ಲಿಟ್ಮಸ್ ಎನ್ನುವುದು ಕಲ್ಲುಹೂವು(ಲೈಕೆನ್)ಗಳಿಂದ ತೆಗೆಯಲ್ಪಟ್ಟ ವಿವಿಧ ಬಣ್ಣದ್ರವ್ಯಗಳ ಮಿಶ್ರಣ. ಇದು ನೀರಿನಲ್ಲಿ ಕರಗುವಂತದ್ದಾಗಿದೆ. ಇದನ್ನು ಸೋಸುಕ ಕಾಗದದಲ್ಲಿ ಹೀರಿಕೊಳ್ಳುವಂತೆ ಮಾಡಿ ಅದನ್ನು pH ಸೂಚಕವನ್ನಾಗಿ ಉಪಯೋಗಿಸುವ ವಿಧಾನವು ಹಿಂದಿನಕಾಲದಿಂದ ಬಳಕೆಯಲ್ಲಿದೆ. ಇದು ವಸ್ತುವಿನ ಆಮ್ಲೀಯತೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ.[]

ಲಿಟ್ಮಸ್ ಕಾಗದ

ಇತಿಹಾಸ

ಬದಲಾಯಿಸಿ

ಇದು ಕ್ರಿ.ಶ. ೧೩೦೦ರಲ್ಲಿ ಮೊದಲ ಬಾರಿಗೆ ಸ್ಪಾನಿಶ್ ರಸಜ್ಞ 'ಅಮಾಲ್ಡಸ್ ಡಿ ವಿಲ್ಲಾ ನೋವಾ'ರಿಂದ ಬಳಸಲ್ಪಟ್ಟಿತು[]. ಹದಿನಾರನೇ ಶತಮಾನದ ನಂತರ, ನೀಲಿ ಬಣ್ಣವನ್ನು ವಿಶೇಷವಾಗಿ ನೆದರ್ಲ್ಯಾಂಡ್ ಪ್ರದೇಶದಲ್ಲಿನ ಕಲ್ಲುಹೂವುಗಳಿಂದ ತೆಗೆದುಕೊಳ್ಳಲಾಗುತ್ತದೆ[]

ನೈಸರ್ಗಿಕ ಮೂಲಗಳು

ಬದಲಾಯಿಸಿ

ಅನೇಕ ರೀತಿಯ ಲೈಕೆನ್ ಗಳಲ್ಲಿ ಲಿಟ್ಮಸ್ ಸಿಗುತ್ತದೆ. ಬಣ್ಣಗಳನ್ನು ತೆಗೆಯಲ್ಪಡುವ ಅಂತಹ ಲೈಕೆನ್ ತಳಿಗಳೆಂದರೆ Roccella tinctoria (ದಕ್ಷಿಣ ಅಮೆರಿಕಾ), Roccella fuciformis (ಅಂಗೋಲಾ ಮತ್ತು ಮಡಗಾಸ್ಕರ್, Roccella pygmaea (ಅಲ್ಜೀರಿಯಾ), Roccella phycopsis, Lecanora tartarea (ನಾರ್ವೆ, ಸ್ವೀಡನ್), Variolaria dealbata, Ochrolechia parella, Parmotrema tinctorum, ಮತ್ತು Parmelia. ಸದ್ಯದ ಪ್ರಮುಖ ಮೂಲಗಳು Roccella montagnei (ಮೊಝಾಂಬಿಕ್) ಮತ್ತು Dendrographa leucophoea (ಕ್ಯಾಲಿಫೋರ್ನಿಯ)[]

