಕ ನಕ್ಷತ್ರದ ಸ್ಥಾನ (ಸುತ್ತುಹಾಕಲಾಗಿದೆ)

ಲುಬ್ಧಕ ಎನ್ನುವುದು ದಕ್ಷಿಣಾಕಾಶದಲ್ಲಿರುವ ಮಹಾಶ್ವಾನ (ಕ್ಯಾನಿಸ್ ಮೇಜರ್ನಕ್ಷತ್ರಪುಂಜಕ್ಕೆ ಸೇರಿದ ಪ್ರಥಮ ನಕ್ಷತ್ರ (ಸಿರಿಯಸ್; ಆಲ್ಫ ಕ್ಯಾನಿಸ್ ಮೆಜೋರಿಸ್). ವಿಷುವದಂಶ 6ಗಂ 45ಮಿ 8.917ಸೆ;[೧][೨] ಘಂಟಾವೃತ್ತಾಂಶ 160 41‘ 06" (ದಕ್ಷಿಣ). ಕಾಂತಿಮಾನ-1.42. ನಿರಪೇಕ್ಷ ಕಾಂತಿಮಾನ +1.43.[೩] AO ರೋಹಿತದರ್ಶಕೀಯ ಪ್ರರೂಪದ್ದು. ಸೂರ್ಯನಿಂದ 8.7 ಜ್ಯೋತಿರ್ವರ್ಷ ದೂರದಲ್ಲಿದೆ. ವ್ಯಾಸ ಸೂರ್ಯವ್ಯಾಸದ 2 ಪಟ್ಟು.

ಸರಾಸರಿ ಉಷ್ಣತೆ 10,0000C. ಗೋಚರ ನಕ್ಷತ್ರಗಳ ಪೈಕಿ ಅತ್ಯಂತ ಪ್ರಕಾಶಮಾನ ನಕ್ಷತ್ರವಿದು.

ಬರಿಯ ಕಣ್ಣಿಗೆ ಇದು ಒಂಟಿ ನಕ್ಷತ್ರದಂತೆ ಕಾಣುವುದಾದರೂ ವಾಸ್ತವವಾಗಿ ಇದೊಂದು ಯಮಳ ನಕ್ಷತ್ರ. ಇದನ್ನು ಪರಿಭ್ರಮಿಸುವ ಚಿಕ್ಕ ನಕ್ಷತ್ರದ (ಶ್ವೇತಕುಬ್ಜ, ಸಿರಿಯಸ್ B) ಪ್ರಕಾಶ ಲುಬ್ಧಕದ 1/10,000 ಪಾಲು ಮಾತ್ರ. ಸಂಗಾತಿಯ ಸಾಂದ್ರತೆ ನೀರಿನ ಸಾಂದ್ರತೆಯ 60,000ರಷ್ಟು. ಆಲ್ವಿನ್ ಗ್ರಾಹಮ್ ಕ್ಲಾರ್ಕ್ (1832-97) ಎಂಬಾತ ತನ್ನ 18.5" ವ್ಯಾಸದ ನೇತ್ರಮಸೂರವನ್ನು ಪರೀಕ್ಷಿಸುತ್ತಿದ್ದಾಗ ಲುಬ್ಧಕದ ಸಂಗಾತಿಯ ಇರವು ಪತ್ತೆಯಾಯಿತು (1862).[೪] ಇದಕ್ಕೆ ಮುಂಚೆಯೇ ಜರ್ಮನಿಯ ಖಗೋಳವಿಜ್ಞಾನಿ ಫ್ರೀಡ್ರಿಕ್ ವಿಲ್‌ಹೆಲ್ಮ್ ಬೆಸ್ಸೆಲ್ (1784-1846) ಮತ್ತು ಆವರ್ಸ್ ಎಂಬ ಮತ್ತೊಬ್ಬ ಖಗೋಳವಿಜ್ಞಾನಿ ಲುಬ್ಧಕದ ನೇರಚಲನೆಯಲ್ಲಿಯ ವೈಪರೀತ್ಯಗಳನ್ನು ಅಧ್ಯಯನ ಮಾಡುವಾಗ ಇದರ ಸಂಗಾತಿಯ ಇರವಿನ ಬಗ್ಗೆ ಮುನ್ನುಡಿದಿದ್ದರು. ಗಾತ್ರ ಭೂಮಿಯ ಗಾತ್ರದ 3 ಪಟ್ಟು. ರಾಶಿ ಭೂರಾಶಿಯ 50,000 ಪಟ್ಟು. ಸಾಂದ್ರತೆ ಸೂರ್ಯನ ಸಾಂದ್ರತೆಯ 36,000ರಷ್ಟು.

ಉಲ್ಲೇಖಗಳು ಬದಲಾಯಿಸಿ

  1. Fabricius, C.; Høg, E.; Makarov, V.V.; Mason, B.D.; Wycoff, G.L.; Urban, S.E. (2002). "The Tycho double star catalogue". Astronomy and Astrophysics. 384: 180–189. Bibcode:2002A&A...384..180F. doi:10.1051/0004-6361:20011822.
  2. Gianninas, A.; Bergeron, P.; Ruiz, M.T. (2011). "A spectroscopic survey and analysis of bright, hydrogen-rich white dwarfs". The Astrophysical Journal. 743 (2): 138. arXiv:1109.3171. Bibcode:2011ApJ...743..138G. doi:10.1088/0004-637X/743/2/138. S2CID 119210906.
  3. Malkov, O. Yu. (December 2007). "Mass-luminosity relation of intermediate-mass stars". Monthly Notices of the Royal Astronomical Society. 382 (3): 1073–1086. Bibcode:2007MNRAS.382.1073M. doi:10.1111/j.1365-2966.2007.12086.x.
  4. Flammarion, Camille (August 1877). "The Companion of Sirius". The Astronomical Register. 15 (176): 186–189. Bibcode:1877AReg...15..186F.

ಹೊರಗಿನ ಕೊಂಡಿಗಳು ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಲುಬ್ಧಕ&oldid=1227944" ಇಂದ ಪಡೆಯಲ್ಪಟ್ಟಿದೆ