ಇದೊಂದು ಮಹಿಳಾ ಸ್ವಉದ್ಯೋಗ ಸಂಸ್ಥೆ. ಇಲ್ಲಿ ಹೆಚ್ಚಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಈ ಸಂಸ್ಥೆಗೆ ಮಹಿಳಾ ಗೃಹ ಉದ್ಯೋಗಿ ಲಿಜ್ಜತ್ ಹಪ್ಪಳ ಎಂಬ ಹೆಸರಿದೆ.

ಸಂಸ್ಥಾಪಕರು

ಬದಲಾಯಿಸಿ

ಜಯಾ ವಿ ವಿತಲಿನಿ, ಬಾನುಬೇನ್ ಎನ್ ತನಾ, ಜಸ್ವನ್ತಿಬೇನ್ ಜಮನದಾಸ್ ಪೊಪಟ್, ಪಾರ್ವತಿಬೇನ್ ರಾಮ್ದಾಸ್ ಥೊಡನಿ, ಉಜಂಬೇನ್ ನರಣ್ದಾಸ್ ಕುನ್ದಲಿಯ, ಲಗುಬೇನ್ ಅಮೃತಲರ್ ಗೊಕನಿ, ಮುಂತಾದವರು..

ಈ ಸಂಸ್ಥೆ ೧೯೫೯ ಮಾರ್ಚ್ ೧೫ ರಂದು ಮುಂಬೈನಲ್ಲಿ ಆರಂಭವಯಿತು[].

ಬಂಡವಾಳ

ಬದಲಾಯಿಸಿ

ಕೇವಲ ೮೦ರೂಗಳಲ್ಲಿ ಆರಭವಾಗಿ, ಪ್ರಸ್ತುತ ರೂ೬.೫೦ ಬಿಲಿಯನ್ ಗಳಷ್ಟು ಆದಾಯವು ಲಭಿಸುತ್ತಿದೆ. ಜೊತೆಗೆ ರೂ೨೯೦ ಮಿಲಿಯನ್ ನಷ್ಟು ರಫ್ತನ್ನು ಹೊಂದಿದೆ.

ಕಾರ್ಯನಿರ್ವಾಹಣೆ

ಬದಲಾಯಿಸಿ

ಈ ಸಂಸ್ಥೆಯ ಎಲ್ಲಾ ಸದಸ್ಯರು ಕೂಡ ಇದರ ಮಾಲೀಕರಾಗಿದ್ದು, ಎಲ್ಲರೂ ಲಾಭ ಮತ್ತು ನಷ್ಟಗಳಲ್ಲಿ ಸಮಪಾಲುದಾರರಾಗಿದ್ದಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಒಳಗೊಂಡ ೨೧ ಜನರ ನಿರ್ವಾಹಣಾ ತಂಡವಿದೆ. ಇದರ ಪ್ರತಿ ಶಾಖೆಗಳಲ್ಲಿ ೧೧ ಕಾರ್ಯನಿರ್ವಹಣಾಧಿಕಾರಿಗಳಿರುತ್ತಾರೆ. ೪೩೦೦ ಕೆಲಸಗಾರರನ್ನು ಹೊಂದಿದ್ದು, ಪ್ರಸ್ತುತ ಸ್ವಾತಿ ಪರದ್ಕರ್ ಅವರು ಲಿಜ್ಜತ್ನ ಅಧ್ಯಕ್ಷರಗಿದ್ದಾರೆ.

ಶಾಖೆಗಳು

ಬದಲಾಯಿಸಿ

ಲಿಜ್ಜತ್ ಭಾರತದಾದ್ಯಂತ ಶಾಖೆಗಳನ್ನು Archived 2016-09-25 ವೇಬ್ಯಾಕ್ ಮೆಷಿನ್ ನಲ್ಲಿ. ಹೊಂದಿದೆ. ಮುಂಬೈನಲ್ಲಿ ಮುಖ್ಯ ಕಛೇರಿ ಇದೆ. ಆಂಧ್ರಪ್ರದೇಶ, ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಒರಿಸ್ಸಾ, ತಮಿಳುನಾಡು,ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮಬಂಗಾಳಗಳಲ್ಲಿ ಶಾಖೆಗಳು ವಿಸ್ತರಿಸಿವೆ.

ಉತ್ಪನ್ನಗಳು

ಬದಲಾಯಿಸಿ

ಹಪ್ಪಳಗಳು ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲಿ ವಿವಿಧ ನಮೂನೆಗಳಿವೆ - ಬೆಳ್ಳುಳ್ಳಿ, ಹೆಸರುಬೇಳೆ, ಮೆಣಸು, ಪಂಜಾಬಿ, ಇತ್ಯಾದಿ.

ಇತರೆ ಉತ್ಪನ್ನಗಳು-

  • ಕಾಕ್ರ[]
  • ಮಸಾಲೆಗಳು
  • ಬೇಕರಿ ಉತ್ಪನ್ನಗಳು
  • ಸಾಬೂನು ಉತ್ಪನ್ನಗಳು, ಇತ್ಯಾದಿ

ಈ ಸಂಸ್ಥೆಯ ಮುಖ್ಯ ಉದ್ದೆಶ, ಮಹಿಳೆಯರಿಗೆ ಉದ್ಯೋಗಾವಕಶ ನೀಡುವುದು ಮತ್ತು ಮಹಿಳಾ ಸಬಲೀಕರಣ.

ಉಲ್ಲೇಖಗಳು

ಬದಲಾಯಿಸಿ
  1. http://lijjat.com/
  2. http://www.indojin.com/shop/index.php?main_page=index&cPath=58_26
"https://kn.wikipedia.org/w/index.php?title=ಲಿಜ್ಜತ್&oldid=1118380" ಇಂದ ಪಡೆಯಲ್ಪಟ್ಟಿದೆ