ರಾಸಾಯನಿಕ ವಿವರ

ಬದಲಾಯಿಸಿ

ಲಿಟ್ಮಸ್ ಮಿಶ್ರಣವು ಹತ್ತರಿಂದ ಹದಿನೈದು ಬಗೆಯ ಬಣ್ಣದ್ರವ್ಯಗಳನ್ನು ಹೊಂದಿದ್ದು ಇದರ CAS ಸಂಖ್ಯೆ 1393-92-6. ಇದರಲ್ಲಿನ ಬಹುಪಾಲು ಅದರಂತದ್ದೇ ಆದ ಸಂಬಂಧಿತ ಮಿಶ್ರಣ ಆರ್ಸೆನ್ ತರದ್ದಾಗಿರುತ್ತದೆ. ಆದರೆ ಪ್ರಮಾಣ ವಿಭಿನ್ನವಾಗಿರುತ್ತದೆ. ಲಿಟ್ಮಸ್‍ನ ಮುಖ್ಯ ಪದಾರ್ಥದ ದ್ರವ್ಯರಾಶಿ ೩೩೦೦ ಆಗಿರುತ್ತದೆ[] . ಲಿಟ್ಮಸ್ ನಲ್ಲಿ ಕೆಲವು ನಿರ್ದಿಷ್ಟ ಹೆಸರುಗಳನ್ನು ಹೊಂದಿದ ಕೆಲವು ವಿಭಾಗಗಳಿವೆ. ಅವುಗಳಲ್ಲಿ ಕೆಲವೆಂದರೆ erythrolitmin (ಅಥವಾ erythrolein), azolitmin, spaniolitmin, leucoorcein, and leucazolitmin. Azolitmin. ಇವು ಬಹುತೇಕ ಲಿಟ್ಮಸ್‍ನ ಪರಿಣಾಮಗಳನ್ನೇ ತೋರಿಸುತ್ತವೆ.[]

ರಾಸಾಯನಿಕ ಕ್ರಿಯೆ

ಬದಲಾಯಿಸಿ

ಕೆಂಪು ಲಿಟ್ಮಸ್ ದುರ್ಬಲ ಡಿಪ್ರೋಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದನ್ನು ಒಂದು ಪ್ರತ್ಯಾಮ್ಲ ವಸ್ತುವಿಗೆ ತೆರೆದಿಟ್ಟಾಗ, ಜಲಜನಕದ ಅಯಾನುಗಳು ಪ್ರತ್ಯಾಮ್ಲದೊಂದಿಗೆ ಪ್ರತಿಕ್ರಿಯಿಸುತ್ತವೆ. ಲಿಟ್ಮಸ್ಸಿನ ಆಮ್ಲದಿಂದ ಉತ್ಪತ್ತಿಯಾದ ಪ್ರತ್ಯಾಮ್ಲ ಧಾತುವು ನೀಲಿ ಬಣ್ಣ ಹೊಂದಿರುತ್ತದೆ. ಪ್ರತ್ಯಾಮ್ಲ (ಆಲ್ಕಲೈನ್) ದ್ರವದಲ್ಲಿ ಅದ್ದಿದ ಕೆಂಪು ಲಿಟ್ಮಸ್ ಕಾಗದವು ನೀಲಿಯಾಗಲು ಇದೇ ಕಾರಣ.

ಬಳಕೆಗಳು

ಬದಲಾಯಿಸಿ

ಒಂದು ದ್ರವದ ಆಮ್ಲೀಯತೆಯನ್ನು ಪರೀಕ್ಷಿಸುವುದಕ್ಕೆ ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ನೀರಿನಲ್ಲಿ ಕರಗಬಹುದಾದ ಅನಿಲಗಳ ಆಮ್ಲ ಮತ್ತು ಪ್ರತ್ಯಾಮ್ಲ ಗುಣಗಳನ್ನು ಸಹ ಪರೀಕ್ಷಿಸಬಹುದು. ಅನಿಲವು ನೀರಿನಲ್ಲಿ ಕರಗಿದ ನಂತರ ಲಿಟ್ಮಸ್ ಕಾಗದದ ಬಣ್ಣ ನೀಲಿಯಾಗಬಹುದು. ಉದಾಹರಣೆಗೆ, ನೀರಿನಲ್ಲಿ ಕರಗಿದ ಅಮೋನಿಯ ಅನಿಲವು ಪ್ರತ್ಯಾಮ್ಲ ಗುಣ ಹೊಂದಿದ್ದು ಲಿಟ್ಮಸ್ ಕಾಗದವನ್ನು ನೀಲಿಬಣ್ಣಕ್ಕೆ ತಿರುಗಿಸುತ್ತದೆ[].

