ಲಿಯೊನಿ ಆರ್ಚರ್ ೨೫ ಏಪ್ರಿಲ್ ೧೯೫೫ ರಂದು ಕ್ರಾಂಬಿ, ಲಂಕಾಷೈರ್ನಲ್ಲಿ ಜನಿಸಿದರು. ಇವರು ಪ್ರಸಿದ್ಧ ಇಂಗ್ಲಿಷ್ ಲೇಖಕರಾಗಿದ್ದಾರೆ ಮತ್ತು ಎನರ್ಜಿ ಸ್ಟಡೀಸ್ನಿಂದ ಆಕ್ಸ್ಫಾರ್ ಇನ್ಸ್ಟಿಟ್ಯೂಟ್ನಲ್ಲಿರುವ ಪರಿಸರ ಅಧ್ಯಯನ]ದ ಸಂಶೋಧನಾ ಸದಸ್ಯರಾಗಿದ್ದರು. ಇವರು ೧೯೮೧ ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಆಕೆಯ ಮುಖ್ಯ ವಿಷಯಗಳೆಂದರೆ: ಗೌರವದೊಂದಿಗೆ ಪ್ರಾಚೀನ ಇತಿಹಾಸ, ಅವರು ಆಕ್ಸ್ಫರ್ಡ್ ಸೆಂಟರ್ ಫಾರ್ ಹಿಬ್ರೂ ಸ್ಟಡೀಸ್ನಲ್ಲಿ ಗ್ರೀಕೋ-ರೋಮನ್ ಅವಧಿಯ ಬಗ್ಗೆ ತನ್ನ ಯಹೂದಿ ಅಧ್ಯಯನಗಳನ್ನು ಮಾಡಿದರು. ಪರಿಸರ ಸಮಸ್ಯೆಗಳನ್ನು ಪ್ರಕಟಿಸುವುದರ ಜೊತೆಗೆ, ಪ್ರಾಚೀನ ಇತಿಹಾಸ ಮತ್ತು ಗುಲಾಮಗಿರಿಯ ಯಹೂದಿ ಮಹಿಳೆಯರನ್ನು ಒಳಗೊಂಡ ತನ್ನ ಕೃತಿಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.

