ಲೀಲಾ ಚಿಟ್ನಿಸ್ ರವರು (೯ ಸೆಪ್ಟೆಂಬರ್ ೧೯೦೯ - ೧೪ ಜುಲೈ ೨೦೦೩) ಭಾರತೀಯ ಚಲನಚಿತ್ರೋದ್ಯಮದಲ್ಲಿ ಆರಂಭಿಕ ನಟಿ.

ಆರಂಭಿಕ ಜೀವನ

ಬದಲಾಯಿಸಿ

ಅವರು ಕರ್ನಾಟಕದ ಧಾರವಾಡದ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರ ಮಗಳಾಗಿ ಹುಟ್ಟಿದರು. ಮೊದಲ ವಿದ್ಯಾವಂತ ಚಲನಚಿತ್ರ ನಟಿಯರಲ್ಲಿ ಒಬ್ಬರು. ಆಕೆಯ ತಂದೆ ನಾಟ್ಯಮನ್ವಂತರ್ ಎಂಬ ಮರಾಠಿ ನಾಟಕ ಕಂಪೆನಿಯ ಭಾಗವಾಗಿದ್ದರು.

ವೃತ್ತಿಜೀವನ

ಬದಲಾಯಿಸಿ

ಲೀಲಾ ಚಿಟ್ನೀಸ್ ಅವರು ತಮ್ಮ ವೃತ್ತಿಯ ಆರಂಭದಲ್ಲಿ ಉಸ್ನಾ ನವರಾ (೧೯೩೪) ಎಂಬ ಹಾಸ್ಯಚಿತ್ರದಲ್ಲಿ ನಟಿಸಿದರು ಉದ್ಯಾಚಾ ಸಂಸಾರ್ ಎಂಬ ತಮ್ಮದೇ ಆದ ಚಿತ್ರತಂಡವನ್ನು ಹೊಂದಿದ್ದರು. ತನ್ನ ನಾಲ್ಕು ಮಕ್ಕಳಿಗೆ ಆಧಾರವಾಗಿ ಇರಲು ನಟಿಸಲು ಆರಂಭಿಸಿದರು. ಅವರು ಮೊದಲಿಗೆ ಎಕ್ಸ್ಟ್ರಾ ಆಗಿದ್ದರು. ನಂತರ ಸಾಹಸ ಚಿತ್ರಗಳಲ್ಲಿ ಕೆಲಸ ಮಾಡಿದರು.

ಅವಳು ಮಹಾರಾಷ್ಟ್ರದ ಮೊದಲ ಪದವೀಧರ ಸಾಂಸಾರಿಕ ಮಹಿಳೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಚಾರ ಪಡೆದರು. . ಕೆಲಸ ಪುಣೆಯ ಪ್ರಭಾತ್ ಪಿಕ್ಚರ್ಸ್, ಮತ್ತು ರಂಜಿತ್ ಮೂವೀಟೋನ್‌ಗಳಲ್ಲಿ ಕೆಲಸ ಮಾಡಿ ಬಾಂಬೆ ಟಾಕೀಸ್ ಸ್ಟೂಡಿಯೋಗೆ ನಾಯಕಿ ಎಂದು ಸೇರಿಕೊಂಡರು. ಅವರು ಬೇಗನೆ ದೇವಿಕಾ ರಾಣಿ ಅವರನ್ನು ಹಿಂದಿಕ್ಕಿ ಮೆರೆದರು. ಬಾಂಬೆ ಟಾಕೀಸ್ ನೊಂದಿಗಿನ ಅವರ ಸಂಬಂಧ ಅವರನ್ನು ಒಬ್ಬ ತಾರೆಯಾಗಿ ಮಾಡಿತು. ದೇವಿಕಾ ರಾಣಿಯವರ ಜತೆ ನಾಯಕನಾಗಿ ಅಭಿನಯಿಸುತ್ತಿದ್ದ ಅಶೋಕ್ ಕುಮಾರ್ ಗೆ ಒಳ್ಳೆಯ ಜತೆಯಾದರು. ಅಶೋಕ್ ಕುಮಾರ್ ಈಕೆಯ ಅಭಿನಯ ಸಾಮರ್ಥ್ಯದಿಂದ ಎಷ್ಟು ಪ್ರಭಾವಿತರಾದರೆಂದರೆ ತನ್ನ ಕಣ್ಣುಗಳಿಂದಲೇ ಹೇಗೆ ಮಾತಾಡಬೇಕೆಂಬುದನ್ನು ಈಕೆಯಿಂದ ಕಲಿತೆ ಎಂದು ಒಪ್ಪಿಕೊಂಡಿದ್ದಾರೆ.