ಲಿಟ್ಮಸ್ (pH ಸೂಚಕ) 4.5 ⇌ 8.3
pH 4.5 ಕೆಳಗೆ - ಕೆಂಪು ಬಣ್ಣ
pH 8.3 ಮೇಲೆ - ನೀಲಿ ಬಣ್ಣ

ಆಮ್ಲೀಯ ವಾತಾವರಣದಲ್ಲಿ ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿಯೂ, ಪ್ರತ್ಯಾಮ್ಲೀಯ ವಾತಾವರಣದಲ್ಲಿ ಕೆಂಪು ಲಿಟ್ಮಸ್ ಕಾಗದವು ನೀಲಿ ಬಣ್ಣದ್ದಾಗಿಯೂ ಬದಲಾಗುತ್ತದೆ. ಈ ಬಣ್ಣ ಬದಲಾವಣೆಯು pH ಶ್ರೇಣಿ 25 °C (77 °F) ತಾಪಮಾನದಲ್ಲಿ ೪.೫ - ೮.೩ ಪರಿಮಿತಿಗಳೊಳಗಿರುತ್ತದೆ. ತಟಸ್ಥ ಲಿಟ್ಮಸ್ ಕಾಗದದ ಬಣ್ಣ ನೇರಳೆಯಾಗಿರುತ್ತದೆ. ಲಿಟ್ಮಸ್ ಅನ್ನು ನೀರಿನಲ್ಲಿ ದ್ರವರೂಪವಾಗಿಯೂ ಪರಿವರ್ತಿಸಿಕೊಂಡು ಇದೇ ಕೆಲಸಕ್ಕೆ ಬಳಸಿಕೊಳ್ಳಬಹುದು.

ಆಮ್ಲ-ಪ್ರತ್ಯಾಮ್ಲದ ರಾಸಾಯನಿಕ ಕ್ರಿಯೆಯ ಹೊರತಾಗಿಯೂ ಇತರ ಕ್ರಿಯೆಗಳೂ ಕೂಡ ಲಿಟ್ಮಸ್ಸಿನಲ್ಲಿ ಬಣ್ಣ ಬದಲಾವಣೆಗೆ ಕಾರಣವಾಗಬಲ್ಲವು. ಉದಾಹರಣೆಗೆ ಕ್ಲೋರಿನ್ ಅನಿಲವು ನೀಲಿ ಲಿಟ್ಮಸ್ ಕಾಗದವನ್ನು ಬಿಳಿಯಾಗಿಸುತ್ತದೆ. ಇದು ಬ್ಲೀಚಿಂಗ್ ಪ್ರಕ್ರಿಯೆಯಾಗಿದ್ದು ಹೈಪೊಕ್ಲೋರೈಟ್ ಅನಿಲವು ಕಾರಣ. ಇದರಲ್ಲಿ ಲಿಟ್ಮಸ್ ಕಾಗದವು ಸೂಚಕದ ಪಾತ್ರವಹಿಸುವುದಿಲ್ಲ ಮತ್ತು ಈ ಕ್ರಿಯೆಯು ಪೂರ್ವಸ್ಥಿತಿಗೆ ತರಬಲ್ಲದಂತದ್ದಲ್ಲ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ litmus, ಇನ್ಫೋಪ್ಲೀಸ್.ಕಾಂ
  2. ೨.೦ ೨.೧ Manfred Neupert: Lackmus in Römpp Lexikon Chemie (German), January 31, 2013.
  3. Beecken, H.; E-M. Gottschalk; U. v Gizycki; H. Krämer; D. Maassen; H-G. Matthies; H. Musso; C. Rathjen; Ul. Zdhorszky (2003). "Orcein and Litmus". Biotechnic & Histochemistry. 78 (6): 289–302. doi:10.1080/10520290410001671362.
  4. E.T. Wolf: Vollständige Übersicht der Elementar-analytischen Untersuchungen organischer Substanzen, S.450-453, veröffentlicht 1846, Verlag E. Anton (Germany)
  5. Medical Definition of Litmus Archived 2017-03-14 ವೇಬ್ಯಾಕ್ ಮೆಷಿನ್ ನಲ್ಲಿ., ಮೆಡಿಸಿನ್ ನೆಟ್.ಕಾಂ


ಹೊರಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಲಿಟ್ಮಸ್&oldid=1171316" ಇಂದ ಪಡೆಯಲ್ಪಟ್ಟಿದೆ