ಜೀವನ ಬದಲಾಯಿಸಿ

ಸಂಶೋಧನಾ ಪತ್ರಿಕೆಗಳಲ್ಲಿ ಒಂದರಲ್ಲಿ - ದಿ ಫಸ್ಟ್ ಆಯಿಲ್ ವಾರ್: ಗಲ್ಫ್ ಮಾರುಕಟ್ಟೆಯಲ್ಲಿನ ಗಲ್ಫ್ ಬಿಕ್ಕಟ್ಟಿನ ಪರಿಣಾಮಗಳು, ಇರಾಕ್ನಿಂದ ಸದ್ದಾಂ ಹುಸೈನ್ ಆಕ್ರಮಿಸಿದ ನಂತರ ಕುವೈಟ್ನ ಜನರು ಎದುರಿಸುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತಾರೆ. ತನ್ನ ಪುಸ್ತಕಗಳಲ್ಲಿ ಒಂದಾದ- ಉಗಾರಿಟ್ ಮತ್ತು ಇಸ್ರೇಲ್ನಲ್ಲಿರುವ ಮಹಿಳೆಯರಲ್ಲಿ, ಗ್ರೇಸಿಯೊ-ರೋಮನ್ ಕಾಲದ ಯುವತಿಯರು ವಿಶೇಷವಾಗಿ ಮದುವೆಯಾಗಬಲ್ಲ ವಯಸ್ಸಿನಲ್ಲಿ ಮನೆಯಿಂದ ಹೊರಬರಲು ಅನುಮತಿ ನೀಡಲಾಗುತ್ತಿಲ್ಲ ಎಂಬುದರ ಬಗ್ಗೆ ಅವರು ಒತ್ತು ನೀಡುತ್ತಾರೆ. ಈ ಯುವತಿಯರು ಯಾವುದೇ ಇತರ ವಿಚಿತ್ರ ಗಂಡು ವ್ಯಕ್ತಿಗಳಿಗೆ ಸೀಮಿತವಾಗಿಲ್ಲ ತಿಳಿಸಲಾಯಿತು. ವುಮೆನ್ ಇನ್ ಏನ್ಷಿಯಂಟ್ ಸೊಸೈಟೀಸ್: ಆನ್ ಇಲ್ಯೂಷನ್ ಆಫ್ ದ ನೈಟ್, ಪ್ರಬಂಧಗಳ ಒಂದು ಸಂಗ್ರಹವಾಗಿದ್ದು, ಈ ಪ್ರಸ್ತುತ ಪ್ರಾಚೀನ ಮಹಿಳೆಯರ ಸಮಾಜದಲ್ಲಿ ಮಹಿಳೆಯರ ಜೀವನ ಮತ್ತು ಅವುಗಳ ಪ್ರತಿನಿಧಿಸುವಿಕೆಯ ಸಂಶೋಧನೆಗಳನ್ನು ಪ್ರತಿನಿಧಿಸುತ್ತದೆ. ಯುಕೆಯಲ್ಲಿನ ಮಹಿಳೆಯರ ಅಧ್ಯಯನದ ಬೆಳವಣಿಗೆಯಲ್ಲಿ ನಿರ್ಣಾಯಕ ಅವಧಿಗೆ ಇದು ವಿಚಾರಗಳು ಮತ್ತು ವಿಧಾನಗಳ ವಿನಿಮಯ ಮತ್ತು ಅಭಿವೃದ್ಧಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ತನ್ನ ಕೃತಿಗಳ ಮೂಲಕ ಅವರು ಪರಿಸರ ಸಮಸ್ಯೆಗಳಿಗೆ ಯಾವಾಗಲೂ ಬೆಂಬಲ ನೀಡಿದ್ದಾರೆಂದು ಸ್ಪಷ್ಟವಾಗಿದೆ, ಅದಕ್ಕಾಗಿ ಅವರು ಸಂಶೋಧನಾ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಅದೇ ರೀತಿ ಯಹೂದಿ ಹಿನ್ನೆಲೆಯನ್ನು ಹೊಂದಿದ ಮಹಿಳೆಯರ ಬಗ್ಗೆ ಅವರು ಯಾವಾಗಲೂ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಾರೆ. ಅವರ ಹೆಚ್ಚಿನ ಸಂಶೋಧನಾ ಪತ್ರಿಕೆಗಳು ಮತ್ತು ಕೃತಿಗಳು ಈ ಮಹಿಳೆಯರು ಮತ್ತು ಅವರ ಜೀವನವನ್ನು ಆಧರಿಸಿವೆ. ಅವರು ಗುಲಾಮಗಿರಿಯ ಕ್ಯೂರ್ಲಿಟಿಯನ್ನು ಸಹ ಪ್ರಮುಖವಾಗಿ ಎತ್ತಿಹಿಡಿದರು. ಗುಲಾಮಗಿರಿಯು ಮಾನವಕುಲಕ್ಕೆ ಶಾಪವಾಗಿದೆಯೆಂದು ಅವರು ಮಾತನಾಡಿದ್ದಾರೆ. ಅವರು ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು :

  • • ಅವೆವಿಲ್ ಕ್ಯಾಮೆರಾನ್ ಮತ್ತು ಅಮೆಲಿ ಕುರ್ಟ್ನಲ್ಲಿ 'ಧರ್ಮ, ಯಹೂದಿ ಮಹಿಳೆಯರಲ್ಲಿ ಪಾತ್ರ, ಗ್ರೀಕೋ-ರೋಮನ್ ಪ್ಯಾಲೆಸ್ಟೀನ್ನ ರಿಚುಯಲ್ ಮತ್ತು ಕಲ್ಟ್' ಪಾತ್ರ.
  • ಪಬ್ಲಿಕೇಷನ್ಸ್ಒಂದು ಗ್ರಂಥಸೂಚಿ.
  • • ಗುಲಾಮಗಿರಿ ಮತ್ತು ಇತರ ರೀತಿಯ ಮುಕ್ ಲೇಬರ್.
  • • ಹರ್ ಪ್ರೈಸ್ ಈಸ್ ಬಿಯಾಂಡ್ ರೂಬೀಸ್: ದಿ ಜ್ಯೂಯಿಶ್ ವುಮನ್ ಇನ್ ಗ್ರೆಕೋ-ರೋಮನ್ ಪ್ಯಾಲೆಸ್ಟೈನ್.
  • • 'ಬೌಂಡ್ ಬೈ ಬ್ಲಡ್: ಸರ್ಕನ್ಸಿಶನ್ ಅಂಡ್ ಮೆನ್ಸ್ಟ್ಯುಯಲ್ ಟ್ಯಾಬೂ ಇನ್ ಪೋಸ್ಟ್-ಎಕ್ಸಿಲಿಕ್ ಜುಡಿಸಮ್' ಇನ್ ಜಾನೆಟ್ ಮಾರ್ಟಿನ್ ಸೊಸ್ಕಿಸ್; ಈವ್ ನಂತರ: ಮಹಿಳೆಯರು, ದೇವತಾಶಾಸ್ತ್ರ ಮತ್ತು
  • ಕ್ರಿಶ್ಚಿಯನ್ ಸಂಪ್ರದಾಯ.
  • • ಅಲಿಸನ್ ಜೋಸೆಫ್ನಲ್ಲಿ 'ಜುಡೋಯೋ-ಕ್ರಿಶ್ಚಿಯನ್ ಟ್ರೆಡಿಶನ್ ನಲ್ಲಿ ಲಿಂಗ ಮತ್ತು ಆಚರಣೆ'; ಡೆವಿಲ್ಸ್ ಗೇಟ್ವೇ ಮೂಲಕ: ಮಹಿಳೆಯರು, ಧರ್ಮ ಮತ್ತು ಟ್ಯಾಬೂ.
  • • ದಿ ಗಲ್ಫ್ ಕ್ರೈಸಿಸ್: ಇಂಪ್ಲಿಕೇಶನ್ಸ್ ಫಾರ್ ದಿ ಎನ್ವಿರಾನ್ಮೆಂಟ್. ಆಕ್ಸ್ಫರ್ಡ್.
  • • ನಮ್ಮ ಆಯ್ಕೆಗಳು ಖಾಲಿಯಾಗುತ್ತದೆ: ಇಂಧನ ಸಮರ್ಥ ಕಾರುಗಳು ಮತ್ತು ಪರಿಸರ.
  • • ವಿಮಾನ ಹೊರಸೂಸುವಿಕೆ ಮತ್ತು ಪರಿಸರ. ಆಕ್ಸ್ಫರ್ಡ್: ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಸ್ಟಡೀಸ್.
  • • ಸಮುದಾಯದ ಅಭಿಪ್ರಾಯಗಳು ಮತ್ತು ಯಹೂದಿ ಇತಿಹಾಸ ಮತ್ತು ಇತಿಹಾಸಪೂರ್ವದಲ್ಲಿ ಸ್ತ್ರೀಯರ ಪ್ರತ್ಯೇಕಿಸುವಿಕೆ.
  • • ವಿಮೆನ್ ಇನ್ ಏನ್ಸಿಯಂಟ್ ಸೊಸೈಟೀಸ್: ಆನ್ ಇಲ್ಯೂಷನ್ ಆಫ್ ದಿ ನೈಟ್.
  • • ಪರಿಸರವಾದಿಗಳು ವಿರುದ್ಧ ತೈಲ ನಿರ್ಮಾಪಕರು: ರಚನಾತ್ಮಕ ಕ್ರಿಯೆಗಾಗಿ ಅಪಾರ್ಥವನ್ನು ತೆರವುಗೊಳಿಸುವುದು.
  • • ತೈಲ ಟ್ಯಾಂಕರ್ಗಳು ಮತ್ತು ಮಾಲಿನ್ಯ ಕಾನೂನುಗಳು. ಆಕ್ಸ್ಫರ್ಡ್: ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಸ್ಟಡೀಸ್.

ಉಲ್ಲೇಖಗಳು ಬದಲಾಯಿಸಿ

https://en.wikipedia.org/wiki/Leonie_Archer

    https://www.oxfordenergy.org/authors/leonie-archer/
    https://www.goodreads.com/author/show/1914290.Leonie_Archer