೧೯೪೦ರ ದಶಕದ ಮಧ್ಯಭಾಗದಲ್ಲಿ ಅವರ ವೃತ್ತಿಜೀವನ ಇಳಿಕೆ ಕಂಡಿತು. ಹೊಸ ಹೊಸ ನಟಿಯರು ಚಿತ್ರರಂಗವನ್ನು ಪ್ರವೇಶಿಸಿದ್ದು ಇದಕ್ಕೆ ಕಾರಣ. ೨೨ ವರ್ಷಗಳವರೆಗೆ ಆಕೆ ದಿಲೀಪ್ ಕುಮಾರ್ ಸೇರಿದಂತೆ ಅನೇಕ ನಾಯಕನಟರಿಗೆ ತಾಯಿಯಾಗಿ ಅಭಿನಯಿಸಿದರು. ಹಿಂದಿ ಚಲನಚಿತ್ರರಂಗಕ್ಕೇ ತಾಯಿಯ ಪಾತ್ರದ ಮಾದರಿಯನ್ನು ಅವರು ಸೃಜಿಸಿದರು. ವಾಸ್ತವವಾಗಿ ಈ ಪಾತ್ರಚಿತ್ರಣವನ್ನೇ ನಂತರದ ನಟಿಯರು ಮುಂದುವರೆಸಿಕೊಂಡು ಹೋದರು. ಅವರು ಚಿತ್ರಗಳಲ್ಲಿ ಅಭಿನಯಿಸುವುದನ್ನು ಮುಂದುವರೆಸಿಕೊಂಡು ಹೋದರು. ೧೯೮೦ರ ದಶಕದ ಕೊನೆಗೆ ಅಮೇರಿಕಕ್ಕೆ ತನ್ನ ಮಕ್ಕಳೊಂದಿಗೆ ಇರಲು ಹೋದರು.

೧೯೪೧ ರಲ್ಲಿ ಲಕ್ಸ್ ಸೌಂದರ್ಯ ಸಾಬೂನನ್ನು ಪ್ರಚಾರ ಮಾಡಿದ ಮೊದಲ ಭಾರತೀಯ ನಟಿ.

ಅವರು ಕನೆಕ್ಟಿಕಟ್‌ನ ಒಂದು ನರ್ಸಿಂಗ್ ಹೋಂ ನಲ್ಲಿ ೯೩ ನೇ ವಯಸ್ಸಿನಲ್ಲಿ ನಿಧನರಾದರು.

ವೈಯಕ್ತಿಕ ಜೀವನ

ಬದಲಾಯಿಸಿ

ಈಕೆಯ ತಂದೆ ಜಾತಿಪದ್ಧತಿಯನ್ನು ತಿರಸ್ಕರಿಸುವ ಧಾರ್ಮಿಕ ಚಳವಳಿಯಾದ ಬ್ರಹ್ಮ ಸಮಾಜಕ್ಕೆ ಸೇರಿಕೊಂಡಿದ್ದರು.

ಲೀಲಾ ಚಿಟ್ನೀಸ್ ಅವರು ೧೫-೧೬ ನೇ ವಯಸ್ಸಿನಲ್ಲಿ ಡಾ ಗಜಾನನ್ ಯಶವಂತ್ ಚಿಟ್ನೀಸ್ ಎಂಬ ವಯಸ್ಸಾದ ವ್ಯಕ್ತಿಯೊಂದಿಗೆ ಮದುವೆ ಆದರು. ಬೇಗ ನಾಲ್ಕು ಮಕ್ಕಳನ್ನು ಪಡೆದರು. ನಂತರ ವಿಚ್ಛೇದನ ಪಡೆದರು. ಈ ದಂಪತಿಗಳು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದರು. ಒಮ್ಮೆಯಂತೂ ಮಾನವೇಂದ್ರ ನಾಥ್ ರಾಯ್ ಎಂಬ ಮಾರ್ಕ್ಸ್ ವಾದಿ ಸ್ವಾತಂತ್ರ್ಯ ಹೋರಾಟಗಾರನಿಗೆ ಆಶ್ರಯ ಕೊಡುವ ಮೂಲಕ ಮೂಲಕ ಬಂಧನಕ್ಕೆ ಒಳಗಾಗುವ ಅಪಾಯವನ್ನು ಎದುರಿಸಿದ್ದರು. ಪತಿಯೊಂದಿಗೆ ವಿಚ್ಛೇದನದ ನಂತರ, ಅವರು ಶಾಲೆಯ ಶಿಕ್ಷಕಿಯಾಗಿ ಕೆಲಸಮಾಡಿದರು . ನಾಟಕರಂಗದಲ್ಲಿ ನಟನೆಯನ್ನು ಆರಂಭಿಸಿದರು. ಹಲವಾರು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು. , ಕಾಲೇಜು ಪದವೀಧರರನ್ನು ಮಾತ್ರ ನೇಮಿಸಿಕೊಳ್ಳುತ್ತಿದ್ದ ಮುಂಬಯಿ ಟಾಕೀಸ್ ಎಂಬ ಪ್ರಮುಖ ಚಿತ್ರನಿರ್ಮಾಣ ಸಂಸ್ಥೆಯನ್ನು ಸೇರಿಕೊಳ್ಳುವುದಕ್ಕಾಗಿ ಮುಂಬೈವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದುಕೊಂಡರು.

