23°1′35″N 72°33′39″E / 23.02639°N 72.56083°E / 23.02639; 72.56083 ಲಾ ಗಾರ್ಡನ್ ಭಾರತದ ಅಹ್ಮದಾಬಾದ್‍ನಲ್ಲಿರುವ ಒಂದು ಸಾರ್ವಜನಿಕ ಉದ್ಯಾನವಾಗಿದೆ. ಈ ಉದ್ಯಾನದ ಹೊರಗಡೆಯಿರುವ ಮಾರುಕಟ್ಟೆಯು ಸ್ಥಳೀಯರು ಮಾರಾಟಮಾಡುವ ಕರಕುಶಲ ವಸ್ತುಗಳಿಗೆ ಬಹಳ ಜನಪ್ರಿಯವಾಗಿದೆ. ಈ ಉದ್ಯಾನದ ಬದಿಗಿರುವ ರಸ್ತೆಯು ಎಲ್ಲ ಬಗೆಯ ಆಹಾರ ವಸ್ತುಗಳನ್ನು ಮಾರಾಟಮಾಡುವ ಬೀದಿ ವ್ಯಾಪಾರಿಗಳಿಂದ ತುಂಬಿರುತ್ತದೆ.

ಲಾ ಗಾರ್ಡನ್‍ನ ಖಾದ್ಯ ಮಾರುಕಟ್ಟೆಯನ್ನು ಕ್ರಮಬದ್ಧಗೊಳಿಸಲಾಗುವುದು. ವಿನ್ಯಾಸ ಮತ್ತು ನೀತಿಯನ್ನು ಸಿದ್ಧಗೊಳಿಸುವಂತೆ ಪೌರಾಯುಕ್ತರನ್ನು ಸ್ಥಾಯಿ ಸಮಿತಿಯು ಕೇಳಿಕೊಂಡಿದೆ. ಕ್ರಮಬದ್ಧಗೊಳಿಸುವಿಕೆಯು ಉದ್ಯೋಗವನ್ನು ಸೃಷ್ಟಿಸಲು ನೆರವಾಗುವುದು ಮತ್ತು ಅಲ್ಲಿ ಬಡಿಸಲಾದ ಆಹಾರದ ಗುಣಮಟ್ಟದ ಮೇಲೆ ಸೂಕ್ಷ್ಮವಾದ ಗಮನವಿರಿಸಲು ಪೌರ ನಿಕಾಯಕ್ಕೆ ನೆರವಾಗುವುದು.[]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