ಕುತೂಹಲಕರ ಸಂಗತಿ

ಬದಲಾಯಿಸಿ
  • ೧೯೪೧ರಲ್ಲಿ, ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಅವರು , ಜನಪ್ರಿಯ ಲಕ್ಸ್ ಸಾಬೂನು ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಭಾರತದ ಮೊದಲ ನಟಿಯಾಗಿ ಇತಿಹಾಸ ನಿರ್ಮಿಸಿದರು. ಆವರೆಗೆ ಕೇವಲ ಪ್ರಮುಖ ಹಾಲಿವುಡ್ ನಾಯಕಿಯರಿಗೆ ಈ ಅವಕಾಶ ದೊರೆಯುತ್ತಿತ್ತು.

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
  • ದಿಲ್ ತುಝ್ಕೋ ದಿಯಾ (೧೯೮೭)
  • ಬಿನ್ ಮಾ ಕೆ ಬಚ್ಚೆ (೧೯೮೦)
  • ಸತ್ಯಂ ಶಿವಮ್ ಸುಂದರಂ: ಲವ್ ಸಬ್ಲೈಮ್ (೧೯೭೮)
  • ಮೆಹಮಾನ್ (೧೯೭೩)
  • ಭಾಯಿ-ಭಾಯಿ (೧೯೭೦)
  • ಜೀವನ್ ಮೃತ್ಯು (೧೯೭೦)
  • ಮನ್ ಕಿ ಆಂಖೇ (೧೯೭೦)
  • ಬಡೀ ದೀದಿ (೧೯೬೯)
  • ಇಂತಕಾಂ (೧೯೬೯)
  • ಪ್ರಿನ್ಸ್ (೧೯೬೯)
  • ಔರತ್ (೧೯೬೯)
  • ದುಲ್ಹನ್ ಏಕ್ ರಾತ್ ಕಿ (೧೯೬೭)
  • ಗುನಾಹೋಂ ಕಾ ದೇವತಾ (೧೯೬೭)
  • ಮಝ್ಲಿ ದೀದಿ (೧೯೬೭)
  • ಫೂಲ್ ಔರ್ ಪತ್ಥರ್ (೧೯೬೬)
  • ವಕ್ತ್ (೧೯೬೫)
  • ಜೊಹರ್-ಮೆಹಮೂದ್ ಇನ್ ಗೋವಾ (೧೯೬೫)
  • ಗೈಡ್ (೧೯೬೫)
  • ಫರಾರ್ (೧೯೬೫)
  • ಮೊಹಬ್ಬತ್ ಇಸ್ಕೊ ಕೆಹತೇ ಹೈ (೧೯೬೫)
  • ನಯೀ ಉಮರ್ ಕಿ ನಯೀ ಫಸಲ್ (೧೯೬೫)
  • ಆಪ್ ಕಿ ಪರಛಾಯಿಯಾಂ (೧೯೬೪)
  • ದೋಸ್ತೀ (೧೯೬೪)
  • ಪೂಜಾ ಕೆ ಫೂಲ್ (೧೯೬೪)
  • ಪುನರ್ಮಿಲನ್ (೧೯೬೪)
  • ಶೆಹನಾಯಿ (೧೯೬೪)
  • ಸುಹಾಗನ್ (೧೯೬೪)
  • ಜಿಂದಗಿ (೧೯೬೪)
  • ದಿಲ್ ಹೀ ತೋ ಹೈ (೧೯೬೩) .
  • ಆಶಿಕ್ (೧೯೬೨)
  • ಅಸಲಿ-ನಕಲಿ (೧೯೬೨)
  • ಮನ್ ಮೌಜಿ (೧೯೬೨)
  • ನಾಗ್ ದೇವತಾ (೧೯೬೨)
  • ಆಸ್ ಕಾ ಪಂಛಿ (೧೯೬೧)
  • ಬಟ್ವಾರಾ (೧೯೬೧)
  • ಚಾರ್ ದೀವಾರಿ (೧೯೬೧)
  • ಧರ್ಮಪುತ್ರ(೧೯೬೧)
  • ಗಂಗಾ ಜಮುನಾ(೧೯೬೧)
  • ಹಮ್ ದೊನೋ (೧೯೬೧)
  • ಕಾಂಚ್ ಕೀ ಗುಡಿಯಾ (೧೯೬೧)
  • ಪರಖ್ (೧೯೬೦)
  • ಬೇವಕೂಫ್ (೧೯೬೦)
  • ಘೂಂಘಟ್ (೧೯೬೦)
  • ಹಮ್ ಹಿಂದೂಸ್ತಾನಿ (೧೯೬೦)
  • ಕಾಲಾ ಬಜಾರ್ (೧೯೬೦)
  • ಕೋಹಿನೂರ್ (೧೯೬೦)
  • ಮಾ ಬಾಪ್ (೧೯೬೦)
  • ಬರಖಾ (೧೯೫೯)
  • ಧೂಲ್ ಕಾ ಫೂಲ್ (೧೯೫೯)
  • ಕಲ್ ಹಮಾರಾ ಹೈ (೧೯೫೯)
  • ಮುಖ್ಯ Nashe ಮೆ ಹೂ (೧೯೫೯)
  • ಉಜಾಲ (೧೯೫೯)
  • ಫಿಲ್ ಸುಬಹ್ ಹೋಗಿ (೧೯೫೮)
  • ಪೋಸ್ಟ್ ಬಾಕ್ಸ್ ೯೯೯ (೧೯೫೮)
  • ಸಾಧನಾ (೧೯೫೮)... ಮೋಹನ್ ತಂದೆಯ ಮಾತೃ
  • ನಯಾ ದೌರ್ (೧೯೫೭) .... ಶಂಕರ್ ತಂದೆಯ ಮಾತೃ
  • ಆವಾಜ್ (೧೯೫೬)
  • ಬಸಂತ್ ಎಂಬುವರು (೧೯೫೬)
  • ಫನ್ತೂಶ್(೧೯೫೬)
  • ಆಜ್ ಕಿ ಬಾತ್ (೧೯೫೫)
  • ಬಂಧನ್ (೧೯೫೪)
  • ಹರಿ ದರ್ಶನ್ (೧೯೫೩)
  • ನಯಾ ಘರ್ (೧೯೫೩)
  • ಮಾ (೧೯೫೨)
  • ಸಂಗದಿಲ್ (೧೯೫೨)
  • ಆವಾರಾ (೧೯೫೧)
  • ಸೈಯನ್ (೧೯೫೧)
  • ಸೌದಾಮಿನಿ (೧೯೫೦)
  • ನಮೂನಾ (೧೯೪೯)
  • ಘರ್ ಘರ್ ಕೀ ಕಹಾನಿ (೧೯೪೭)
  • ಷತ್ರಂಜ್ (೧೯೪೬)
  • ಚಾರ್ ಆಂಖೇ (೧೯೪೪)
  • ರೇಖಾ (೧೯೪೩)
  • ಕಿಸೀಸೆ ನಾ ಕೆಹೆನಾ (೧೯೪೨)
  • ಝೂಲಾ(೧೯೪೧)
  • ಕಾಂಚನ್ (೧೯೪೧)
  • ಅರ್ಧಾಂಗಿ (೧೯೪೦)
  • ಆಜಾದ್ (೧೯೪೦)
  • ಬಂಧನ್ (೧೯೪೦)
  • ಘರ್ ಕಿ ರಾಣಿ (೧೯೪೦)
  • ಛೋಟಿ ಸಿ ದುನಿಯಾ (೧೯೩೯)
  • ಕಂಗನ್ (೧೯೩೯)
  • ಸಂತ ತುಲಸಿದಾಸರ (೧೯೩೯)
  • ಛೋಟೆ ಸರ್ಕಾರ್ (೧೯೩೮)
  • ಜೈಲರ್(೧೯೩೮)
  • ರಾಜ ಗೋಪಿಚಂದ್ (೧೯೩೮)
  • ಇನ್ಸಾಫ್ (೧೯೩೭)
  • ವಹಾಂ (೧೯೩೭)
  • ಛಾಯಾ (೧೯೩೬)
  • ಧುವಂಧರ್ (೧೯೩೫)
  • ಶ್ರೀ ಸತ್ಯನರಾಯಣ (೧೯೩೫)

ನಿರ್ದೇಶನ:

  • ಆಜ್ ಕಿ ಬಾತ್ (೧೯೫೫)

ನಿರ್ಮಾಣ:

  • ಆಜ್ ಕಿ ಬಾತ್ (೧೯೫೫)